![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 23, 2024, 1:04 PM IST
ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Actor) ವೃತ್ತಿ ಬದುಕಿನ ಬಹುದೊಡ್ಡ ಪ್ರಾಜೆಕ್ಟ್ ಆಗಿರುವ ‘ಕೆಜಿಎಫ್’ ಸರಣಿ ಎಷ್ಟರ ಮಟ್ಟಿಗೆ ವಿಶ್ವ ಸಿನಿಮಾರಂಗದಲ್ಲಿ ರಾರಾಜಿಸಿತು ಎನ್ನುವುದು ಗೊತ್ತೇ ಇದೆ.
‘ಕೆಜಿಎಫ್’ 1,2 ಸಿನಿಮಾಗಳ ಬಹಳ ದೊಡ್ಡ ಯಶಸ್ಸು ಯಶ್ ಅವರಿಗ ‘ರಾಕಿಭಾಯ್’ ಇಮೇಜ್ ತಂದುಕೊಟ್ಟಿತು. ಅವರನ್ನು ಇಂದು ಜನ ‘ರಾಕಿಭಾಯ್’ ಎಂದೇ ಗುರುತಿಸುತ್ತಾರೆ.
‘ಕೆಜಿಎಫ್ -3ʼ (KGF-3) ಸಿನಿಮಾ ಬರಲಿದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತಿದೆ. ಆದರೆ ಆ ಸಿನಿಮಾ ಬರುವುದು ಬಹಳ ತಡವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್ ಬಜೆಟ್ ಚಿತ್ರದ ಬಗ್ಗೆ ಯಶ್ ಮಾತು
‘ದಿ ಹಾಲಿವುಡ್ ರಿಪೋರ್ಟರ್’ಗೆ ಕೊಟ್ಟಿರುವ ಸಂದರ್ಶನದಲ್ಲಿ ಯಶ್ ‘ಕೆಜಿಎಫ್-3’ ಬಗ್ಗೆ ಮಾತನಾಡಿದ್ದಾರೆ.
ಅನುಪಮಾ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟರ್ ಶುಭಮನ್ ಗಿಲ್ ‘ಕೆಜಿಎಫ್-3’ ಯಾವಾಗ ಬರುವುದು ಎಂದು ಕೇಳಿದ್ದಾರೆ ಇದಕ್ಕೆ ನಿವೇನು ಹೇಳ್ತೀರಾ ಎಂದು ಯಶ್ ಹತ್ರ ಕೇಳಿದ್ದಾರೆ. ‘ಕೆಜಿಎಫ್’- 3 ನನ್ನ ಲಿಸ್ಟ್ ನಲ್ಲಿದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ಅವರೊಂದಿಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಯಶ್ ಹೇಳಿದ್ದಾರೆ.
‘ಕೆಜಿಎಫ್’-3 ಬರುವುದು ಪಕ್ಕಾ ಇದನ್ನು ನಾನೇ ಭರವಸೆಯಿಂದ ಹೇಳುತ್ತೇನೆ. ‘ಟಾಕ್ಸಿಕ್’ , ‘ರಾಮಾಯಣ’ ಸಿನಿಮಾದ ಬಳಿಕ ‘ಕೆಜಿಎಫ್-3’ ಬರಲಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಜತೆ ಚರ್ಚೆ ಆಗುತ್ತಿದೆ. ಅದೊಂದು ಬಿಗ್ ಪ್ರಾಜೆಕ್ಟ್ ಆಗಿದೆ. ಹಾಗಾಗಿ ಎಲ್ಲರೂ ಎಫರ್ಟ್ ಹಾಕಬೇಕಿದೆ ಎಂದು ಅವರು ಹೇಳಿದ್ದಾರೆ.
ಕೆಜಿಎಫ್ ಸರಣಿ ಸೂಪರ್ ಹಿಟ್ ಆಗಿದೆ. ಜನ ರಾಕಿ ಭಾಯ್ ಯನ್ನು ಮೆಚ್ಚಿಕೊಂಡಿದ್ದಾರೆ. ಕೆಜಿಎಫ್- 3 ಯನ್ನು ನಾವು ಎಲ್ಲರೂ ಹೆಮ್ಮೆಪಡುವ ರೀತಿ ಮಾಡಲಿದ್ದೇವೆ ಎಂದು ಯಶ್ ಹೇಳಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.