Yash19 ಸಿನಿಮಾದಲ್ಲಿ ನಾಯಕಿಯಾಗಿ ಮೃಣಾಲ್, ಸಮಂತಾ, ಶ್ರದ್ಧಾ.. ಕಂಬ್ಯಾಕ್ ಮಾಡ್ತಾರ ಆ ನಟಿ?
ಯಾರಾಗ್ತಾರೆ ಯಶ್ 19 ಸಿನಿಮಾದ ನಾಯಕಿ?
Team Udayavani, Sep 16, 2023, 5:19 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಅವರ ಮುಂದಿನ ಸಿನಿಮಾದ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಮಾತುಕತೆ ಜೋರಾಗಿದೆ. ಇತ್ತೀಚೆಗೆ “ಯಶ್19” ಸಿನಿಮಾದ ಶೀಘ್ರದಲ್ಲಿ ಆರಂಭವಾಗಲಿದೆ ಎನ್ನುವ ಮಾತುಗಳು ಅಭಿಮಾನಿಗಳಲ್ಲಿ ಟಾಕ್ ಆಫ್ ದಿ ಟೌನ್ ವಿಚಾರವಾಗಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಯಶ್ ಗೋವಾ ಡ್ರಗ್ಸ್ ಜಾಲದ ಕುರಿತಾದ ಕಥೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ ಎನ್ನುವುದು ವೈರಲ್ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನು ಏನು ಅಪ್ಟೇಟ್ ಲಭ್ಯವಾಗದಿದ್ರೂ ಗಣೇಶ ಹಬ್ಬಕ್ಕೆ ಬಿಗ್ ಅಪ್ಡೇಟ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ನಡುವೆ ನೆಟ್ಟಿಗರು “ಯಶ್19” ನ್ನು ಮತ್ತೆ ಟ್ರೆಂಡ್ ಆಗಿಸಿದ್ದಾರೆ. ಗೀತು ಮೋಹನ್ ದಾಸ್ ಅವರ ಸಿನಿಮಾಕ್ಕೆ ನಾಯಕಿ ಯಾರು ಆಗುತ್ತಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಯಶ್ 19 ಸಿನಿಮಾದ ಅಧಿಕೃತವಾಗಿ ಇನ್ನು ಕೂಡ ಅನೌನ್ಸ್ ಆಗಿಲ್ಲ. ಆದರೆ ಇದರಲ್ಲಿ ನಾಯಕಿ ಯಾರಿರಬೇಕೆನ್ನುವುದರ ಬಗ್ಗೆ ಫ್ಯಾನ್ಸ್ ಗಳು ಚರ್ಚಿಸಿದ್ದಾರೆ.
ಪೂಜಾ ಹೆಗ್ಡೆ ಅವರು ಯಶ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಇದೀಗ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿರುವ ಯಶ್ ಅವರ ಸಿನಿಮಾದಲ್ಲಿ ಹಲವು ನಾಯಕಿಯರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ.
ಪ್ರಸ್ತುತ ಕರ್ನಾಟಕದ ಕ್ರಶ್ ಎಂದೇ ಹೇಳಲಾಗುತ್ತಿರುವ ʼಸಪ್ತ ಸಾಗರದಾಚೆʼ ಮೂಲಕ ಮೋಡಿ ಮಾಡಿರುವ ರುಕ್ಮಿಣಿ ವಸಂತ್ ಅವರು ನಾಯಕಿ ಆಗಬೇಕೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಬಾಲಿವುಡ್ ನ ಶ್ರದ್ಧಾ ಕಪೂರ್ ಅವರು ಯಶ್ 19 ಸಿನಿಮಾದ ನಾಯಕಿ ಎನ್ನುವ ಬಗ್ಗೆಯೂ ಸುದ್ದಿ ಹರಿದಾಡಿದೆ.
ʼಸೀತಾ ರಾಮಂʼ ಮೂಲಕ ಗಮನ ಸೆಳೆದ ಮೃಣಾಲ್ ಠಾಕೂರ್, ನಟಿ ಸಂಯುಕ್ತಾ ಮೆನನ್, ಬಹುಭಾಷಾ ನಟಿ ಸಮಂತಾ ಮತ್ತು ಮಾಳವಿಕಾ ಮೋಹನ್ ಅವರು ಯಶ್ ಸಿನಿಮಾದಲ್ಲಿ ನಾಯಕಿ ಆಗಿ ಆಯ್ಕೆ ಆಗುವ ರೇಸ್ ನಲ್ಲಿದ್ದಾರೆ. ಈ ನಾಯಕಿಯರ ಜೊತೆಗೆ ಕಿಯಾರಾ ಅಡ್ವಾಣಿ ಅಥವಾ ಶ್ರೀನಿಧಿ ಶೆಟ್ಟಿ ಅವರು ನಾಯಕಿ ಆಗಲಿದ್ದಾರೆ ಎಂದು ಫ್ಯಾನ್ಸ್ ಗಳು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು ಅತ್ತಿಗೆ ಅಂದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದಿದ್ದಾರೆ. ಕಡೆಯ ಬಾರಿ ಯಶ್ – ರಾಧಿಕಾ ʼಸಂತು ಸ್ಟ್ರೈಟ್ ಫಾರ್ವರ್ಡ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಾಧಿಕಾ ಅವರು ಯಶ್ ಸಿನಿಮಾದಲ್ಲಿ ನಾಯಕಿಯಾಗಿ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಬಗ್ಗೆಯೂ ಕೆಲ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಗೀತು ಮೋಹನ್ ದಾಸ್ ಅವರ ಸಿನಿಮಾದಲ್ಲಿ ಟೊವಿನೋ ಥಾಮಸ್, ಆಸಿಫ್ ಅಲಿ, ರಾಣಾ ದಗ್ಗುಬಾಟಿ ಮತ್ತು ಜಾನ್ ಅಬ್ರಹಾಂ ಅವರು ಕೂಡ ಇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಆದರೆ ಈ ಎಲ್ಲದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಅಪ್ಡೇಡ್ ಸಿಗುವ ಸಾಧ್ಯತೆಯಿದೆ.
Ravichandran avra kaldalli Bharatada eshto BigHeroines Kannadadalli act madtidru adre swalpa varsha admele,bere bhashe inda baree outdated heroines na karstidru adre eega matte aa kala bartide,namma eegina big films alli bigHeroines na nodo aase ide
What’s your opinion??#Yash19 pic.twitter.com/G4N5v5vNV7— Veeru Veeru (@Veeru_Veeru7) September 14, 2023
Cast & Crew of Yash19 ?
Hero – #YashBoss
Heroine – #Samyuktha
Antagonist – #Tovino
Costume – #Saniyasardaria
Action – #JJperry #Yash19 #YashBOSS #RockingStarYash pic.twitter.com/1w1uyNdnrM— B H M Yashwanth (@iambhmyash) August 29, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.