ರಿಲೀಸ್ ಆಯ್ತು  ಯೆಲ್ಲೋ ಗ್ಯಾಂಗ್ಸ್ ನ ರೋಚಕ ಟ್ರೈಲರ್…

ಮ್ಯಾಜಿಕ್ ಮಾಡಿದ ರವೀಂದ್ರ ಪರಮೇಶ್ವರಪ್ಪ!

Team Udayavani, Oct 20, 2022, 12:30 PM IST

ad 3

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರುವ ಚಿತ್ರಗಳ ಪೈಕಿ ಯೆಲ್ಲೋ ಗ್ಯಾಂಗ್ಸ್ ಚಿತ್ರವೂ ಒಂದು. ಈ ಹಿಂದೆ ಟೀಸರ್ ನೋಡಿ ನಿರೀಕ್ಷೆ ಮೂಡಿಸಿದ್ದ ಚಿತ್ರತಂಡ ಹೊಸದೊಂದು ಟ್ರೈಲರ್ ರಿಲೀಸ್ ಮಾಡಿ ಯೆಲ್ಲೂ ಗ್ಯಾಂಗ್ಸ್ ಮೇಲಿನ ಭರವಸೆಯನ್ನ ಹೆಚ್ಚಿಸಿಕೊಳ್ಳುವಂತೆ ಮಾಡಿದೆ. ಹೌದು, ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್ ಕಾಳಧನ, ಡ್ರಗ್ಸ್ ಮಾಫಿಯಾ ದ ಸುತ್ತ ಹೆಣೆದ ಕಥೆ ಎಂಬ ಸುಳಿವು ಸಿಕ್ಕಿತ್ತು. ಹಾಗಾಗಿಯೇ ಥ್ರಿಲ್ಲಿಂಗ್ ಎಲಿಮೆಂಟ್ ಹೊತ್ತ ಯೆಲ್ಲೋ ಗ್ಯಾಂಗ್ಸ್ ಮೇಲೆ ಸಿನಿಪ್ರಿಯರ ಚಿತ್ತ ನೆಟ್ಟಿತ್ತು. ಈಗ ಬಿಡುಗಡೆಗೊಂಡಿರೋ ಟ್ರೈಲರ್ ನೋಡಿದರೆ ಯಾರೇ ಆದರೂ ಮೈಮರೆಯುವಂತಿದೆ. ಈ ಸಿನಿಮಾಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿ ಈ ಟ್ರೈಲರ್ ಯಶ ಕಂಡಿದೆ.

ಯಾಕಂದ್ರೆ ಯೆಲ್ಲೋ ಗ್ಯಾಂಗ್ಸ್ ಚಿತ್ರವನ್ನ ನೋಡಲೇಬೇಕೆನಿಸೋ ರೋಚಕತೆಯ ದೃಶ್ಯ, ಡೈಲಾಗ್ ಗಳನ್ನ ಒಟ್ಟುಗೂಡಿಸಿ ಟ್ರೈಲರ್ ರೂಪಿಸಿದೆ ಚಿತ್ರತಂಡ. ಮೋಡಿ ಮಾಡುವ ಸಂಭಾಷಣೆ, ಬೆದರಿಕೆ ಕರೆಗಳು, ಚೇಸಿಂಗ್ ಸನ್ನಿವೇಶ, ಹಣಕ್ಕಾಗಿ ಹರಿಯುವ ರಕ್ತ, ಪೊಲೀಸ್ ಹೀಗೆ ಸಾಕಷ್ಟು ವಿಚಾರಗಳಿವೆ. ಟ್ರೈಲರ್ ಜನರಿಗೆ ಹಿಡಿಸಿತೆಂದರೆ, ಸಿನೆಮಾ ಅರ್ಧ ಗೆದ್ದಂತೆ. ಯಾಕಂದ್ರೆ ಒಟ್ಟು ಸಿನೆಮಾವನ್ನ ನಿಮಿಷಗಳಲ್ಲಿ ಹೇಳುವ ಮ್ಯಾಜಿಕ್ ನಡೆಯೋದು ಟ್ರೈಲರ್ ಮೂಲಕ ಮಾತ್ರ.

ಈ ವಿಚಾರದಲ್ಲಿ ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಗೆದ್ದಂತಿದೆ. ವಿಭಿನ್ನ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿರುವ ಈ ಟ್ರೈಲರ್ ನ  ದೃಶ್ಯಗಳೇ ಇದೊಂದು ಭಿನ್ನ ಜಾಡಿನ ಚಿತ್ರವೆಂಬುದನ್ನೂ ಸಾರಿ ಹೇಳಿವೆ. ನಿಖರವಾಗಿ ಹೇಳಬೇಕೆಂದರೆ,  ಇದೊಂದು ಪಕ್ಕಾ ಪ್ರಾಮಿಸಿಂಗ್ ಟ್ರೈಲರ್.

ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಕಾಳಧನ ಕೇಂದ್ರಿತವಾಗಿ ಚಲಿಸುವ ಅಪರೂಪದ ಕಥಾನಕವನ್ನೊಳಗೊಂಡಿರುವ  ಈ ಯೆಲ್ಲೋ ಗ್ಯಾಂಗ್ಸ್ ಗೆ ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ  ಸಂಭಾಷಣೆ ಬರೆದಿದ್ದು , ತಾರಾಬಳಗದಲ್ಲಿ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ಯೆಲ್ಲೋ ಗ್ಯಾಂಗ್ಸ್ ಅನ್ನು ಚಿತ್ರೀಕರಿಸಿ ಕಥೆಯ ತಾಜಾತನವನ್ನ ಕಾಪಾಡಿಕೊಳ್ಳಲಾಗಿದೆ.   ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿದ್ದು,  ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಇವಲ್ಲೆರ ಪರಿಶ್ರಮದ ಯೆಲ್ಲೋ ಗ್ಯಾಂಗ್ಸ್ ಇದೇ ನವೆಂಬರ್ ೧೧ ರಂದು ತೆರೆಕಾಣಲಿದೆ.

ರಿಲೀಸ್ ಆಯ್ತು ಯೆಲ್ಲೋ ಗ್ಯಾಂಗ್ಸ್ ನ ರೋಚಕ ಟ್ರೈಲರ್…

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

moksha Kushal recent photoshoot

Moksha Kushal: ಹಾಟ್‌ ಫೋಟೋಶೂಟ್‌ನಲ್ಲಿ ಮೋಕ್ಷಾ ಮಿಂಚು

Ramesh Aravind spoke about bhairadevi movie

Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್‌ ಅರವಿಂದ್‌

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

upendra

Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ

night road kannada movie

Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್‌ ರೋಡ್‌ʼ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.