ಯಶ್-ರಾಧಿಕಾ ದಂಪತಿಗೆ ಹೆಣ್ಣುಮಗು
Team Udayavani, Dec 3, 2018, 11:14 AM IST
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ ಭಾನುವಾರ ಹೆಣ್ಣು ಮಗು ಜನನವಾಗಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮುಂಜಾನೆ 6.20 ಸುಮಾರಿಗೆ ರಾಧಿಕಾ ಪಂಡಿತ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಇತ್ತೀಚೆಗಷ್ಟೇ ಯಶ್ ಮತ್ತು ರಾಧಿಕಾ ಅವರು ಇಬ್ಬರೂ ತಮಗೆ ಯಾವ ಮಗು ಬೇಕು ಎಂಬುದನ್ನು ಹೇಳಿಕೊಂಡಿದ್ದರು. ಯಶ್ ಹೆಣ್ಣುಮಗು ಇಷ್ಟ ಅಂತ ಹೇಳಿದ್ದರೆ, ರಾಧಿಕಾ ಪಂಡಿತ್ ಗಂಡು ಮಗು ಇಷ್ಟ ಎಂದು ಹೇಳಿಕೊಂಡಿದ್ದರು. ಕೊನೆಗೂ ಯಶ್ಗೆ ಇಷ್ಟವಾದ ಹೆಣ್ಣುಮಗು ಜನನವಾಗಿದೆ.
ಯಶ್ ದಂಪತಿಗೆ ಕನ್ನಡ ಚಿತ್ರರಂಗದ ಅನೇಕ ನಟ,ನಟಿಯರು, ನಿರ್ದೇಶಕ, ನಿರ್ಮಾಪಕರು, ಗೆಳೆಯರು ಮತ್ತು ಆಪ್ತರು ಶುಭಕೋರಿದ್ದಾರೆ. ಈ ನಡುವೆ, ಪ್ರಿಯಾ ಸುದೀಪ್ ಅವರು ಸಹ, ಟ್ವೀಟ್ ಮೂಲಕ ದಂಪತಿಗೆ ಶುಭ ಹಾರೈಸಿದ್ದಾರೆ. ಪವನ್ಒಡೆಯರ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.