“ಯುವರತ್ನ’ ನ್ಯೂ ಲುಕ್
ಪುನೀತ್ ಬೆನ್ನ ಹಿಂದೆ ಅಸ್ಥಿಪಂಜರ!
Team Udayavani, Jan 2, 2020, 7:03 AM IST
ಹೊಸ ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗ ಎಂದಿಗಿಂತಲೂ ಇನ್ನಷ್ಟು ಉತ್ಸಾಹಗೊಂಡಿದೆ. ಮೊದಲ ದಿನದಲ್ಲೇ ತಮ್ಮ ಹೊಸ ಸಿನಿಮಾಗಳ ಚಟುವಟಿಕೆಗಳಲ್ಲಿ ನಿರ್ದೇಶಕ, ನಿರ್ಮಾಪಕರು ಮಗ್ನರಾಗುವ ಮೂಲಕ ಹೊಸ ಹುಮ್ಮಸ್ಸಿನಲ್ಲಿ ತಮ್ಮ ಕೆಲಸ ಶುರುಮಾಡಿದ್ದಾರೆ. ಇದರ ಬೆನ್ನಲ್ಲೇ ಹೊಸ ವರ್ಷದ ಆರಂಭದ ದಿನ ಬುಧವಾರ ಹೊಸ ಲುಕ್ ಬಿಡುಗಡೆ ಮಾಡುವ ಮೂಲಕ “ಯುವರತ್ನ’ ಚಿತ್ರತಂಡ ಪುನೀತ್‌ರಾಜಕುಮಾರ್ ಅಭಿಮಾನಿಗಳಿಗೆ ಹೊಸದೊಂದು ಜೋಶ್ ತುಂಬಿದೆ.
ಹೌದು, ಬುಧವಾರ ಪುನೀತ್‌ರಾಜಕುಮಾರ್ ಅವರ “ಯುವರತ್ನ’ ಚಿತ್ರದ ಹೊಸ ಪೋಸ್ಟರ್ ಹೊರಬಂದಿದ್ದು, ಆ ಫಸ್ಟ್‌ಲುಕ್‌ನಲ್ಲಿ ಪುನೀತ್‌ರಾಜಕುಮಾರ್ ಅವರು ಮಾಸ್‌ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.ಈ ಪೋಸ್ಟರ್ ನೋಡಿದವರಿಗೆ ಅದೊಂದು ಕುತೂಹಲ ಮೂಡಿಸುವುದು ಗ್ಯಾರಂಟಿ. ಹೌದು, ಪುನೀತ್ ರಾಜಕುಮಾರ್ ಅವರು ತಮ್ಮ ಬೆನ್ನ ಹಿಂದೆ ಅಸ್ಥಿಪಂಜರ ಹಿಡಿದು ನಡೆದು ಹೋಗುತ್ತಿರುವ ಫೋಟೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಅಸ್ಥಿಪಂಜರದ ಎರಡು ಕೈಗಳನ್ನು ತಮ್ಮ ಹೆಗಲ ಮೇಲಿಂದ ಹಿಡಿದುಕೊಂಡು ಮಾಸ್‌ಲುಕ್ ಕೊಡುತ್ತ ದಾಪುಗಾಲು ಇಡುತ್ತಿರುವ ಫೋಟೋ ಸದ್ಯಕ್ಕೆ ಸಖತ್ ವೈರಲ್ ಆಗಿದೆ. ಪುನೀತ್‌ರಾಜಕುಮಾರ್ ಅವರ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದು, ಸಾಕಷ್ಟು ಕಾಮೆಂಟ್ಸ್ ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್‌ನಲ್ಲಿ ಪುನೀತ್‌ರಾಜಕುಮಾರ್ ಅವರು ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಪುನೀತ್‌ರಾಜಕುಮಾರ್ ಅವರು ಈ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿ.
ಇದೊಂದು ಶಿಕ್ಷಣ ಮಾಫಿಯಾ ಕುರಿತಾದ ಚಿತ್ರವಾಗಿದ್ದರೂ, ಲವ್, ಎಮೋಷನಲ್, ಗೆಳೆತನ ಇತ್ಯಾದಿ ಒಳಗೊಂಡ ಚಿತ್ರ. ಈ ಚಿತ್ರಕ್ಕೆ ಸಯೇಷಾ ಸೈಗಲ್ ನಾಯಕಿ. ಸೋನುಗೌಡ, ಧನಂಜಯ್ ಸೇರಿದಂತೆ ಹಲವು ಇಲ್ಲಿ ನಟಿಸಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಅದೇನೆ ಇರಲಿ, ಹೊಸ ವರ್ಷಕ್ಕೆ ನ್ಯೂಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿರುವುದಂತೂ ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.