ಪುಟಾಣಿಗಳ ಜೊತೆ ಯಶ್ ಡ್ಯಾನ್ಸ್
Team Udayavani, Jun 5, 2018, 10:59 AM IST
“ಟಗರು’ ಚಿತ್ರದ ಶತದಿನ ಸಂಭ್ರಮದಲ್ಲಿ ಸಂತೋಷ್ ಚಿತ್ರಮಂದಿರ ಮುಂದೆ ಅಭಿಮಾನಿಗಳಿಗಾಗಿ ಶಿವರಾಜಕುಮಾರ್ ಡ್ಯಾನ್ಸ್ ಮಾಡಿ ರಂಜಿಸಿದ್ದರು. ಈಗ ಯಶ್ ಸರದಿ. ಹಾಗಂತ ಯಶ್ ಅಭಿಮಾನಿಗಳ ಮುಂದೆ ಸ್ಟೆಪ್ ಹಾಕಿಲ್ಲ. ಬದಲಾಗಿ ಪುಟಾಣಿಗಳ ಮುಂದೆ ಎರಡು ಸ್ಟೆಪ್ ಹಾಕಿ ಅವರನ್ನು ಖುಷಿಪಡಿಸಿದ್ದಾರೆ.
ಯಶ್ ಮಕ್ಕಳ ಜೊತೆ ಡ್ಯಾನ್ಸ್ ಮಾಡಲು ಕಾರಣವಾಗಿದ್ದು, “ನಿರ್ಮಲ’ ಸಿನಿಮಾದ ಮುಹೂರ್ತ. ಹೌದು, ಮಕ್ಕಳೇ ಸೇರಿಕೊಂಡು ತಯಾರಿಸುತ್ತಿರುವ “ನಿರ್ಮಲ’ ಎಂಬ ಸಿನಿಮಾದ ಮುಹೂರ್ತ ಸೋಮವಾರ ಆರ್ಪಿಸಿ ಲೇಔಟ್ನ ನ್ಯೂ ಕೇಂಬ್ರಿಡ್ಜ್ ಸ್ಕೂಲ್ನಲ್ಲಿ ನಡೆಯಿತು. ಈ ವೇಳೆ ಮಕ್ಕಳು ಯಶ್ ಅವರ “ಗೂಗ್ಲಿ’ ಸೇರಿದಂತೆ ಕೆಲವು ಸಿನಿಮಾಗಳ ಹಾಡಿಗೆ ನೃತ್ಯ ಮಾಡಿದರು.
ಜೊತೆಗೆ ತಮ್ಮ ಜೊತೆ ಸ್ಟೆಪ್ ಹಾಕುವಂತೆ ಯಶ್ ಅವರನ್ನು ಕೇಳಿಕೊಂಡರು ಕೂಡಾ. ಮಕ್ಕಳ ಮನವಿಗೆ ಸ್ಪಂದಿಸಿದ ಯಶ್ ಅವರ ಜೊತೆ “ಗೂಗ್ಲಿ’ ಹಾಡಿಗೆ ಸ್ಟೆಪ್ ಹಾಕಿದರು. ಯಶ್ ತಮ್ಮ ಜೊತೆ ಸ್ಟೆಪ್ ಹಾಕುತ್ತಿದ್ದಂತೆ ಮಕ್ಕಳ ಖುಷಿಯಿಂದ ಕುಣಿದು ಕುಪ್ಪಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.