ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು
Team Udayavani, Sep 30, 2022, 10:25 AM IST
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಚಿತ್ರ ಇಂದು ತೆರೆಗಪ್ಪಳಿಸಿದೆ. ಹಲವು ದೊಡ್ಡ ಚಿತ್ರಗಳ ನಡುವೆ ತೆರೆಕಂಡರೂ ಕಾಂತಾರ ಸಖತ್ ಸದ್ದು ಮಾಡುತ್ತಿದೆ. ಚಿತ್ರತಂಡವು ಗುರುವಾರ ಸಂಜೆ ಹಲವೆಡೆ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದು, ಸಿನಿಮಾ ನೋಡಿದ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಿಷಬ್, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಗಾಯಗೊಂಡ ಜಸ್ಪ್ರೀತ್ ಬುಮ್ರಾ ಬದಲಿಗೆ ವೇಗಿಯನ್ನು ನೇಮಿಸಿದ ಬಿಸಿಸಿಐ
ಚಿತ್ರ ನೋಡಿದ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, “ಕಾಂತಾರ… ಕೊನೆಯ 20 ನಿಮಿಷಗಳು ನಿಮ್ಮ ಉಸಿರನ್ನು ಹಿಡಿದಿಟ್ಟು ಕೊಳ್ಳುತ್ತಾನೆ. ರಿಷಬ್ ಅತ್ಯುತ್ತಮ ನಟನೆ ಅಥವಾ ಗುಳಿಗ (ದೈವ) ಅವನಲ್ಲಿಯೇ ಆವಾಹನೆ ಹೊಂದಿದ್ದಾನೆ ಎಂದು ಹೇಳಬೇಕೇನೋ? ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ.. ಕ್ಲೈಮ್ಯಾಕ್ಸ್ ನನ್ನಲ್ಲಿ ಆವರಿಸಿದೆ ಎಂದರೆ ನನಗೆ ಅದನ್ನು ಹೇಳಲು ಸಾಧ್ಯವಿಲ್ಲ. ಉಡುಪಿಗೆ ಕೂಡಲೇ ಹೋಗಿ ದೈವ ಸಾನಿಧ್ಯಕ್ಕೆ ಭೇಟಿ ನೀಡಬೇಕಿದೆ” ಎಂದು ಬರೆದುಕೊಂಡಿದ್ದಾರೆ.
I am so so overwhelmed with the climax that I can’t explain. Really need to make a quick trip to Udupi and visit the divine energy ?
— Rakshit Shetty (@rakshitshetty) September 29, 2022
ಬಹುಭಾಷಾ ಸಿನಿಮಾ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ಚಿತ್ರ ನೋಡಿದ್ದು, ‘ಇದೊಂದು ವಿಶಿಷ್ಟ ಅನುಭವ. ಮನುಷ್ಯನ ದುರಾಸೆ vs ಪ್ರಕೃತಿ.. ಎಂತಹ ಪವರ್‌ಫುಲ್ ಕ್ಲೈಮ್ಯಾಕ್ಸ್! ರಿಷಬ್ ಶೆಟ್ಟಿ ಅವರದ್ದು ಬಹಳ ಕನ್ವಿಕ್ಷನ್‌ನೊಂದಿಗೆ ಉತ್ತಮ ಅಭಿನಯ. ಅಲ್ಲದೆ ಅದ್ಭುತ ಬರವಣಿಗೆ ಮತ್ತು ನಿರ್ದೇಶನ.” ಎಂದು ಬರೆದುಕೊಂಡಿದ್ದಾರೆ.
ತಮಿಳು ನಿರ್ಮಾಪಕ ಎಸ್.ಆರ್ ಬಾಬು ಅವರು ಟ್ವೀಟ್ ಮಾಡಿದ್ದು, “ಕಾಂತಾರವು ಹೊಸ ಕನ್ನಡ ಅಲೆಯಲ್ಲಿ ಬಂದ ಮತ್ತೊಂದು ಉತ್ತಮ ಚಿತ್ರ! ಬರವಣಿಗೆ, ಮೇಕಿಂಗ್ ಮತ್ತು ಮೂಲ ಮಣ್ಣಿನ ಕಥೆ..! ಹಲವು ರೋಮಾಂಚನಕಾರಿ ಕ್ಷಣಗಳೊಂದಿಗೆ ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನು ಹಲವು ಟ್ವೀಟ್ ಗಳು ಇಲ್ಲಿದೆ.
Just watched #Kantara and I’m at a loss of words-It will blow your mind especially the Bhoota kola sequence @shetty_rishab you’ve outdone yourself! @gowda_sapthami you’ve held your own @hombalefilms @VKiragandur @Karthik1423 congratulations on a another big win! #KantaraOnSep30 pic.twitter.com/fyC16hNACn
— Ramya/Divya Spandana (@divyaspandana) September 29, 2022
#Kantara what a film, goosebumps throughout!
mind blowing performance by @shetty_rishab, @gowda_sapthami and all artists ?
a must watch film, am gonna watch it again, and may be again n again! ❤️ pic.twitter.com/gzghnZiTjX— Sangeetha Sringeri (@sangeethaSring) September 29, 2022
Glimpses from #Kantara Premiere Show❤️#KantaraInCinemasNow@shetty_rishab @VKiragandur @hombalefilms @HombaleGroup @gowda_sapthami @AJANEESHB #ArvindKashyap @actorkishore @KantaraFilm pic.twitter.com/cVfv8vzgUx
— Hombale Films (@hombalefilms) September 30, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.