ಯೋಗಿ ಹೊಸ ವೇಷ


Team Udayavani, Dec 15, 2018, 11:36 AM IST

lambodhara.jpg

ಲೂಸ್‌ ಮಾದ ಯೋಗಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ, ಇನ್ನೇನೋ ಕಲ್ಪನೆ ಮಾಡಿಕೊಳ್ಳುವುದು ಬೇಡ. ಯೋಗಿ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಪಕ್ಕಾ ಲೋಕಲ್‌ ಪಾತ್ರಗಳು. ಅದಕ್ಕೆ ಕಾರಣ, ಅವರು ಇದುವರೆಗೆ ಮಾಡಿಕೊಂಡು ಬಂದಂತಹ ಪಾತ್ರಗಳು ಸಹ ಹಾಗೆಯೇ ಇದ್ದವು. ಅವರ “ದುನಿಯಾ’ ಚಿತ್ರದಿಂದ ಹಿಡಿದು “ಜಾನಿ ಜಾನಿ ಜನಾರ್ದನ್‌’ ಚಿತ್ರಗಳವರೆಗೂ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರೊಳಗಿನ ಅಗಾಧ ಪ್ರತಿಭೆ ಅನಾವರಣವಾಗಿಲ್ಲ. ಕಾರಣ, ಅಂತಹ ಅವಕಾಶ ಕೂಡ ಅವರಿಗೆ ಸಿಕ್ಕಿಲ್ಲ.

ಈಗ ಅವರು “ಲಂಬೋದರ’ನ ಜಪ ಮಾಡುತ್ತಿದ್ದಾರೆ. ಹೌದು, ಯೋಗಿ ಸದ್ಯಕ್ಕೆ “ಲಂಬೋದರ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ನಂಬಿಕೆಗೆ ಕಾರಣ, “ಲಂಬೋದರ’ ಒಂದು ಹೊಸತನದ ಚಿತ್ರ ಹಾಗು ವಿಭಿನ್ನ ಪಾತ್ರ ಇರುವುದು. ಯೋಗಿ ಒಂದು ಗ್ಯಾಪ್‌ ಪಡೆದಿದ್ದರು. ಆ ಗ್ಯಾಪ್‌ನಲ್ಲಿ ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದರು. ಬಂದ ಅದೆಷ್ಟೋ ಕಥೆಗಳನ್ನು ಪಕಕ್ಕೆ ಸರಿಸಿದ್ದರು. ಆದರೆ, “ಲಂಬೋದರ’ ಕಥೆ ಕೇಳಿದ ಕೂಡಲೇ, ಒಪ್ಪಿಕೊಂಡರು. ಈ ಚಿತ್ರದಲ್ಲಿ ಯೋಗಿಗೆ ವಿಭಿನ್ನ ಪಾತ್ರ. ಅದರಲ್ಲೂ ಅವರಿಲ್ಲಿ ಮೂರ್‍ನಾಲ್ಕು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪದೇ ಪದೇ ಬಂದ ಪಾತ್ರಗಳನ್ನೇ ಮಾಡುತ್ತಿದ್ದರಿಂದ ಯೋಗಿಗೂ ಹೊಸತನ ಬೇಕಿತ್ತು. ಒಂದು ಬದಲಾವಣೆಯನ್ನೂ ಬಯಸಿದ್ದರು. ಆ ಹೊಸತನ ಮತ್ತು ಬದಲಾವಣೆ “ಲಂಬೋದರ’ ಚಿತ್ರದಲ್ಲಿದೆ. ಹಾಗಾಗಿ ಯೋಗಿ ಅವರಿಗೆ “ಲಂಬೋದರ’ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಅಂದಹಾಗೆ, ಈ ಚಿತ್ರಕ್ಕೊಂದು ಅಡಿಬರಹವಿದೆ. “ಬಸವನಗುಡಿ, ಬೆಂಗಳೂರು ಎಂಬ ಅಡಿಬರಹ ನೋಡಿದವರಿಗೆ, ಇದು ಆ ಭಾಗದಲ್ಲೇ ನಡೆಯುವ ಒಂದು ಕಥೆ ಎಂಬುದು ಸ್ಪಷ್ಟವಾಗುತ್ತದೆ.  

ಕೃಷ್ಣರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ವಿಶ್ವೇಶ್ವರ್‌ ಪಿ ಹಾಗು ರಾಘವೇಂದ್ರ ಭಟ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್‌ ಶರ್ಮ ಸಂಗೀತವಿದೆ. ಅರವಿಂದ್‌ ಎಸ್‌. ಕಶ್ಯಪ್‌ ಛಾಯಾಗ್ರಹಣ ಮಾಡಿದರೆ, ವಿಕ್ರಂ ಮೋರ್‌ ಸಾಹಸವಿದೆ. ಕೆ.ಕೃಷ್ಣರಾಜ್‌ ಮತ್ತು ಶೈಲೇಶ್‌ ರಾಜ್‌ ಸಂಭಾಷಣೆ ಬರೆದಿದ್ದಾರೆ. ಆಕಾಂಕ್ಷ ನಾಯಕಿಯಾದರೆ, ಉಳಿದಂತೆ ಅಚ್ಯುತ, ಅರುಣಾ ಬಾಲರಾಜ್‌, ಮಂಜುನಾಥ್‌ ಹೆಗ್ಡೆ, ಧರ್ಮಣ್ಣ ನಟಿಸಿದ್ದಾರೆ.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.