ಬಾಲಿವುಡ್‌ನ‌ ಆರು ಪ್ರಮುಖ ನಟರಿಗೆ ಮಾದಕ ಸಂಕಷ್ಟ: ವಕೀಲರ ಬಳಿ ಕಾನೂನು ಸಲಹೆ?

ನಟಿ ದೀಪಿಕಾ ಪಡುಕೋಣೆ ಅವರನ್ನು ಅಗತ್ಯ ಬಿದ್ದರೆ ಮಾತ್ರ ವಿಚಾರಣೆಗೆ ಕರೆಯಿಸಿಕೊಳ್ಳುವು ದಾಗಿ ಎನ್‌ಸಿಬಿ ತಿಳಿಸಿದೆ.

Team Udayavani, Sep 22, 2020, 11:18 AM IST

ಬಾಲಿವುಡ್‌ನ‌ ಆರು ಪ್ರಮುಖ ನಟರಿಗೆ ಮಾದಕ ಸಂಕಷ್ಟ: ವಕೀಲರ ಬಳಿ ಕಾನೂನು ಸಲಹೆ?

Representative Image

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಮತ್ತು ಮಾದಕ ದ್ರವ್ಯ ಜಾಲದ ಬಗೆಗಿನ ತನಿಖೆ ಮಂಗಳವಾರ ಹೊಸತೊಂದು ಮಜಲು ಪ್ರವೇಶ ಮಾಡಿದೆ. “ರಿಪಬ್ಲಿಕ್‌’ ಇಂಗ್ಲಿಷ್‌ ಸುದ್ದಿ ವಾಹಿನಿ ವರದಿ ಮಾಡಿರುವ ಪ್ರಕಾರ ಬಾಲಿವುಡ್‌ನ‌ ಆರು ಮಂದಿ ಪ್ರಮುಖ ನಟರಿಗೆ ಮಾದಕ ವಸ್ತು ನಂಟಿನ ಪ್ರಕರಣ ದಿಂದಾಗಿ ತೊಂದರೆ ಎದುರಾಗಲಿದೆ. ಹೀಗಾಗಿ ಅವರೆಲ್ಲರೂ ತಮ್ಮ ವಕೀಲರ ಬಳಿ ತೆರಳಿ ಕಾನೂನು ಸಲಹೆ ಪಡೆದುಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಸಮನ್ಸ್‌: ಇದೇ ವೇಳೆ, ಚಿತ್ರನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌ ಮತ್ತು ಪ್ರತಿಭಾ ನಿರ್ವಹಣಾ ಸಂಸ್ಥೆಯ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಧ್ರುವ ಚಿಟಗೋಪೆಕರ್‌ಗೆ ವಿಚಾರಣೆಗೆ ಬರುವಂತೆ ಎನ್‌ಸಿಬಿ ಸಮನ್ಸ್‌ ನೀಡಿದೆ.

ನ್ಯಾಯಾಂಗ ಕಸ್ಟಡಿ ವಿಸ್ತರಣೆ: ಮಾದಕ ದ್ರವ್ಯ ಪ್ರಕರಣ ಮತ್ತು ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿ ರುವ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೊವಿಕ್‌ ಚಕ್ರವರ್ತಿಯ ನ್ಯಾಯಾಂಗ ಬಂಧನ ಆ.6ರ ವರೆಗೆ ವಿಸ್ತರಿಸಲಾಗಿದೆ. ಎನ್‌ ಸಿಬಿಯ ವಿಶೇಷ ಕೋರ್ಟ್‌ ಈ ಬಗ್ಗೆ ಆದೇಶ ನೀಡಿದೆ.ಮತ್ತೂಂದೆಡೆ ಜಾಮೀನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಿಯಾ, ಶೋವಿಕ್‌ ವಕೀಲರ ಮೂಲಕ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೆ.9ರಂದು ರಿಯಾರನ್ನು ಎನ್‌ಸಿಬಿ ಬಂಧಿಸಿತ್ತು.

ಅಗತ್ಯ ಬಿದ್ದರೆ ಸಮನ್ಸ್‌: ಈಗಾಗಲೇ ವರದಿಯಾಗಿರುವ ಪ್ರಕಾರ ಡ್ರಗ್ಸ್‌ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಅವರನ್ನು ಅಗತ್ಯ ಬಿದ್ದರೆ ಮಾತ್ರ ವಿಚಾರಣೆಗೆ ಕರೆಯಿಸಿಕೊಳ್ಳುವು ದಾಗಿ ಎನ್‌ಸಿಬಿ ತಿಳಿಸಿದೆ.

ಡ್ರಗ್ಸ್ ‌ಕೇಸು: ಮೇಲ್ಮಟ್ಟದ ಅಧಿಕಾರಿಗೆ ತನಿಖಾಧಿಕಾರಿ: ಮಾದಕ ದ್ರವ್ಯ ಪೂರೈಕೆ ಪ್ರಕರಣಗಳಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಇನ್‌ಸ್ಪೆಕ್ಟರ್‌ ಹುದ್ದೆಗಿಂತ ಮೇಲ್ಮಟ್ಟದ ಅಧಿಕಾರಿಗಳು ತನಿಖೆ ನಡೆಸಬಹು ದಾಗಿದೆ. ಈ ಬಗ್ಗೆ ಮಂಗಳವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರಗಳ ಜತೆಗೆ ಸಮಾಲೋ ಚನೆ ನಡೆಸಿದ ಬಳಿಕ ಮಾದಕ ದ್ರವ್ಯ ವಸ್ತುಗಳ ಪೂರೈಕೆ ತಡೆಕಾಯ್ದೆ ಯನ್ವಯಕೇಂದ್ರ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬಹು ದಾಗಿದೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಮತ್ತು ಬಾಲಿವುಡ್‌ನ‌ಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಪೂರೈಕೆ ಪ್ರಕರಣ ಹಲವು ಖ್ಯಾತನಾಮರನ್ನು ಸಂಕಷ್ಟಕ್ಕೆ ಸಿಲುಕಿಸಿರುವಂತೆಯೇಈಆದೇಶ ಹೊರಬಿದ್ದಿದೆ.

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

1-ree

Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್‌’

aishwarya rai b

Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Hockey

National Hockey; ಕರ್ನಾಟಕಕ್ಕೆ ಜಯ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.