ಯಡಿಯೂರಲ್ಲಿ ನಡೆಯಿತು ಯೋಗಿ ನಿಶ್ಚಿತಾರ್ಥ
Team Udayavani, Jun 12, 2017, 11:47 AM IST
“ಲೂಸ್ಮಾದ’ ಯೋಗೇಶ್ಗೆ ಹುಡುಗಿ ಫಿಕ್ಸ್ ಆಗಿರೋದು, ಅಣ್ಣನ ಮದುವೆ ನಂತರ ತನ್ನ ಮದುವೆ ಎಂಬುದಾಗಿ ಯೋಗಿ ಹೇಳಿರೋದೆಲ್ಲವೂ ನಿಮಗೆ ಗೊತ್ತೇ ಇದೆ. ಆದರೆ, ಯಾವಾಗ ಯೋಗಿ ಮದುವೆ ಎಂಬ ಮಾಹಿತಿ ಇರಲಿಲ್ಲ. ಅದಕ್ಕೆ ಮುನ್ನುಡಿ ಎಂಬಂತೆ ಯೋಗಿ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯೋಗಿ ತನ್ನ ಬಾಲ್ಯದ ಗೆಳತಿ ಸಾಹಿತ್ಯ ಎನ್ನುವವರನ್ನು ಇಷ್ಟಪಟ್ಟು, ಅವರನ್ನೇ ಮದುವೆಯಾಗುತ್ತಿದ್ದಾರೆ. ಅವರಿಬ್ಬರ ನಿಶ್ಚಿತಾರ್ಥ ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನ ಸಮೀಪದ ಯಡಿಯೂರಿನ ಸಾಹಿತ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಜರುಗಿದೆ.
ಈ ಸಂದರ್ಭದಲ್ಲಿ ಯೋಗಿ ಹಾಗೂ ಸಾಹಿತ್ಯ ಮನೆಯವರ ಕುಟುಂಬಸ್ಥರು, ಆಪ್ತರು ಹಾಗೂ ಗೆಳೆಯರು ಮಾತ್ರ ಹಾಜರಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಯಿಂದಲೇ ನಿಶ್ಚಿತಾರ್ಥದ ಪೂಜಾ ಕಾರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ಯೋಗಿ ಅವರು ಸಾಹಿತ್ಯ ಅವರಿಗೆ ರಿಂಗ್ ತೊಡಿಸುವ ಮೂಲಕ ನಿಶ್ಚಿತಾರ್ಥ ಕಾರ್ಯ ನೆರವೇರಿಸಿದರು.
ಯೋಗಿ ಅವರ ತಾಯಿ ಅಂಬುಜ ಅವರು ಸಾಹಿತ್ಯ ಅವರಿಗಾಗಿಯೇ ವಿಶೇಷ ರಿಂಗ್ವೊಂದನ್ನು ರೆಡಿ ಮಾಡಿಸಿದ್ದರು. ಕಳೆದ ಎರಡು, ಮೂರು ವರ್ಷಗಳಿಂದಲೂ ಸಾಹಿತ್ಯ ಹಾಗೂ ಯೋಗಿ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ತಿಳಿಸಿ, ಅವರ ಸಮ್ಮತಿ ಪಡೆದು ಭಾನುವಾರ ನಿಶ್ಚಿತಾರ್ಥ ಕಾರ್ಯ ಪೂರೈಸಿಕೊಂಡಿದ್ದಾರೆ.
ಸಾಹಿತ್ಯ ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಇದುವರಗೆ ಯೋಗಿಯ ಜೀವದ ಗೆಳತಿಯಾಗಿದ್ದ ಸಾಹಿತ್ಯ ಇನ್ನು ಮುಂದೆ ಸಂಗಾತಿಯಾಗಲಿದ್ದಾರೆ. ಮೈಸೂರು ಮೂಲದ ಅರಸ್ ಕುಟುಂಬದ ಹುಡುಗಿ ಸಾಹಿತ್ಯ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಯಡಿಯೂರಿನ ಎಸ್ಎಸ್ವಿಕೆ ಶಾಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ಒಟ್ಟಿಗೆ ವ್ಯಾಸಂಗ ಮಾಡಿದ್ದ ಯೋಗಿ ಹಾಗೂ ಸಾಹಿತ್ಯ ಮಧ್ಯೆ ಸ್ನೇಹ ಬೆಳೆದು, ಪ್ರೀತಿ ಹುಟ್ಟಿಕೊಂಡು ಈಗ ಮದುವೆಗೆ ಸಜ್ಜಾಗಿದ್ದಾರೆ.
ಅಂದಹಾಗೆ, ನವೆಂಬರ್ 2 ರಂದು ಕನಕಪುರ ರಸ್ತೆಯ ಶ್ರೀ ಕನ್ವೆನನ್ ಸೆಂಟರ್ನಲ್ಲಿ ಇವರ ವಿವಾಹ ಜರುಗಲಿದೆ. ಸದ್ಯ ಯೋಗಿ ನಟಿಸಿರುವ “ದುನಿಯಾ-2′ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆಯೇ ಯೋಗಿ ಶಿವರಾಜಕುಮಾರ್ ಅವರ “ಲೀಡರ್’ನಲ್ಲೂ ಪ್ರಮುಖ ಪಾತ್ರ ಮಾಡಿದ್ದಾರೆ. ಇದಲ್ಲದೆ “ಕೋಲಾರ’ ಮುಂತಾದ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.