ಮಹಾಭಾರತದಲ್ಲಿ ಶ್ರೀ ಕೃಷ್ಣನ ಪಾತ್ರವನ್ನೇ ನಿರಾಕರಿಸಿದ್ದರು ನಿತೀಶ್ ಭಾರಧ್ವಜ್ ; ಕಾರಣ?
ವಿದುರ ಅಥವಾ ಅಭಿಮನ್ಯು ಪಾತ್ರ ಬೇಕೆಂದು ಪಟ್ಟು ಹಿಡಿದಿದ್ದರಂತೆ ನಿತೀಶ್!
Team Udayavani, Apr 16, 2020, 6:43 PM IST
ಮುಂಬಯಿ: ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಜನರೆಲ್ಲಾ ಮನೆಯಲ್ಲೇ ಇರುವಂತ ಅನಿವಾರ್ಯ ಪರಿಸ್ಥಿತಿಯನ್ನು ಕೋವಿಡ್ 19 ವೈರಸ್ ನಿರ್ಮಾಣ ಮಾಡಿದೆ. ಮನೆಯಲ್ಲೇ ಕುಳಿತಿರುವ ಜನರನ್ನು ಮನರಂಜಿಸಲು ದೂರದರ್ಶನ ತನ್ನ ಸುವರ್ಣ ಯುಗವನ್ನು ಮತ್ತೆ ಪ್ರಾರಂಭಿಸಿದೆ. 80-90ರ ದಶಕದಲ್ಲಿ ದೇಶದೆಲ್ಲೆಡೆ ಮನೆಮಾತಾಗಿದ್ದ ಕ್ಲಾಸಿಕ್ ಧಾರಾವಾಹಿಗಳನ್ನು ಡಿಡಿ ಇದೀಗ ಮರು ಪ್ರಸಾರ ಮಾಡುತ್ತಿದೆ.
ಇದರಲ್ಲಿ ಬಿ.ಆರ್. ಛೋಪ್ರಾ ನಿರ್ಮಾಣದಲ್ಲಿ, ಬಿ.ಆರ್. ಛೋಪ್ರಾ ಹಾಗೂ ರವಿ ಛೋಪ್ರಾ ನಿರ್ದೇಶನದಲ್ಲಿ ಮೂಡಿಬಂದ ಭಾರತದ ಅತ್ಯದ್ಭುತ ಮಹಾಕಾವ್ಯ ‘ಮಹಾಭಾರತ’ವೂ ಒಂದು. ಇದರಲ್ಲಿ ಬರುವ ಒಂದೊಂದು ಪಾತ್ರಗಳೂ ಬಹಳಷ್ಟು ತೂಕದ್ದೇ ಆಗಿವೆ.
ಹೀಗೆ ಮಹಾಭಾರತದಲ್ಲಿ ಬಹಳ ತೂಕವಿರುವ ಪಾತ್ರಗಳಲ್ಲಿ ಶ್ರೀ ಕೃಷ್ಣನ ಪಾತ್ರವೂ ಒಂದಾಗಿದೆ. ಒಂದು ಹಂತದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲು ಪ್ರಮುಖ ಕಾರಣೀಕರ್ತನಾಗಿ ಧರ್ಮಸಂಸ್ಥಾಪನೆಯ ಜವಾಬ್ದಾರಿಯನ್ನು ಹೊತ್ತ ದೇವಮಾನವನಾಗಿ ಶ್ರೀಕೃಷ್ಣನ ಪಾತ್ರ ಮಹಾಭಾರತದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಈ ಪೌರಾಣಿಕ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದು ನಟ ನಿತೀಶ್ ಭಾರಧ್ವಜ್. ಅವರ ಆ ಹಸನ್ಮುಖಿ ಮುಖಭಾವ ಮತ್ತು ತುಂಟನಗುವಿನಿಂದ ಕೂಡಿದ ನಟನೆ ಅವರನ್ನು ಈ ಧಾರಾವಾಹಿ ಮುಗಿಯುವದರೊಳಗೆ ಸ್ಟಾರ್ ಪಟ್ಟಕ್ಕೇರಿಸಿತ್ತು.
