‘Toby’ಚೆನ್ನಾಗಿಲ್ಲ ಎಂದದ್ದಕ್ಕೆ ಥಿಯೇಟರ್ ಎದುರೇ ಯುವತಿಗೆ ಧಮ್ಕಿ ಹಾಕಿದ ಯುವಕ!
ನಮ್ಮನ್ನು ಕ್ಷಮಿಸಿ ಎಂದ ನಟ ರಾಜ್ ಬಿ ಶೆಟ್ಟಿ...! ; ಯುವಕನ ವಿರುದ್ದ ಜನರ ಆಕ್ರೋಶ
Team Udayavani, Aug 26, 2023, 4:06 PM IST
ಬೆಂಗಳೂರು: ಶುಕ್ರವಾರ ಬಿಡುಗಡೆಯಾದ ರಾಜ್ ಬಿ ಶೆಟ್ಟಿ ನಟನೆಯ ”ಟೋಬಿ” ಚಿತ್ರ ಚೆನ್ನಾಗಿಲ್ಲ ಎಂದು ಚಿತ್ರ ಮಂದಿರದ ಎದುರು ಯುವತಿಯೊಬ್ಬಳು ಮಾಧ್ಯಮ ಪ್ರತಿನಿಧಿಗಳ ಎದುರು ಹೇಳಿಕೆ ನೀಡಿದ್ದಕ್ಕಾಗಿ ಯುವಕನೊಬ್ಬ ಆಕ್ರೋಶಗೊಂಡು ಅತೀರೇಕದ ವರ್ತನೆ ತೋರಿ ಆಕೆಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಟೋಬಿ ಕುರಿತು ತನ್ನ ಆಲೋಚನೆಗಳನ್ನು ಸರಳವಾಗಿ ಹಂಚಿಕೊಂಡ ವೇಳೆ ಯುವಕ ಆಕ್ರೋಶಗೊಂಡು ಯುವತಿಯತ್ತ ಧಾವಿಸಿ ಬಂದು, ಏನು ಚೆನ್ನಾಗಿಲ್ಲ..ಹೋಗ್ತಾ ಇರ್ಬೇಕು.. ಎಂದು ಕಿಡಿ ಕಾರಿದ್ದಾನೆ.. ಪರಿಸ್ಥಿತಿ ಉಲ್ಬಣಗೊಳಿಸಿ ಜನಸಂದಣಿ ಸೇರಿದ ವೇಳೆ ಆಕೆಯನ್ನು ನಿಂದಿಸಿ, ಅಂತಿಮವಾಗಿ ಆಕೆಯನ್ನು ಸ್ಥಳದಿಂದ ತೆರಳುವಂತೆ ಒತ್ತಾಯಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ತಾಣದಲ್ಲಿ ಹಲವರು ಯುವಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ವಿಚಾರ ತಿಳಿಯುತ್ತಿದ್ದಂತೆ ನಟ ರಾಜ್ ಬಿ ಶೆಟ್ಟಿ ಅವರೂ ಪ್ರತಿಕ್ರಿಯೆ ನೀಡಿದ್ದಾರೆ.
”ಸಿನಿಮಾ ಎಂದರೆ ಟೀಕೆಯ ಮಾಧ್ಯಮ. ನಮಗೆ ಸಂಭಾವನೆ ನೀಡುವ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಅದನ್ನು ಒಪ್ಪಲು ಅಥವಾ ಒಪ್ಪದಿರಲು ನಾವು ಸ್ವತಂತ್ರರು. ಆದರೆ ಯಾವುದೇ ರೀತಿಯಲ್ಲಿ ನಾವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರಿಗೆ ಕಿರುಕುಳ ನೀಡಲು ಪ್ರಯತ್ನಿಸಬಾರದು. ಅದೂ ಕೂಡ ವಿಡಿಯೋದಲ್ಲಿರುವವರು ನಮ್ಮ ಚಿತ್ರಕ್ಕೆ ಸಂಬಂಧವೇ ಇಲ್ಲದವರು.
ಯುವತಿ ಎದುರಿಸಬೇಕಾದ ಕಿರುಕುಳಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಕ್ಷಮಿಸಿ ಮತ್ತು ನಮ್ಮನ್ನು ಕ್ಷಮಿಸಿ” ಎಂದು ರಾಜ್ ಬಿ. ಶೆಟ್ಟಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.