ಕೋವಿಡ್ ಬಗ್ಗೆ ಅಜಾಗ್ರತೆ ಬೇಡ… ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್
Team Udayavani, Dec 8, 2020, 8:00 PM IST
ನಮ್ಮ ಮನೆಗಳಲ್ಲಿರುವ ವೃದ್ದರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು
ಮುಂಬೈ: ಖ್ಯಾತ ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಜನರು ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಹೋಗುತ್ತಿರುವುದರ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಅನಿವಾರ್ಯ ಕಾರಣಗಳನ್ನು ಹೊರತು ಪಡಿಸಿ ಅನಗತ್ಯವಾಗಿ ಹೊರಗಡೆ ಸಂಚರಿಸಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಈ ಕುರಿತಾಗಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ನಟಿ ಮಾಧುರಿ ಜನರು ಕಳೆದ ಹಲವು ತಿಂಗಳುಗಳಿಂದ ಎಲ್ಲಿಯೂ ಹೊರ ಹೋಗದೆ ಮನೆಯಲ್ಲೆ ಇರುವ ಅನಿವಾರ್ಯತೆ ಬಂದೊದಗಿದೆ. ಅಷ್ಟು ಸಮಯದಿಂದ ಮನೆಯಲ್ಲಿಯೇ ಕುಳಿತು ಬೇಸರಗೊಂಡ ಜನರು ಹೊರ ಜಗತ್ತಿನ ಜೊತೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ನಮ್ಮ ಜಾಗೃತೆಯಲ್ಲಿ ಇರಲೇ ಬೇಕಾಗಿದೆ. ಹಾಗಾಗಿ ದಯವಿಟ್ಟು ಅನಾವಶ್ಯವಾಗಿ ಮನೆಯಿಂದ ಹೊರ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಮನೆಗಳಲ್ಲಿರುವ ವೃದ್ದರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಾವು ಆದಷ್ಟು ಗೆಳೆಯರೊಂದಿಗೆ ಗುಂಪು ಸೇರಿ ಮಾತನಾಡುವುದು ಮತ್ತು ಸಂಬಂಧಿಕರೊಂದಿಗೆ ಗುಂಪಿನಲ್ಲಿ ಬೆರೆಯುವುದನ್ನು ನಿಲ್ಲಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ:ಎವರೆಸ್ಟ್ ಈಗ ಮತ್ತಷ್ಟು ಎತ್ತರ; ಶಿಖರದ ಪರಿಷ್ಕೃತ ಮಾಹಿತಿ ಬಿಡುಗಡೆ!
ಈ ಸಂದರ್ಭದಲ್ಲಿ ಬಯೋ ಬಬಲ್ ಸೆಟ್ ಅಪ್ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡಿರುವ ನಟಿ ಮಾಧುರಿ ದೀಕ್ಷಿತ್ ಇದು ನನಗೆ ಸಂತೋಷ ತಂದಿದೆ ಎಂದಿದ್ದಾರೆ. ಈ ನಡುವೆ ನಾವು ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಮುಂಜಾಗೃತಾ ಕ್ರಮಗಳನ್ನು ಕೈ ಗೊಂಡಿದ್ದು, ಸಿನಿಮಾ ಚಿತ್ರಿಕರಣದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರೂ ಚಿತ್ರಿಕರಣಕ್ಕಿಂತ ಮೊದಲು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಗುತ್ತದೆ. ಮತ್ತು ಮಾಸ್ಕ್ ಸೇರಿದಂತೆ ಎಲ್ಲಾ ವಿಧವಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹಚ್ಚಿಸುವ ಆಹಾರವನ್ನು ಸೇವಿಸಲಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.