ಶರಣ್‌ಗೆ ಯೋಗಾನಂದ್‌ ಮುದ್ದಾನ್‌ ಆ್ಯಕ್ಷನ್‌

Team Udayavani, Jun 8, 2017, 4:24 PM IST

4 d.jpg

ಈಗಾಗಲೇ ಬಹಳಷ್ಟು ಮಂದಿ ಸಂಭಾಷಣೆಗಾರರು ನಿರ್ದೇಶನಕ್ಕಿಳಿದಿದ್ದಾಗಿದೆ. ಈಗ ಮತ್ತೂಬ್ಬ ಸಂಭಾಷಣೆಗಾರನ ಸರದಿ.ಹೌದು, ಇದುವರೆಗೆ ಸುಮಾರು ಹದಿಮೂರು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿ ರುವ ಯೋಗಾನಂದ ಮುದ್ದಾನ್‌ ಇದೇ ಮೊದಲ ಸಲ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶರಣ್‌ ಹೀರೋ. ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಇದೊಂದು ಫ್ಯಾಮಿಲಿ ಡ್ರಾಮ ಎಂಬುದು ಯೋಗಾನಂದ್‌ ಮುದ್ದಾನ್‌ ಮಾತು. ಪೀಪಲ್‌ ಮೀಡಿಯ ಟೆಕ್‌ ಎಂಬ ಸಾಫ್ rವೇರ್‌ ಕಂಪೆನಿಯ ವಿಶ್ವ ಹಾಗೂ ವಿವೇಕ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ “ಅಲಾ ಮೊದಲಯಂದಿ’ ಮತ್ತು “ಕೇಶವ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು, ಹೊಸಬರನ್ನು ಪರಿಚಯಿಸುತ್ತಿರುವ ನಿರ್ಮಾಪಕರೂ, ಯೋಗಾನಂದ್‌ ಮುದ್ದಾನ್‌ಗೂ ನಿರ್ದೇಶನ ಮಾಡುವ ಅವಕಾಶ ಕೊಟ್ಟಿದ್ದಾರೆ. ಸದ್ಯಕ್ಕೆ ಶರಣ್‌ ಹೀರೆ‌. ಹರಿಕೃಷ್ಣ ಸಂಗೀತ ಕೊಡುತ್ತಿದ್ದಾರೆ ಅನ್ನುವುದು ಬಿಟ್ಟರೆ, ಚಿತ್ರಕ್ಕೆ ನಾಯಕಿ ಯಾರು, ಕ್ಯಾಮೆರಾ ಯಾರು ಹಿಡಿಯಲಿದ್ದಾರೆ, ಉಳಿದ ತಾರಾಬಳಗದಲ್ಲಿ ಯಾರ್ಯಾರು ಇರುತ್ತಾರೆ ಎಂಬ ಕುರಿತು ಈಗಷ್ಟೇ ಚರ್ಚೆ ನಡೆಸುತ್ತಿದ್ದಾರೆ ಯೋಗಾನಂದ್‌ ಮುದ್ದಾನ್‌.

ಯೋಗಾನಂದ್‌ ಮುದ್ದಾನ್‌ “ಬಿರುಗಾಳಿ’ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡವರು.ಅದಕ್ಕೂ ಮುನ್ನ “ಆಪ್ತಮಿತ್ರ’ ಚಿತ್ರದ ಕೆಲ ಸೀನ್‌ಗಳಿಗೂ ಸಂಭಾಷಣೆ ಬರೆದಿದ್ದರು. ಆ ಬಳಿಕ “ತುಘಲಕ್‌’, “ಚಾರುಲತಾ’, “ಚಿಂಗಾರಿ’, “ವಜ್ರಕಾಯ’, “ಭಜರಂಗಿ’, “ಮುಕುಂದ ಮುರಾರಿ’, “ಚೌಕ’, “ಕಲಾಕಾರ್‌’ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ರಿಲೀಸ್‌ ಗೆ ರೆಡಿಯಾಗಿರುವ “ಟೈಗರ್‌’ ಮತ್ತು ಚಿತ್ರೀಕರಣದಲ್ಲಿರುವ “ವಿಐಪಿ’ ಚಿತ್ರಕ್ಕೂ ಇವರದೇ ಮಾತುಗಳಿವೆ. ಯೋಗಾನಂದ್‌ಗೆ ಮೊದಲ ನಿರ್ದೇಶನ ಮಾಡಿದರೆ, ಅದು ಶರಣ್‌ಗೆ ಮಾಡಬೇಕು ಅಂತ ನಿರ್ಧರಿಸಿದ್ದರಂತೆ. ಮೂರು ವರ್ಷಗಳ ಹಿಂದೆಯೇ ಆ ಕುರಿತು ಮಾತುಕತೆ ಆಗಿತ್ತಂತೆ. ಕಾರಣಾಂತರದಿಂದ ಇಬ್ಬರು ಸೇರಿ ಸಿನಿಮಾ ಮಾಡಲು ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆಯಂತೆ.

ಇಡೀ ಸಿನಿಮಾ ಅಮೇರಿಕಾದಲ್ಲಿ ನಡೆಯಲಿದ್ದು, ಕ್ಲೈಮ್ಯಾಕ್ಸ್‌ ಭಾಗ ಇಲ್ಲಿ ನಡೆಯಲಿದೆಯಂತೆ. ಶರಣ್‌ ಗೆ ಇದು ಹೊಸ ಜಾನರ್‌ ಸ್ಟೋರಿಯಾಗಿದ್ದು, ಸಿಂಗಲ್‌ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲೂ ಜನರನ್ನು ಸೆಳೆಯೋ ಚಿತ್ರಕ್ಕೆ ಕೈ ಹಾಕಿರುವ ಯೋಗಾನಂದ್‌ ಮುದ್ದಾನ್‌ ಜತೆಗೆ ಚಿತ್ರಕಥೆಯಲ್ಲಿ ಜನಾರ್ದನ್‌ ಮಹರ್ಷಿ ಸಾಥ್‌ ಕೊಡುತ್ತಿದ್ದಾರಂತೆ. ಕೆ.ಎಂ.ಪ್ರಕಾಶ್‌ ಕತ್ತರಿ ಪ್ರಯೋಗ ಇರಲಿದೆ. ಇನ್ನು, ಚಿತ್ರಕ್ಕೆ ಜುಲೈ ಅಂತ್ಯದಲ್ಲಿ ಚಾಲನೆ ಸಿಗಲಿದೆ.
 
ಟಾಪ್ ನ್ಯೂಸ್

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.