ಮುಂಬಯಿ: ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ ಕುರಿತು ನಟಿ ದೂರು
ಹೆದರಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ ನಟಿಯ ರಕ್ಷಣೆ..
Team Udayavani, Oct 16, 2022, 3:05 PM IST
ಮುಂಬಯಿ: ಮನೆಗೆ ಹೋಗುತ್ತಿದ್ದ ವೇಳೆ ಉಬರ್ ಕ್ಯಾಬ್ ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾನೆ ಎಂದು ಚಲನಚಿತ್ರ ನಟಿ ಮತ್ತು ನಿರ್ದೇಶಕಿ ಮಾನವಾ ನಾಯಕ್ ಆರೋಪಿಸಿದ್ದಾರೆ.
ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ ಶನಿವಾರ ಸಂಜೆ ನಡೆದ ಘಟನೆಯ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಭೂತ ಬಂಗಲೆಯಲ್ಲೇ ನೆಲೆಸಿದ್ದ ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ನಿಧನ
ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ಜಂಟಿ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ ಪಾಟೀಲ್ ಪೋಸ್ಟ್‌ಗೆ ಉತ್ತರಿಸಿದ್ದು, ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ತಪ್ಪಿತಸ್ಥನ ವಿರುದ್ಧ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾಯಕ್ ಅವರ ಪೋಸ್ಟ್ ಪ್ರಕಾರ, ಅವರು ಮನೆಗೆ ಹೋಗಲು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಂದ ರಾತ್ರಿ 8.15 ಕ್ಕೆ ಕ್ಯಾಬ್ ಏರಿ ಪ್ರಯಾಣ ಆರಂಭಿಸಿದ್ದಾರೆ.ಡ್ರೈವರ್ ಚಾಲನೆ ಮಾಡುತ್ತಿದ್ದಾಗ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಚಾಲಕ ಸಿಗ್ನಲ್ ಜಂಪ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದು, ಇದಕ್ಕಾಗಿ ಟ್ರಾಫಿಕ್ ಪೊಲೀಸ್ ಕ್ಯಾಬ್ ಅನ್ನು ನಿಲ್ಲಿಸಿ ಫೋಟೋ ಕ್ಲಿಕ್ ಮಾಡಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಚಾಲಕ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದ್ದು, ನಂತರಟಿ ಮಧ್ಯಪ್ರವೇಶಿಸಿ, ವಾಹನದ ಚಿತ್ರವನ್ನು ಕ್ಲಿಕ್ ಮಾಡಿದ್ದರಿಂದ ವಾಹನವನ್ನು ಚಲಿಸಲು ಅವಕಾಶ ನೀಡುವಂತೆ ಟ್ರಾಫಿಕ್ ಪೊಲೀಸರನ್ನು ಕೇಳಿದರು. ಕ್ಯಾಬ್ ಡ್ರೈವರ್ ಕೋಪಗೊಂಡು ನಾಯಕ್‌ಗೆ 500 ರೂ ದಂಡವನ್ನು ಪಾವತಿಸುತ್ತೀರಾ ಎಂದು ಕಿರುಚಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಬರೆಯಲಾಗಿದೆ.
ನಟಿ ಚಾಲಕನಿಗೆ ಕ್ಯಾಬ್ ಅನ್ನು ಪೊಲೀಸ್ ಠಾಣೆಗೆ ಹೋಗಲು ಹೇಳಿದ್ದು,, ಆದರೆ ಅವನು ಕತ್ತಲೆಯ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ, ನಂತರ ವಾಹನವನ್ನು ವೇಗಗೊಳಿಸಿ ಚುನಭಟ್ಟಿ ರಸ್ತೆ ಮತ್ತು ಪ್ರಿಯದರ್ಶನಿ ಪಾರ್ಕ್ ನಡುವಿನ ಮಾರ್ಗದ ಕಡೆಗೆ ಹೊರಟಿದ್ದಾನೆ. ಕೂಡಲೇ ನಾಯಕ್ ಅವರು ಉಬರ್ ಸೇಫ್ಟಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೆಲ್ಪ್‌ಲೈನ್ ಕಾರ್ಯನಿರ್ವಾಹಕರು ತಮ್ಮೊಂದಿಗೆ ಕರೆ ಮಾಡುತ್ತಿದ್ದರಿಂದ, ಚಾಲಕ ಮತ್ತೆ ಕ್ಯಾಬ್ ವೇಗವನ್ನು ಹೆಚ್ಚಿಸಿದ್ದಾನೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಾಯಕ್ ಅವರು ಚಾಲಕನನ್ನು ನಿಲ್ಲಿಸಲು ಹೇಳಿದರೂ ಕೇಳದೆ ಬೇರೊಬ್ಬರಿಗೆ ಕರೆ ಮಾಡಲು ಪ್ರಾರಂಭಿಸಿದನು. ಹೆದರಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದು, ಮೋಟಾರು ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮತ್ತು ಆಟೋರಿಕ್ಷಾ ಚಾಲಕ ಕ್ಯಾಬ್ ಚಾಲಕನನ್ನು ಹಿಂಬಾಲಿಸಿದ್ದು, ಆ ಬಳಿಕ ರಕ್ಷಿಸಲಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ.
“ನಾನು ಸುರಕ್ಷಿತವಾಗಿದ್ದೇನೆ ಆದರೆ ಖಂಡಿತವಾಗಿಯೂ ಹೆದರುತ್ತೇನೆ” ಎಂದು ನಾಯಕ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.