ಯೋಗಿಗೆ ಟೈಟಲ್ ಯೋಗ
Team Udayavani, Mar 12, 2018, 11:18 AM IST
ಅಂತೂ ದ್ವಾರಕೀಶ್ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರಕ್ಕೆ ಹೆಸರು ಸಿಕ್ಕಿದೆ. ಚಿತ್ರತಂಡವು “ಅಮ್ಮಾ ಐ ಲವ್ ಯೂ’ ಎಂಬ ಟೈಟಲ್ ಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿತ್ತು. ಈಗ ಮಂಡಳಿಯು ಚಿತ್ರತಂಡಕ್ಕೆ ಆ ಹೆಸರು ನೀಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.
“ಅಮ್ಮಾ ಐ ಲವ್ ಯೂ’ ಎಂಬ ಹೆಸರಿನಲ್ಲೇ ಚಿತ್ರದ ಚಿತ್ರೀಕರಣವಾಗಿದ್ದರೂ ಮತ್ತು ಅದೇ ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡದವರು ಹೊರಟಿದ್ದರೂ, ಚಿತ್ರತಂಡದವರಿಗೆ ಟೈಟಲ್ ಸಿಕ್ಕಿರಲಿಲ್ಲ. ಇನ್ನೂ ಹೆಸರು ಸಿಗದ ಕಾರಣ, ಪ್ರಚಾರವನ್ನೂ ಮಾಡುವಂತಿರಲಿಲ್ಲ. ಇಷ್ಟಕ್ಕೂ ಯಾಕೆ ಟೈಟಲ್ ಸಿಗಲಿಲ್ಲ ಎಂದರೆ ಅದಕ್ಕೆ ಕಾರಣವೂ ಇದೆ.
ಅದೇನೆಂದರೆ, ವಾಣಿಜ್ಯ ಮಂಡಳಿಯಲ್ಲಿ “ಅಮ್ಮ’ ಎಂಬ ಹೆಸರು ಬೇರೆ ನಿರ್ಮಾಪಕರ ಹೆಸರಿನಲ್ಲಿ ದಾಖಲಾಗಿತ್ತು. ಹಾಗಾಗಿ ಸ್ವಲ್ಪ ಗೊಂದಲವಾಗಿ ಚಿತ್ರದ ಹೆಸರು ಸಿಕ್ಕಿರಲಿಲ್ಲ. ಈಗ ಆ ಟೈಟಲ್‌ನ ಅವಧಿ ಮುಗಿದಿರುವುದರಿಂದ, ವಾಣಿಜ್ಯ ಮಂಡಳಿಯು ದ್ವಾರಕೀಶ್ ಚಿತ್ರ ಅವರಿಗೆ “ಅಮ್ಮಾ ಐ ಲವ್ ಯೂ’ ಹೆಸರನ್ನು ಕೊಟ್ಟಿದೆ.
ಈಗ ಹೆಸರು ಸಿಕ್ಕಿರುವುದರಿಂದ, ಚಿತ್ರದ ಪ್ರಚಾರವನ್ನು ಆದಷ್ಟು ಬೇಗ ಶುರು ಮಾಡಿ, ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಯೋಗಿ ದ್ವಾರಕೀಶ್. ಅಂದ ಹಾಗೆ, “ಅಮ್ಮಾ ಐ ಲವ್ ಯೂ’ ಚಿತ್ರವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದು, ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹೆಮ್ಮಾಡಿ; 4 ರಸ್ತೆ ಸೇರುವಲ್ಲಿ ಒಂದೂ ತಂಗುದಾಣವಿಲ್ಲ!
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.