![Mangaluru: ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ “ಚೆರಿಯಪಾನಿ’](https://www.udayavani.com/wp-content/uploads/2025/02/Lakshadweep-415x235.jpg)
![Mangaluru: ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ “ಚೆರಿಯಪಾನಿ’](https://www.udayavani.com/wp-content/uploads/2025/02/Lakshadweep-415x235.jpg)
Team Udayavani, Oct 23, 2024, 4:14 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ʼಟಾಕ್ಸಿಕ್ʼ (Toxic) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೂಟಿಂಗ್ ಹಂತದಲ್ಲೇ ಸಿನಿಮಾ ಅನೇಕ ವಿಚಾರದಿಂದ ಸುದ್ದಿಯಾಗುತ್ತಿದೆ.
ಪಾತ್ರ ವರ್ಗದ ವಿಚಾರದಿಂದ ʼಟಾಕ್ಸಿಕ್ʼ ಗಮನ ಸೆಳೆಯುತ್ತಿದೆ. ನಯನತಾರ (Nayanthara) ಜೊತೆಗೆ ಅಕ್ಷಯ್ ಒಬೆರಾಯ್ (Akshay Oberoi), ತೆಲುಗು-ತಮಿಳು ನಟ ತಣಿಕೆಲ್ಲ ಭರಣಿ ಅವರು ಚಿತ್ರತಂಡದ ಜತೆ ಸೇರಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ (Kiara Advani) ಹುಮಾ ಖುರೇಷಿ (Human Qureshi) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ನವಾಝುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಹಾಲಿವುಡ್ ಸ್ಟಾರ್ಸ್ ಗಳು ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಮಾಲಿವುಡ್ ಡೈರೆಕ್ಟರ್ ಗೀತು ಮೋಹನ್ ದಾಸ್ (Geethu Mohandas) ದೊಡ್ಡದಾಗಿಯೇ ʼಟಾಕ್ಸಿಕ್ʼ ಸಿನಿಮಾವನ್ನು ಆರಂಭಿಸಿದ್ದಾರೆ. ಬೆಂಗಳೂರು, ಮುಂಬೈನಲ್ಲಿ ಚಿತ್ರೀಕರಣದ ನಡೆದಿದೆ. ಸಿನಿಮಾ ಅನೌನ್ಸ್ ಆದಾಗಲೇ ರಿಲೀಸ್ ಡೇಟ್ (ಏ.10,2025) ರಿವೀಲ್ ಆಗಿತ್ತು. ಆದರೆ ʼಟಾಕ್ಸಿಕ್ʼ ದೇಶಾದ್ಯಂತದ ಹಲವಾರು ಖ್ಯಾತ ಕಲಾವಿದರನ್ನು ಒಟ್ಟುಗೂಡಿಸಲಿದೆ. ಇದಕ್ಕಾಗಿ ಚಿತ್ರತಂಡ ಸಾಕಷ್ಟು ತಯಾರಿಯನ್ನು ನಡೆಸಲಿದೆ. ಈ ಕಲಾವಿದರ ದಿನಾಂಕಗಳನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ಈ ಕಾರಣದಿಂದ ಈಗಾಗಲೇ ನಿಗದಿಪಡಿಸಿರುವ ರಿಲೀಸ್ ಡೇಟ್ ಗಿಂತ ಹೆಚ್ಚಿನ ಸಮಯ ಇದಕ್ಕೆ ಬೇಕಾಗಬಹುದು ಎಂದು ವರದಿಯಾಗಿತ್ತು.
ಇದೀಗ ಈ ಬಗ್ಗೆ ಸ್ವತಃ ಯಶ್ ಅವರೇ ಸಂದರ್ಶನದಲ್ಲಿ ಅಧಿಕೃತವಾಗಿ ಹೇಳಿದ್ದಾರೆ. ʼದಿ ಹಾಲಿವುಡ್ ರಿಪೋರ್ಟರ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ.
#ToxicTheMovie is postponed officially 🥲#YashBOSS @TheNameIsYashpic.twitter.com/4ZtGoqDpMd
— Masterpiece ᵀᵒˣᶦᶜ (@yashboss_77) October 22, 2024
ಇದನ್ನೂ ಓದಿ: Actor Yash: ‘ಕೆಜಿಎಫ್-3ʼ ಬಗ್ಗೆ ಯಶ್ ಕೊಟ್ರು ಬಿಗ್ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?
