“ಎಣ್ಣೆಗೂ ಹೆಣ್ಣಿಗೂ…’ ಹೆಣ್ಣು ಮಕ್ಕಳಿಗೊಂದು ಬ್ರೇಕಪ್ ಸಾಂಗ್
Team Udayavani, Nov 14, 2021, 11:29 AM IST
ಗಂಡು ಮಕ್ಕಳು ಲವ್ ಫೇಲ್ಯೂರ್ ಆದರೆ, ಬಾರ್ ಹೋಗಿ ಕುಡಿಯುತ್ತಾರೆ ಎಂಬ ಕಾನ್ಸೆಪ್ಟ್ನೊಂದಿಗೆ ಸಿನಿಮಾಗಳಲ್ಲಿ ಗಂಡು ಮಕ್ಕಳಿಗಾಗಿ ಸಾಕಷ್ಟು ಬ್ರೇಕಪ್ ಸಾಂಗ್‌ಗಳು ಬಂದಿವೆ. ಆದರೆ, ಬ್ರೇಕಪ್ ಹೆಣ್ಣುಮಕ್ಕಳಿಗೂ ಆಗುತ್ತದೆ. ಹಾಗಾದರೆ ಅವರಿಗೆ ಯಾಕೆ ಒಂದು ಬ್ರೇಕಪ್ ಸಾಂಗ್ ಇಡಬಾರದು ಎಂದು ಯೋಚಿಸಿದ “ಏಕ್ ಲವ್ ಯಾ’ ಚಿತ್ರತಂಡ ಹೆಣ್ಣುಮಕ್ಕಳಿಗಾಗಿ ಬ್ರೇಕಪ್ ಸಾಂಗ್‌ವೊಂದನ್ನು ಸಿದ್ಧಪಡಿಸಿದ್ದು, ಇತ್ತೀಚೆಗೆ ಆ ಹಾಡು ಬಿಡುಗಡೆಯಾಗಿದೆ.
“ಎಣ್ಣೆಗೂ ಹೆಣ್ಣಿಗೆ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ..’ ಎಂಬ ಹಾಡನ್ನು ಚಿತ್ರತಂಡ ಇತ್ತೀಚೆಗೆ ರಿಲೀಸ್ ಮಾಡಿದೆ. ಅರ್ಜುನ್ ಜನ್ಯಾ ಸಂಗೀತದ ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಇತ್ತೀಚೆಗೆ ನಡೆದ ಕಲರ್‌ಫುಲ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಜೊತೆಯಾಗಿತ್ತು. “ಏಕ್ ಲವ್ಯ ಯಾ’ ಚಿತ್ರ ಜ.21ಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ರಕ್ಷಿತಾ ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ರಕ್ಷಿತಾ, “ನಿರ್ಮಾಣ ವಿಚಾರದಲ್ಲಿ ಪ್ರೇಮ್ ಯಾವುದೇ ಟೆನÒನ್ ನನಗೆ ಕೊಟ್ಟಿಲ್ಲ. ಎಲ್ಲವನ್ನು ಅವರೇ ಹ್ಯಾಂಡಲ್ ಮಾಡಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿಯಲ್ಲಿ ನನ್ನ ಹೆಸರಿದ್ದರೂ ನನ್ನ ಅಮ್ಮ ಕೂಡಾ ಈ ಸಿನಿಮಾದ ನಿರ್ಮಾಪಕಿ. ಕೋವಿಡ್‌ನಿಂದಾಗಿ ಸಿನಿಮಾದ ಕೆಲಸ ನಿಂತಿದ್ದಾಗಲೂ ನಾವೆಲ್ಲ ಫ್ಯಾಮಿಲಿ ಥರಾ ಇದ್ದು, ಆಗಾಗ ಭೇಟಿಯಾಗುತ್ತಿದ್ದೆವು. ಈ ಸಿನಿಮಾ ನಿರ್ಮಾಣ ನನಗೆ ಖುಷಿ ಕೊಟ್ಟಿದೆ’ ಎಂದರು.
