BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Team Udayavani, Dec 24, 2024, 11:13 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಭವ್ಯ ಅವರು ಮನೆ ಕೆಲಸವನ್ನು ಹಂಚುವ ವಿಚಾರದಲ್ಲಿ ಚರ್ಚೆ ನಡೆದಿದೆ.
ತ್ರಿವಿಕ್ರಮ್, ಹನುಮಂತು, ರಜತ್ ಅವರಿಗೆ ಅಡುಗೆ ರೂಮ್ ನ ಕೆಲಸವನ್ನು ನೀಡಿದ್ದು , ತಮಗೆ ಇದು ಆಗಲ್ಲವೆಂದಿದ್ದಾರೆ. ಇದಕ್ಕೆ ಭವ್ಯ ಅವರು ನಾವು ಹೇಳಿದಾಗೆ ನೀವು ಕೆಲಸಮಾಡಬೇಕು ಎಂದಿದ್ದಾರೆ. ನಾವು ಇದನ್ನು ಮಾಡಲ್ಲ. ನಮಗೆ ಆಗಲ್ಲವೆಂದರೆ ಅದನ್ನು ಮಾಡಲ್ಲ. ಇದನ್ನು ಬಿಗ್ ಬಾಸ್ ಬಳಿ ಹೇಳುತ್ತೇವೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಈ ಗೊಂದಲಗಳಿಗೆ ತಲೆಗೆಡಿಸಿಕೊಂಡ ಭವ್ಯ ಸ್ವಲ್ಪ ಸಮಯ ಆಚೆ ಹೋಗಿದ್ದಾರೆ. ಇದಕ್ಕೆ ತಿವಿಕ್ರಮ್ ಅವರು ನೀವು ಹೀಗೆ ಅರ್ಧದಲ್ಲಿ ಹೋಗುವ ಆಗಿಲ್ಲವೆಂದಿದ್ದಾರೆ.
ರಜತ್ ಅವರು ಚೈತ್ರಾ ಅವರ ಜ್ವರದ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಚೈತ್ರಾ ಅವರು ಅಸಮಾಧಾನಗೊಂಡು ಸರಿ ಆಗಿದ್ದೇನೆ ಅಲ್ವಾ ನಾಟಕ ಮಾಡ್ತಾ ಇದ್ದೇನಾ? ಇವತ್ತು ಡ್ರಿಪ್ಸ್ ಹಾಕಿದ್ದಾರೆ. ನನ್ನ ಮೇಲೆ ಈ ರೀತಿ ಆರೋಪಗಳನ್ನು ಮಾಡ್ತಾ ಇದ್ದಾರೆ. ಇದನ್ನು ನಾನು ಸಾಬೀತು ಮಾಡದೇ ಇದ್ರೆ ಬಲಿ ಬಕ್ರಾ ಆಗ್ತೇನೆ. ಇದಕ ಕ್ಲಾರಿಟಿ ಸಿಗುವವರೆಗೆ ಒಂದು ಮಾತ್ರೆನೂ ತಕ್ಕೊಳಲ್ಲ. ನಾಳೆ ಡಾಕ್ಟರ್ ಹತ್ರನೂ ಹೋಗಲ್ಲವೆಂದು. ಚೀಟಿಯಲ್ಲಿ ಏನೋ ಬರೆದು ನಡುರಾತ್ರಿ ದೇವರ ಮುಂದೆ ಇಟ್ಟು ಪ್ರಾರ್ಥಿಸಿದ್ದಾರೆ.
ರೆಸಾರ್ಟ್ ಆಗಿ ಬದಲಾದ ಬಿಗ್ ಬಾಸ್ ಮನೆ:
ಟಾಸ್ಕ್ ವಿಚಾರವಾಗಿ ಬಿಗ್ ಬಾಸ್ ರೆಸಾರ್ಟ್ ಆಗಿ ಬದಲಾಗಿದೆ. ಎರಡು ತಂಡಗಳಾಗಿ ಮನೆ ವಿಭಜನೆಗೊಂಡಿದ್ದು ಭವ್ಯ ಹಾಗೂ ಚೈತ್ರಾ ಅವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕ್ಯಾಪ್ಟನ್ ಗಳು ಮನೆಯ ಸದಸ್ಯರನ್ನು ಮನವೊಲಿಸಿಕೊಂಡು ಆಯ್ಕೆ ಮಾಡಿಕೊಂಡಿದ್ದಾರೆ.
ರಜತ್, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ ಭವ್ಯ ಅವರ ತಂಡಕ್ಕೆ ಸೇರಿಕೊಂಡಿದ್ದಾರೆ. ಐಶ್ವರ್ಯಾ, ಹನುಮಂತು, ಮಂಜಣ್ಣ, ಗೌತಮಿ ಅವರು ಚೈತ್ರಾ ಅವರ ತಂಡಕ್ಕೆ ಸೇರಿದ್ದಾರೆ.
