ಯೋಗಿ ಈಗ ಕಂಸ
ಸಿನಿ ಕೆರಿಯರ್‌ನಲ್ಲೇ ಬಿಗ್‌ಬಜೆಟ್ ಚಿತ್ರ
Team Udayavani, Jul 14, 2019, 3:03 AM IST
ನಟ ಯೋಗಿ ಅಭಿನಯದ “ಲಂಬೋದರ’ ಎಲ್ಲರ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಗ್ಯಾಪ್ ನಂತರ ಬಂದ ಚಿತ್ರ ಅದಾಗಿದ್ದರೂ, ಒಳ್ಳೆಯ ಪ್ರತಿಕ್ರಿಯೆಗೆ ಪಾತ್ರವಾಗಿತ್ತು. ಅದಾದ ಬಳಿಕ ಯೋಗಿ “ಲಂಕೆ’ ಚಿತ್ರದ ಮೂಲಕ ಸುದ್ದಿಯಾದರು. ಆ ಚಿತ್ರ ಇನ್ನೇನು ಮುಗಿಯುವ ಹಂತ ತಲುಪಿದೆ. ಈ ತಿಂಗಳಾಂತ್ಯದಲ್ಲಿ ಅದು ಪೂರ್ಣಗೊಳ್ಳಲಿದೆ.
ಹಾಗಾದರೆ, ಯೋಗಿ ಅವರ ಮುಂದಿನ ಚಿತ್ರ ಯಾವುದು? ಈ ಪ್ರಶ್ನೆಗೆ ಉತ್ತರ, ಕೈಯಲ್ಲಿ ಬರೋಬ್ಬರು ಐದು ಚಿತ್ರಗಳಿವೆ. ಆ ಪೈಕಿ ಯಾವುದನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವುದಕ್ಕೆ ಈಗಲೇ ಉತ್ತರವಿಲ್ಲ. ಆದರೆ, ಅವರ ಸಿನಿಮಾ ಕೆರಿಯರ್‌ನಲ್ಲೇ ಬಿಗ್‌ಬಜೆಟ್ ಚಿತ್ರವೊಂದನ್ನು ಮಾಡುತ್ತಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ.
ಹೌದು, ಯೋಗಿ ತಮ್ಮದ್ದೊಂದು ಹೊಸ ಬ್ಯಾನರ್ ಹುಟ್ಟುಹಾಕಿದ್ದಾರೆ. ಆ ಬ್ಯಾನರ್ ಮೂಲಕ ಬಿಗ್‌ಬಜೆಟ್ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. ಅಂದಹಾಗೆ, ಅವರ ಹೊಸ ಬ್ಯಾನರ್‌ಗೆ “ಎಂವೈ ಫಿಲ್ಮ್ ಫ್ಯಾಕ್ಟರಿ’ ಎಂದು ನಾಮಕರಣ ಮಾಡಲಾಗಿದೆ. ಈ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರಕ್ಕೆ “ಕಂಸ’ ಎಂದ ಹೆಸರಿಟ್ಟಿದ್ದಾರೆ.
ಈ ಕುರಿತು ಸ್ವತಃ ಯೋಗಿ “ಉದಯವಾಣಿ’ಗೆ ಹೇಳಿದ್ದಿಷ್ಟು. ” ಈಗಾಗಲೇ ನಮ್ಮ ಹೋಮ್ ಬ್ಯಾನರ್‌ನಲ್ಲಿ ಕೆಲ ಚಿತ್ರಗಳು ತಯಾರಾಗಿವೆ. ಮುಂದೆ ಯಾವ ಚಿತ್ರ ತಯಾರಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ನಾನೀಗ ಎಂ.ವೈ ಫಿಲ್ಮ್ ಫ್ಯಾಕ್ಟರಿ ಎಂಬ ಹೊಸ ಬ್ಯಾನರ್ ಶುರುಮಾಡಿದ್ದೇನೆ.
ಮಹೇಶ್, ಯೋಗೇಶ್ ಎಂಬ ಹೆಸರಿನ ಮೊದಲ ಅಕ್ಷರ ತೆಗೆದು ಇಟ್ಟಿರುವ ಬ್ಯಾನರ್ ಹೆಸರದು. ಈ ಬ್ಯಾನರ್ ಮೂಲಕ “ಕಂಸ’ ಎಂಬ ಚಿತ್ರ ಮಾಡುತ್ತಿದ್ದೇನೆ. ನನ್ನ ಕೆರಿಯರ್‌ನಲ್ಲೇ “ಕಂಸ’ ಬಿಗ್ ಬಜೆಟ್ ಸಿನಿಮಾ ಆಗಲಿದ್ದು, ಸುಮಾರು 15 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಾಗಲಿದೆ. ಸಿನಿಮಾ ಶುರುವಾದಾಗ, ಇನ್ನೂ ಹೆಚ್ಚು ಬಜೆಟ್ ಆದರೂ ಆಗಬಹುದು.
ಚಿತ್ರಕ್ಕೆ ರಂಜಿತ್‌ಕುಮಾರ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಅವರದೇ. ಅದೊಂದು ಪಕ್ಕಾ ಮಾಸ್ ಸಬ್ಜೆಕ್ಟ್ . ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ರಾಮ್-ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಇರಲಿದೆ. ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ಈಗಾಗಲೇ ಸಾಕಷ್ಟು ತಯಾರಿ ನಡೆಯುತ್ತಿದೆ.
ಎಲ್ಲಾ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಚಿತ್ರ ಶುರುವಾಗಬಹುದು. ಚಿತ್ರಕ್ಕೆ ಸಾನ್ವಿ ಅವರನ್ನು ನಾಯಕಿಯನ್ನಾಗಿಸುವ ಯೋಚನೆ ಇದೆ. ಆ ಬಗ್ಗೆ ಪಕ್ಕಾ ಆಗಿಲ್ಲ. ಉಳಿದಂತೆ ಪಾತ್ರಗಳ ಆಯ್ಕೆಯಾಗಬೇಕಿದೆ. ನನ್ನ ಸಹೋದರ ಮಹೇಶ್, ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ‘ ಎಂದು ವಿವರ ಕೊಡುತ್ತಾರೆ ಯೋಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.