“ಟಾಕ್ಸಿಕ್ ದೊಡ್ಡ ಪ್ರಾಜೆಕ್ಟ್ ಆಗಿದ್ದು, ನಾವು ಸಿನಿಮಾ ಅಂದುಕೊಂಡ ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ಸಿನಿಮಾ ಒಂದು ಸಣ್ಣ ಎಳೆಯಾಗಿ ಪ್ರಾರಂಭವಾಯಿತು. ಆದರೆ ಹೋಗುತ್ತಿದ್ದಂತೆ ಸಿನಿಮಾದ ಕಥೆ ಭಿನ್ನವಾಗಿ ಬೆಳೆಯಿತು. ಖಂಡಿತವಾಗಿ ಇದು ಗೀತು ಮೋಹನ್ ದಾಸ್ ಅವರ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರಲಿದೆ” ಎಂದು ಯಶ್ ಹೇಳಿದ್ದಾರೆ.
ನಮ್ಮ ಡೈರೆಕ್ಟರ್ ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಜನರನ್ನು ಹೇಗೆ ರಂಜಿಸಬೇಕೆನ್ನುವುದನ್ನು ಅವರು ಅರಿತುಕೊಂಡಿದ್ದಾರೆ. ಮಾಸ್ ಮತ್ತು ಎಂಟರಟೈನಮೆಂಟ್ ಎರಡನ್ನೂ ಹೇಗೆ ಹೇಳಬೇಕೆಂದು ಗೀತು ಅವರಿಗೆ ಗೊತ್ತಿದೆ. ನಾನು ಜನರನ್ನು ರಂಜಿಸಲು ಇಷ್ಟಪಡುತ್ತೇನೆ. ನಮ್ಮ ಡೈರೆಕ್ಟರ್ ಅದನ್ನೇ ವಿಶೇಷವಾಗಿ ಸ್ಕ್ರೀನ್ ಮೇಲೆ ತರೋಕೆ ಪ್ಲ್ಯಾನ್ ಮಾಡಿದ್ದಾರೆ ಎಂದು ಯಶ್ ಹೇಳಿದ್ದಾರೆ.
Maharaja: 2 ಭಾಗಗಳಲ್ಲಿ ರಾಜಮೌಳಿಯ ಮಹಾರಾಜ ಸಿನಿಮಾ?
Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ
Drug case; ಮಲಯಾಳಂ ನಟ ಶೈನ್ ಟಾಮ್ ಚಾಕೊ ಸೇರಿ 6 ಮಂದಿ ಖುಲಾಸೆ
ವಿಚ್ಛೇದನ ಬಳಿಕ ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗಿದೆ: ನಾಗಚೈತನ್ಯ
‘ವಿಡಾಮುಯಾರ್ಚಿ’ ಬಳಿಕ ‘ತಾಂಡೇಲ್ʼಗೆ ಪೈರಸಿ ಕಾಟ: ಕೆಲವೇ ಗಂಟೆಗಳಲ್ಲಿ ಫುಲ್ ಮೂವಿ ಲೀಕ್!
Mangaluru: ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ “ಚೆರಿಯಪಾನಿ’
Manipal: ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆಗೆ ಮಾಹೆ ಚಿಂತನೆ: ಡಾ| ಎಂ.ಡಿ. ವೆಂಕಟೇಶ್
Kaup: ಹರಿದ್ವಾರದಿಂದ ನವಕುಂಭಗಳಲ್ಲಿ ತರಲಾದ ಗಂಗಾಜಲಕ್ಕೆ ಅದ್ದೂರಿ ಸ್ವಾಗತ
Konaje: ನಾಪತ್ತೆಯಾದ ಮಧ್ಯವಯಸ್ಕನ ಮೃತ*ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
Missing Case ಉಡುಪಿ: ಲೈನ್‌ಸೇಲ್ ವ್ಯವಹಾರದ ವ್ಯಕ್ತಿ ನಾಪತ್ತೆ
You seem to have an Ad Blocker on.
To continue reading, please turn it off or whitelist Udayavani.