46 ಕೋಟಿಗೆ ಐಷಾರಾಮಿ ಫ್ಲ್ಯಾಟ್ ಮಾರಾಟ ಮಾಡಿದ ನಟ ಅಭಿಷೇಕ್ ಬಚ್ಚನ್
Team Udayavani, Aug 13, 2021, 3:14 PM IST
ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಐಷಾರಾಮಿ ಫ್ಲ್ಯಾಟ್ 46 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ
ಅಭಿಷೇಕ್ ಬಚ್ಚನ್ ಅವರು ಮುಂಬೈಯ ವರ್ಲಿ ಪ್ರದೇಶದಲ್ಲಿರುವ ಐಷಾರಾಮಿ ಒಬೆರಾಯ್ 360 ವೆಸ್ಟ್ ಟವರ್ಸ್ ನ 37 ನೇ ಮಹಡಿಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದರು. ಇದನ್ನು 2014 ರಲ್ಲಿ 41 ಕೋಟಿ ರೂ.ಗೆ ಖರೀದಿಸಿದ್ದರು. ಈ ಫ್ಲಾಟ್ 7,527 ಚದರ ಅಡಿಗಳಾಗಿದ್ದು, ಇದೀಗ 46 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
ಮತ್ತೊಂದೆಡೆ ಅಮಿತಾಬ್ ಬಚ್ಚನ್ ಈ ವರ್ಷ ಮೇ ತಿಂಗಳಲ್ಲಿ ಬಿಲ್ಡರ್ ಕ್ರಿಸ್ಟಲ್ ಗ್ರೂಪ್ ಅವರಿಂದ ಮುಂಬೈನಲ್ಲಿ 5,184 ಚದರ ಅಡಿ ಆಸ್ತಿಯನ್ನು 31 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರು ಡಿಸೆಂಬರ್ 2020 ರಲ್ಲಿ ಆಸ್ತಿಯನ್ನು ಖರೀದಿಸಿದ್ದರು. ಆದರೆ ಅದನ್ನು ಏಪ್ರಿಲ್ 2021 ರಲ್ಲಿ ನೋಂದಾಯಿಸಲಾಗಿದೆ. ಅವರು ಮಾರ್ಚ್ 31 ರವರೆಗೆ ಮಹಾರಾಷ್ಟ್ರ ಸರ್ಕಾರದ 2 ಪ್ರತಿಶತ ಸ್ಟ್ಯಾಂಪ್ ಡ್ಯೂಟಿ ವಿನಾಯಿತಿಯ ಲಾಭವನ್ನು ಪಡೆಯುವ ಮೂಲಕ ರೂ. 31 ಕೋಟಿಯ 2% ಅಂದರೆ 62 ಲಕ್ಷ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದರು.
ಇನ್ನು ಅಭಿಷೇಕ್ ಬಚ್ಚನ್ ಕೊನೆಯದಾಗಿ ‘ದಿ ಬಿಗ್ ಬುಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಶೀಘ್ರದಲ್ಲೇ ನಿಮ್ರತ್ ಕೌರ್ ಜೊತೆ ‘ದುಸ್ವಿ’ ಮತ್ತು ಚಿತ್ರಾಂಗದಾ ಸೇನ್ ಜೊತೆ ‘ಬಾಬ್ ಬಿಸ್ವಾಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಅಪಾರ್ಟ್ಮೆಂಟ್
ಅಭಿಷೇಕ್ ಬಚ್ಚನ್ ಫ್ಲ್ಯಾಟ್ ಹೊಂದಿದ್ದ ಅಪಾರ್ಟ್ಮೆಂಟ್ ನಲ್ಲಿನಲ್ಲಿಯೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ಕೂಡ ಮನೆ ಪಡೆದಿದ್ದಾರೆ. ಅಕ್ಷಯ್ ಕುಮಾರ್ 52 ಕೋಟಿ ಹಾಗೂ ಶಾಹಿದ್ ಕಪೂರ್ 56 ಕೋಟಿ ರೂ. ನೀಡಿ ಫ್ಲ್ಯಾಟ್ ಖರೀದಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.