ಮೇ 21ಕ್ಕೆ ಯುವರತ್ನ ರಿಲೀಸ್ ಆಗುತ್ತಿಲ್ಲ
Team Udayavani, Apr 2, 2020, 11:19 AM IST
ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರದ ಹಾಡುಗಳ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೂಡಕ್ಷನ್ ಕೆಲಸಗಳು ಇನ್ನೂ ಬಾಕಿ ಇವೆ.
ಕೋವಿಡ್ 19 ಎಫೆಕ್ಟ್ ನಿಂದಾಗಿ ಹಾಡುಗಳ ಚಿತ್ರೀಕರಣ ಮುಂದೆ ಹೋಗಿದೆ. ಜೊತೆಗೆ ಚಿತ್ರದ ಬಿಡುಗಡೆಯ ಬಗ್ಗೆಯೂ ಆಧಿಕೃತ ಮಾಹಿತಿಂಯೂ ಇಲ್ಲ. ಆದರೆ ಏಪ್ರಿಲ್ ಮೊದಲ ದಿನ ಫೂಲ್ ಮಾಡಲೆಂದೇ ಚಿತ್ರ ಮೇ 21ಕ್ಕೆ ಬಿಡುಗಡೆಯಾಗುತ್ತದೆ ಎಂದು ಸುದ್ದಿ ಹಬ್ಬಿಸಿದ್ದರು. ಈ ಮೂಲಕ ಪುನೀತ್ ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದ್ದರು. ಆದರೆ, ನಿರ್ದೇಶಕ ಸಂತೋಷ್ ಅನಂದ ರಾಮ್, ಈ ಸುದ್ದಿಯನ್ನು ಅಲ್ಲಗಳೆದಿದ್ದು, ಚಿತ್ರ ಮೇ 21 ರಂದು ಬಿಡುಗಡೆಯಾಗುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ, ಇದು ತಪ್ಪು ಮಾಹಿತಿ. ಇನ್ನೂ ಎರಡು ಹಾಡುಗಳ ಚಿತ್ರೀಕರಣವಿದ್ದು, ಪೋಸ್ಟ್ ಪ್ರೂಡಕ್ಷನ್ ಮುಗಿದ ಮೇಲೆ ಬಿಡುಗಡೆಯ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು, ಪಬ್ಲಿಸಿಟಿ, ಅಡಿಯೋ-ಟ್ರೇಲರ್ ರಿಲೀಸ್ ಎಲ್ಲದಕ್ಕೂ ದೊಡ್ಡ ಪ್ಲಾನ್ ಇರುವುದರಿಂದ ದಿನಾಂಕ ನಿಗದಿತವಾಗಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.