ಉತ್ತರಾಖಂಡ ದುರಂತದಲ್ಲಿ ತಂದೆ ಕಳೆದುಕೊಂಡ 4 ಮಕ್ಕಳ ದತ್ತು ಪಡೆದ ನಟ ಸೋನು !
Team Udayavani, Feb 24, 2021, 5:04 PM IST
ಉತ್ತರಾಖಂಡ : ನೀರ್ಗಲ್ಲು ಸ್ಫೋಟ ದುರಂತದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದ 4 ಹೆಣ್ಣು ಮಕ್ಕಳನ್ನು ಚಿತ್ರನಟ ಸೋನು ಸೂದ್ ದತ್ತು ಪಡೆದಿದ್ದಾರೆ.
ಫೆ.7 ರಂದು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಸ್ಫೋಟ ದುರಂತದಲ್ಲಿ ಸಾಕಷ್ಟು ಜನ ಪ್ರಾಣಹಾನಿಯಾಗಿತ್ತು. ನೂರಾರು ಜನ ಕಣ್ಮರೆಯಾಗಿದ್ದರು. ಒಂದಿಷ್ಟು ಜನರ ಮೃತ ದೇಹ ಪತ್ತೆಯಾಗಿದ್ದವು.
ಪ್ರವಾಹದ ಹೊಡೆತಕ್ಕೆ ತಪೋವನದಲ್ಲಿ ನಡೆಯುತ್ತಿದ್ದ ಜಲವಿದ್ಯುತ್ ಯೋಜನೆಯ ಕಾಮಾಗಾರಿಯಲ್ಲಿ ತೊಡಗಿದ್ದ ಅಲಾಮ್ ಸಿಂಗ್ ಬಂದೀರ್ ಕೊಚ್ಚಿಕೊಂಡು ಹೋಗಿದ್ದರು. ರಕ್ಷಣಾ ಕಾರ್ಯದ ವೇಳೆ ಅವರ ಮೃತ ದೇಹ ಪತ್ತೆಯಾಗಿತ್ತು. ಮನೆಯ ಆಧಾರ ಸ್ಥಂಬ ಕುಸಿದಿದ್ದರಿಂದ ಆತನ ಕುಟುಂಬ ಅಕ್ಷರಶಃ ಬೀದಿಗೆ ಬಂದಿತ್ತು. ನಾಲ್ಕು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಮೃತನ ಪತ್ನಿ ದಿಕ್ಕುತೋಚದಂತಾಗಿದ್ದರು. ಇವರ ಕಷ್ಟಕ್ಕೆ ನೆರವಾಗುವಂತೆ ಸೋಷಿಯಲ್ ಮೀಡಿಯಾಗಳು ನಟ ಸೋನು ಸೂದ್ ಅವರಿಗೆ ಮನವಿ ಮಾಡಿದ್ದವು.
ಸಂಕಷ್ಟದಲ್ಲಿರುವ ಅಲಾಮ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿರುವ ಸೋನು, ಆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆ ಮಾಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹಾಗೂ ಅವರ ಕಲ್ಯಾಣ ನನ್ನ ಕರ್ತವ್ಯ ಎಂದು ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.