ಮತ್ತೊಂದು ಹೊಸ ಚಿತ್ರಕ್ಕೆ ಯೋಗಿ
ಎನ್.ಕುಮಾರ್ ನಿರ್ಮಾಣದ ಚಿತ್ರಕ್ಕೆ ಅನಂತ್‌ರಾಜು ನಿರ್ದೇಶನ
Team Udayavani, Aug 3, 2019, 3:00 AM IST
ಇತ್ತೀಚೆಗಷ್ಟೇ ನಟ ಯೋಗಿ ತಮ್ಮ ಸಿನಿ ಕೆರಿಯರ್‌ನಲ್ಲೇ ಬಿಗ್‌ಬಜೆಟ್ ಚಿತ್ರವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರ ಸೆಟ್ಟೇರುವ ಮುನ್ನವೇ ಯೋಗಿ ಅವರು, ಮತ್ತೂಂದು ಹೊಸ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೌದು, ಯೋಗಿ ಹೊಸ ಚಿತ್ರ ಒಪ್ಪಿದ್ದು, ಆ ಚಿತ್ರವನ್ನು ನಿರ್ಮಾಪಕ ಎನ್.ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ಅನಂತ್‌ರಾಜು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ನಿರ್ದೇಶಕ ಅನಂತ್‌ರಾಜು ಹೇಳುವಂತೆ, “ಇದೊಂದು ಪಕ್ಕಾ ದೇಸಿ ಕಥೆ. ಅದರಲ್ಲೂ ಈಗಿನ ಮಾಡರ್ನ್ ಹುಡುಗರ ಲವ್‌ಸ್ಟೋರಿ ಇಲ್ಲಿರಲಿದೆ.
ನಾಲ್ವರು ಹುಡುಗರು ಹುಡುಗಿಯೊಬ್ಬಳ ಹಿಂದೆ ಹೋದಾಗ, ಏನೆಲ್ಲಾ ಆಗುತ್ತೆ ಅನ್ನೋದು ಒನ್‌ಲೈನ್. ಆ ಹುಡುಗರ ಬದುಕಲ್ಲಿ ಹುಡುಗಿ ಎಂಟ್ರಿ ಕೊಟ್ಟಾಗ, ಹೇಗೆಲ್ಲಾ ಬದಲಾಗುತ್ತಾರೆ ಎಂಬುದನ್ನು, ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಇಲ್ಲಿ ಮಾಸ್ ಅಂಶಗಳೂ ಇವೆ, ಹಾಗೆಯೇ ಕ್ಲಾಸ್ ಎಲಿಮೆಂಟ್ಸ್ ಕೂಡ ಇದೆ’ ಎಂದು ವಿವರ ಕೊಡುತ್ತಾರೆ ಅನಂತ್‌ರಾಜು.
ಯೋಗೀಶ್ ಹುಣಸೂರು ಈ ಕಥೆ ಬರೆದಿದ್ದು, ಆ ಕಥೆಗೆ ನಿರ್ದೇಶಕರು ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕುಮಟಾ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಅಂತ್ಯದಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂಬುದು ನಿರ್ದೇಶಕ ಅನಂತ್‌ರಾಜು ಅವರ ಮಾತು.
ಅಂದಹಾಗೆ, ಯೋಗಿ ಈಗ “ಲಂಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಎನ್.ಕುಮಾರ್ ನಿರ್ಮಾಣದ ಚಿತ್ರದಲ್ಲಿ ಯೋಗಿ ತೊಗಡಿಸಿಕೊಳ್ಳಲಿದ್ದಾರೆ. ಅದಾದ ಬಳಿಕ ಅವರು ತಮ್ಮ “ಎಂವೈ ಫಿಲ್ಮ್ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರ ಮಾಡಲಿದ್ದಾರೆ. ಚಿತ್ರಕ್ಕೆ ರಂಜಿತ್‌ಕುಮಾರ್ ನಿರ್ದೇಶಕರು.
ಕಥೆ, ಚಿತ್ರಕಥೆ, ಸಂಭಾಷಣೆ ಅವರದೇ. ಅದೊಂದು ಪಕ್ಕಾ ಮಾಸ್ ಸಬ್ಜೆಕ್ಟ್ ಆಗಿದ್ದು, ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ರಾಮ್-ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಇರಲಿದೆ. ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ಈಗಾಗಲೇ ಸಾಕಷ್ಟು ತಯಾರಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.