ರಾಕಿ ಭಾಯ್ ಗೆ ಟಕ್ಕರ್ ನೀಡಲು ಬಂದ ಅಮಿರ್: ಒಂದೇ ದಿನ ಕೆಜಿಎಫ್2- ಲಾಲ್ ಸಿಂಗ್ ಚಡ್ಡಾ ರಿಲೀಸ್
Team Udayavani, Nov 20, 2021, 3:44 PM IST
ಭಾರತದ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆಕಾಣಲು ರೆಡಿಯಾಗಿದೆ. ಅಮಿರ್ ಖಾನ್ ಅವರು ತಮ್ಮ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಕನ್ನಡದ ರಾಕಿಂಗ್ ಸ್ಟಾರ್ ಗೆ ಸಡ್ಡು ಹೊಡೆದಿದ್ದಾರೆ.
ಹೌದು, ಅಮಿರ್ ಖಾನ್ ಅವರ ಲಾಲ್ ಸಿಂಗ್ ಚಢ್ಢಾ ಚಿತ್ರ ಮುಂದಿನ ವರ್ಷದ ಎಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಇಂದು ಅಮಿರ್ ಖಾನ್ ಪ್ರೊಡಕ್ಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡಿದೆ.
ಆದರೆ ಅದೇ ದಿನ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಪಾನ್ ಇಂಡಿಯಾ ಚಿತ್ರ ‘ಕೆಜಿಎಫ್ -2’ ಬಿಡುಗಡೆಯಾಗುತ್ತಿದೆ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ತೆರೆಕಾಣಲು ಸಜ್ಜಾಗಿದೆ.
ಇದನ್ನೂ ಓದಿ:ಪಾವನಾ ‘ಇನ್’ ಸೈಡ್ ಸ್ಟೋರಿ!
ಬಾಲಿವುಡ್ ಟ್ರೇಡ್ ಎನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ ದಿ ಬಿಗ್ ಕ್ಲ್ಯಾಶ್” ಎಂದು ಕರೆದಿದ್ದಾರೆ. “14 ಏಪ್ರಿಲ್ 2022 ಎರಡು ದೊಡ್ಡವರ ಘರ್ಷಣೆಗೆ ಸಾಕ್ಷಿಯಾಗಲಿದೆ. ಲಾಲ್ ಸಿಂಗ್ ಚಡ್ಡಾ ಮತ್ತು ಕೆಜಿಎಫ್ 2… ಅಮೀರ್ ಖಾನ್ ವರ್ಸಸ್ ಯಶ್” ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
‘LSC’ VERSUS ‘KGF2’: THE BIGGG CLASH… 14 April 2022 will witness the clash of the two biggies: #LaalSinghChaddha and #KGF2… #AamirKhan versus #Yash. pic.twitter.com/JYvumuIUNi
— taran adarsh (@taran_adarsh) November 20, 2021
ಕೆಜೆಎಫ್ ಚಿತ್ರದ ಮೊದಲ ಭಾಗ 2018ರ ಡಿಸೆಂಬರ್ 21ರಂದು ಬಿಡುಗಡೆಯಾಗಿತ್ತು. ಆಗಲೂ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಭಿನಯದ ‘ಜೀರೋ’ ಚಿತ್ರ ಬಿಡುಗಡೆಯಾಗಿತ್ತು. ಕೆಜಿಎಫ್ ಬಾಕ್ಸಾಫೀಸ್ ಧೂಳಿಪಟ ಮಾಡಿದ್ದರೆ, ಶಾರುಖ್ ಚಿತ್ರ ಯಶಸ್ಸು ಕಾಣಿರಲಿಲ್ಲ.
ಅಮಿರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು 1994ರಲ್ಲಿ ತೆರೆಕಂಡ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್. ಚಿತ್ರದಲ್ಲಿ ಅಮಿರ್ ಜೊತೆ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದ್ವೈತ್ ಚಂದನ್ ನಿರ್ದೇಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.