ಆದರೆ ಮಹಾಭಾರತ ಧಾರಾವಾಹಿಗೆ ನಟರ ಆಯ್ಕೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿತೀಶ್ ಅವರನ್ನು ನಿರ್ದೇಶಕ ರವಿ ಛೋಪ್ರಾ ಅವರು ಕೃಷ್ಣನ ಪಾತ್ರಕ್ಕೇ ಆಯ್ಕೆ ಮಾಡಿದ್ದರಂತೆ. ಅದಕ್ಕೆ ಮುಖ್ಯ ಕಾರಣ ನಿತೀಶ್ ಅವರ ಆಕರ್ಷಕ ನಗು. ಒಟ್ಟು 55 ಜನರನ್ನು ಸ್ಕ್ರೀನ್ ಟೆಸ್ಟ್ ನಡೆಸಿದ ಬಳಿಕ ನಿತೀಶ್ ಗೆ ಕೃಷ್ಣನ ಪಾತ್ರ ಒಲಿದು ಬಂದಿತ್ತು.
ಆದರೆ ಈ ಧಾರಾವಾಹಿಯಲ್ಲಿ ನಿತೀಶ್ ಮಾಡಲು ಬಯಸಿದ್ದು ವಿದುರನ ಪಾತ್ರವನ್ನಂತೆ. ಆದರೆ ನಿತೀಶ್ ಅವರ ಗೆಳೆಯರೂ ಆಗಿದ್ದ ಬಿ ಆರ್ ಛೋಪ್ರಾ ಅವರು ಈ ಪಾತ್ರ ನಿತೀಶ್ ಗೆ ಹೊಂದುವುದಿಲ್ಲ ಎಂದು ಹೇಳಿದ ಬಳಿಕ ನಿತೀಶ್ ಅಭಿಮನ್ಯು ಪಾತ್ರಕ್ಕೆ ಬೇಡಿಕೆ ಇಟ್ಟಿದ್ದರಂತೆ.
ಆದರೆ ಕೊನೆಗೂ ರವಿ ಛೋಪ್ರಾ ಅವರ ಒತ್ತಾಯದ ಮೇರೆಗೆ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೊಟ್ಟ ನಿತೀಶ್ ಗೆ ಈ ಪಾತ್ರವೇ ಸೆಟ್ ಆಗಿ ಅದರಲ್ಲಿ ಜನಪ್ರಿಯತೆ ಗಳಿಸಿದ್ದು ಮಾತ್ರ ಇದೀಗ ಇತಿಹಾಸ.
ಅಂದಹಾಗೆ ಶ್ರೀ ಕೃಷ್ಣನ ರೀತಿಯ ಬಹುತೂಕದ ಪಾತ್ರವನ್ನು ನಿಭಾಯಿಸಲು ಅನುಭವಿ ನಟನೇ ಆಗಬೇಕೆಂಬ ಕಾರಣಕ್ಕೆ ನಿತೀಶ್ ಅವರು ಈ ಪಾತ್ರವನ್ನು ಪ್ರಾರಂಭದಲ್ಲಿ ನಿರಾಕರಿಸಿದ್ದರು ಎಂಬುದನ್ನು ನಿತೀಶ್ ಇದೀಗ ನೆನಪಿಸಿಕೊಳ್ಳುತ್ತಾರೆ.
ಮಹಾಭಾರತ ಧಾರಾವಾಹಿ ನಿರ್ಮಾಣದ ಸಂದರ್ಭದಲ್ಲಿ ನಿತೀಶ್ ಅವರಿಗೆ 23 ವರ್ಷ ಪ್ರಾಯ. ಹಾಗಾಗಿ ಒಂದು ವೇಳೆ ಅವರು ವಿದುರನ ಪಾತ್ರ ನಿಭಾಯಿಸಿದರೆ ಆ ಪಾತ್ರ ಕೆಲವು ಕಂತುಗಳ ಬಳಿಕ ವೃದ್ಧನಾಗುವುದರಿಂದ ನಿತೀಶ್ ಅವರಿಗೆ ನಂತರ ಕೆಲಸ ಇಲ್ಲದಂತಾಗುತ್ತದೆ ಎಂದು ಯೋಚಿಸಿ ಅವರಿಗೆ ನಕುಲನ ಪಾತ್ರಕ್ಕೆ ಆಹ್ವಾನ ನೀಡಲಾಗಿತ್ತಂತೆ.
ಆದರೆ ನಿತೀಶ್ ಅದನ್ನು ನಿರಾಕರಿಸಿ, ಹಾಗಿದ್ದಲ್ಲಿ ತನಗೆ ಅಭಿಮನ್ಯುವಿನ ಪಾತ್ರವನ್ನು ಕೊಡುವಂತೆ ಕೇಳಿಕೊಂಡಿದ್ದರುಆದರೆ ಆ ಬಳಿಕ ಅವರಿಗೆ ಶ್ರೀ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡುವಂತೆ ಸೂಚಿಸಲಾಯಿತು ಎಂಬುದನ್ನು ನಿತೀಶ್ ಅವರು ಈ ಸಂದರ್ಭದಲ್ಲಿ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.