ಇದನ್ನೂ ಓದಿ:ಅಭಿಮಾನಿಗಳ ಜೊತೆ ಶಿವಣ್ಣ ಇಂದು ಭಜರಂಗಿ-2ವೀಕ್ಷಣೆ
ನಿರ್ದೇಶಕ ಪ್ರೇಮ್ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದರು. “ಏಕ್ ಲವ್ ಯಾ’ ಚಿತ್ರಕ್ಕಾಗಿ ನಾನು ಬರೆದಿರುವ ಮೂರು ಹಾಡುಗಳು ಬಿಡುಗಡೆಯಾಗಿವೆ. ಇನ್ನು ಮೂರು ಹಾಡುಗಳನ್ನು ಬೇರೆಯರು ಬರೆದಿದ್ದಾರೆ. ಅರ್ಜುನ್ ಜನ್ಯಾ ಜೊತೆ ಕೆಲಸ ಮಾಡೋದು ಖುಷಿ ಕೊಟ್ಟಿದೆ. ಅವರು ಆಸ್ಪತ್ರೆಯಲ್ಲಿದ್ದಾಗಲೂ ಹಾಡುಗಳ ಬಗ್ಗೆ ವಿಚಾರಿಸುತ್ತಿದ್ದರು. ಅರ್ಜುನ್ ಜನ್ಯಾ ಟ್ಯೂನ್‌ಗೆ ನಾನು ಸನ್ನಿವೇಶಕ್ಕೆ ತಕ್ಕಂತೆ ಬರೆದಿದ್ದೇನೆ. ಮುಂದೆ ಬೇರೆ ಕಡೆಗಳಲ್ಲಿ ಇವೆಂಟ್ ಮೂಲಕ ಸಿನಿಮಾ ಪ್ರಮೋಶನ್ ಮಾಡುವ ಆಲೋಚನೆ ಇದೆ’ ಎಂದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಗೀತದ ಸಂಪೂರ್ಣ ಕ್ರೆಡಿಟ್ ಅನ್ನು ಪ್ರೇಮ್‌ಗೆ ಕೊಟ್ಟರು. “ನಾವು ಏನೇ ಸಂಗೀತ ಮಾಡಿರಬಹುದು, ಅದರ ಪಕ್ಕಾ ಪ್ರೇಮ್ಸ್ ಎಂದು ಬಿದ್ದಾಗ ಅದರ ವ್ಯಾಲ್ಯೂ ಹೆಚ್ಚುತ್ತದೆ. ಪ್ರೇಮ್ ಯಾವುದಕ್ಕೂ ಕೊರತೆ ಮಾಡಿಲ್ಲ. ವಿದೇಶದಲ್ಲಿ ಲೈವ್ ರೆಕಾರ್ಡಿಂಗ್ ಮಾಡಿ, ದೊಡ್ಡ ಮೊತ್ತದ ಬಿಲ್ ಬಂದಾಗಲೂ ಪ್ರೇಮ್ ತಲೆಕೆಡಿಸಿಕೊಳ್ಳದೇ, ಹಾಡು ಚೆನ್ನಾಗಿ ಬಂದರೆ ಸಾಕು ಎಂದರು. ಅದು ಅವರ ಸಿನಿಮಾ, ಸಂಗೀತದ ಮೇಲಿನ ಪ್ರೀತಿ. ನಿಜಕ್ಕೂ ಇಡೀ ತಂಡ ಫ್ಯಾಮಿಲಿ ಥರಾನೇ ಇತ್ತು’ ಎನ್ನುವುದು ಅರ್ಜುನ್ ಜನ್ಯಾ ಮಾತು.
ನಾಯಕ ರಾಣಾ, ನಾಯಕಿಯರಾದ ರಚಿತಾ ರಾಮ್, ರೀಷ್ಮಾ ವೇದಿಕೆ ಮೇಲಿದ್ದರೂ ಅವರಿಗೆ ಸಿನಿಮಾ ಬಗ್ಗೆ ಮಾತನಾಡಲು ನಿರೂಪಕ ಅಕುಲ್ ಅವಕಾಶ ಮಾಡಿಕೊಡಲಿಲ್ಲ. ಅವರನ್ನು ಹಾಡು, ಡ್ಯಾನ್ಸ್, ಬ್ರೇಕಪ್ ಪ್ರಶ್ನೆಗಳಿಗಷ್ಟೇ ಸೀಮಿತಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.