ತೆರೆ ಹಿಂದೆ ಯುವರತ್ನ ತಾಲೀಮು : ಈ ವಾರ ಶೂಟಿಂಗ್ ಮುಕ್ತಾಯ
ಅಂತಿಮ ಹಂತದ ಕೆಲಸಗಳಲ್ಲಿ ಬಿಜಿಯಾದ ಚಿತ್ರತಂಡ
Team Udayavani, Oct 5, 2020, 1:52 PM IST
ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆ, ಮುಂದೆ ಬಿಡುಗಡೆಯಾಗಲಿರುವ ಸ್ಟಾರ್ ಸಿನಿಮಾಗಳ ಬಗ್ಗೆ ಚಿತ್ರೋದ್ಯಮದಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮತ್ತುಕುತೂಹಲ ಗರಿಗೆದರಿದೆ. ಅಂಥದ್ದೇ ನಿರೀಕ್ಷೆ ಮುಂದೆ ಬಿಡುಗಡೆಯಾಗಲಿರುವ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವತ್ನ’ ಸಿನಿಮಾದ ಮೇಲೂ ಇದೆ.
ಹೌದು, ಲಾಕ್‌ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಸ್ಟಾರ್ ಸಿನಿಮಾಗಳ ಪೈಕಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’ ಕೂಡ ಒಂದು. “ನಟ ಸಾರ್ವಭೌಮ’ ಚಿತ್ರದ ನಂತರ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಅಪ್ಪು ಅವರನ್ನು ಬಿಗ್ ಸ್ಕ್ರೀನ್ ಮೇಲೆ ಹೊಸ ಗೆಟಪ್‌ನಲ್ಲಿ ನೋಡಲು ಅಭಿಮಾನಿಗಳು ಒಂದೂವರೆ ವರ್ಷದಿಂದ ಕಾತುರದಿಂದ ಕಾದು ಕುಳಿತಿದ್ದಾರೆ.
ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಮೇ – ಜೂನ್ ತಿಂಗಳಿನಲ್ಲಿ “ಯುವರತ್ನ’ ತೆರೆಗೆ ಬರಬೇಕಿತ್ತು. ಆದರೆ ಅಷ್ಟರಲ್ಲಿ ಕೋವಿಡ್ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಚಿತ್ರದ ಅಂತಿಮ ಹಂತದ ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ “ಯುವರತ್ನ’ ಬಿಡುಗಡೆ ಅನಿಶ್ಚಿತತೆ ಮುಂದುವರೆಯಿತು. ಸದ್ಯ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ, “ಯುವರತ್ನ’ದ ಕೆಲಸಗಳಿಗೆ ಮತ್ತೆ ಚಾಲನೆ ನೀಡಿರುವ ಚಿತ್ರತಂಡ, ಬಾಕಿಯಿರುವ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದೆ. ಇತ್ತೀಚೆಗಷ್ಟೆ “ಯುವರತ್ನ’ ಚಿತ್ರದ ಇಂಟ್ರಡಕ್ಷನ್ ಹಾಡನ್ನು ಚಿತ್ರೀಕರಿಸಿರುವ ಚಿತ್ರತಂಡ, ಲಾಕ್‌ಡೌನ್ ನಡುವೆಯೇ ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳನ್ನು ಬಿಡುಗಡೆ ಮಾಡಿ ಪುನೀತ್ ಅಭಿಮಾನಿಗಳಕುತೂಹಲ ತಣಿಸುವ ಪ್ರಯತ್ನ ಮಾಡಿದೆ.
“ರಾಜಕುಮಾರ’ ಚಿತ್ರದ ಬಳಿಕ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಉಳಿದಂತೆ ಧನಂಜಯ್, ಸೋನು ಗೌಡ, ಪ್ರಕಾಶ್ ರೈ, ರಾಧಿಕಾ ಶರತ್‌ಕುಮಾರ್,ಕಾವ್ಯಾ ಶೆಟ್ಟಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಜಯ್ ಕಿರಗಂದೂರು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರರಂಗದ ಸದ್ಯದ ಮೂಲಗಳ ಪ್ರಕಾರ ಥಿಯೇಟರ್‌ಗಳು ತೆರೆದು, ಚಿತ್ರರಂಗದ ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದರೆ, ಇದೇ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ಯುವರತ್ನ’ ತೆರೆಗೆ ಬರಬಹುದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.