ಭವ್ಯ ಅವರ ತಂಡ ರೆಸಾರ್ಟ್ ನ ಸಿಬ್ಬಂದಿ, ಚೈತ್ರಾ ಅವರ ತಂಡ ಅತಿಥಿಯಾಗಿದ್ದಾರೆ. ಆ ಮೂಲಕ ಅತಿಥಿಗಳ ತಂಡ ತಮಗೆ ಬೇಕಾದ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಆ ತಂಡ ಕೇಳಿದಾಗೆ ಸಿಬ್ಬಂದಿಗಳ ತಂಡ ನಡೆದುಕೊಳ್ಳಬೇಕು.
ಅದರಂತೆ ಆರಂಭದಲ್ಲೇ ಅತಿಥಿಗಳು ತಮ್ಮ ಆಜ್ಞೆಯನ್ನು ಶುರು ಮಾಡಿಸಿದ್ದಾರೆ. ಮೋಕ್ಷಿತಾ ಅವರು ಎದುರಾಳಿ ತಂಡದ ಮ್ಯಾನೇಜರ್ ಆಗಿದ್ದಾರೆ.
ಬಿಸಿ ನೀರು, ಕೋಲ್ಡ್ ನೀರು, ಜ್ಯೂಸ್ ಸೇರಿದಂತೆ ತಮಗೆ ಬೇಕದಾಗೆ ಸೌಲಭ್ಯವನ್ನು ಅತಿಥಿಗಳು ಬಳಸಿಕೊಂಡಿದ್ದಾರೆ. ತಾವು ಕೇಳಿದ ಆಹಾರವನ್ನು ಆರ್ಡರ್ ಮಾಡಿಸಿಕೊಂಡು ಅತಿಥಿಗಳು ಸೇವಿಸಿದ್ದಾರೆ.
ನಿಮ್ಮ ಬಟ್ಟೆಗಳನ್ನು ನಾವು ವಾಶ್ ಮಾಡಿಸಿಕೊಳ್ಳಲು ಆಗಲ್ಲ. ರೆಸಾರ್ಟ್ ಅಲ್ಲಿ ಇರುವ ಬಟ್ಟೆಗಳನ್ನು ಮಾತ್ರ ವಾಶ್ ಮಾಡುತ್ತೇವೆ ಎಂದು ಮ್ಯಾನೇಜರ್ ಮೋಕ್ಷಿತಾ ಹೇಳಿದ್ದಾರೆ. ಇನ್ನೊಂದು ಕಡೆ ಬಟ್ಟೆ ಮಡಚಿಕೊಡಿ ಎಂದು ಹೇಳಿದ್ದಾರೆ ಆದರೆ ಇದಕ್ಕೆ ಸಿಬ್ಬಂದಿಗಳು ಆಗಲ್ಲವೆಂದಿದ್ದಾರೆ.
ಇದಕ್ಕೆ ಮ್ಯಾನೇಜರ್ ಮೋಕ್ಷಿತಾ ಅವರನ್ನು ಮಂಜು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಕೆಲಸವೂ ನಿಮ್ಮಿಂದ ಆಗಲ್ಲ ಎಂದಾಗ ಧನರಾಜ್ ಅವರು ಜ್ಯೂಸ್ ತಂದಾಗ ಕೈಯಿಂದ ಅದನ್ನು ಎಸೆದಿದ್ದಾರೆ. ಇದಕ್ಕೆ ಸಿಬ್ಬಂದಿಗಳು ರೆಸಾರ್ಟ್ ಸಾಮಾಗ್ರಿಗಳನ್ನು ಹಾನಿ ಮಾಡುವಂತಿಲ್ಲವೆಂದಿದ್ದಾರೆ. ಚೈತ್ರಾ ಅವರು ಮಂಜು ಅವರನ್ನು ಸಮಾಧಾನ ಪಡಿಸಿದ್ದಾರೆ.
ನಾವು ಕೂಡ ಈ ತರ ಮಕ್ಕಳು ತರ ಆಡುತ್ತೇವೆ. ನಮಗೆ ಟಾಸ್ಕ್ ಬರಲಿ ಎಂದು ರಜತ್ ಹೇಳಿದ್ದಾರೆ.
ರೆಸಾರ್ಟ್ ಸಿಬ್ಬಂದಿಗಳಿಗೆ ಬಟ್ಟೆ ಒಗೆಯುವ ಟಾಸ್ಕ್ ನೀಡಲಾಗಿದೆ. ಚೈತ್ರಾ ಹಾಗೂ ಐಶ್ವರ್ಯಾ ಬಟ್ಟೆಗಳನ್ನು ಅವರ ಬಟ್ಟೆಗಳನ್ನು ತ್ರಿವಿಕ್ರಮ್ ರಜತ್ ಒಗೆದಿದ್ದಾರೆ.
ಬಟ್ಟೆ ಒಗೆದ ರೀತಿಗೆ ಹಾಗೂ ಟಾಸ್ಕ್ ಮಾಡಿದ ರೀತಿಗೆ ಸಿಬ್ಬಂದಿಗಳಿಗೆ ಅತಿಥಿಗಳ ತಂಡ ಸ್ಟಾರ್ ರೇಟ್ ನೀಡಿದ್ದಾರೆ.
ನಮಗೆ ಸರಿಯಾದ ರೀತಿ ಸರ್ವಿಸ್ ಆಗಿಲ್ಲವೆಂದು ಚೈತ್ರಾ ಅವರು 6 ಸ್ಟಾರ್ ಗಳನ್ನು ನೀಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.