ಮುಂಬೈ: ವಿವಾಹವಾಗಲು ನಕಾರ, ರಸ್ತೆ ಮಧ್ಯೆಯೇ ನಟಿಗೆ ಚೂರಿ ಇರಿದು ಪರಾರಿ!
ಮಾಲ್ವಿ ಜತೆ ಸಂಬಂಧ ಹೊಂದುವ ಬಯಕೆ ವ್ಯಕ್ತಪಡಿಸಿದ್ದು, ತಾನು ವಿವಾಹವಾಗುವುದಾಗಿಯೂ ಪೀಡಿಸುತ್ತಿದ್ದ
Team Udayavani, Oct 27, 2020, 6:15 PM IST
ಮುಂಬೈ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ನೇಹಿತನಾದ ವ್ಯಕ್ತಿಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡು ನಟಿ ಮಾಲ್ವಿ ಮಲೋತ್ರಾಗೆ ಯುವಕ ರಸ್ತೆಯಲ್ಲಿಯೇ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ(ಅಕ್ಟೋಬರ್ 26, 2020) ನಡೆದಿರುವುದಾಗಿ ವರದಿ ತಿಳಿಸಿದೆ.
ವಿಶಾಲ್ ಮಿಶ್ರಾ ನಿರ್ದೇಶನದ ಹೋಟೆಲ್ ಮಿಲನ್ ಹಿಂದಿ ಸಿನಿಮಾದಲ್ಲಿ ನಟಿಸಿದ್ದ ಮಾಲ್ವಿ, ಟಿವಿ ಶೋಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಸೋಮವಾರ ರಾತ್ರಿ ವೆರ್ಸೋವಾದ ಫಿಶರೀಶ್ ಯೂನಿರ್ವಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ನಟಿಯ ಹೊಟ್ಟೆ ಹಾಗೂ ಎರಡು ಕೈಗಳಿಗೆ ಸೇರಿ ಮೂರು ಬಾರಿ ಚೂರಿಯಿಂದ ಇರಿದು ತನ್ನ ಆಡಿ ಕಾರಿನಲ್ಲಿ ಪರಾರಿಯಾಗಿದ್ದ. ಈತನನ್ನು ಕುಮಾರ್ ಮಹಿಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. ನಟಿ ಮಾಲ್ವಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
2019ರಲ್ಲಿ ಮಾಲ್ವಿಯ ಫೇಸ್ ಬುಕ್ ಫ್ರೆಂಡ್ ಆದ ನಂತರ ಮಹಿಪಾಲ್, ತಾನು ಮುಂದೆ ಸಿನಿಮಾ ನಿರ್ಮಾಪಕ ಆಗಬೇಕು ಎಂದು ಹೇಳುತ್ತಿದ್ದ. ಅಲ್ಲದೇ ಮಾಲ್ವಿಯನ್ನು ಈತ ಕೆಲವು ಬಾರಿ ಭೇಟಿಯಾಗಿದ್ದ ಎಂದು ವರದಿ ತಿಳಿಸಿದೆ.
ಮಾಲ್ವಿ ನೀಡಿದ ದೂರಿನ ಪ್ರಕಾರ, ಮಾಲ್ವಿ ಜತೆ ಸಂಬಂಧ ಹೊಂದುವ ಬಯಕೆ ವ್ಯಕ್ತಪಡಿಸಿದ್ದು, ತಾನು ವಿವಾಹವಾಗುವುದಾಗಿಯೂ ಪೀಡಿಸುತ್ತಿದ್ದ ಎಂದು ತಿಳಿಸಿದೆ. ಆದರೆ ಆತನ ಪ್ರಸ್ತಾಪವನ್ನು ಮಾಲ್ವಿ ತಿರಸ್ಕರಿಸಿದ್ದು, ಆತನ ಜತೆಗಿನ ಎಲ್ಲಾ ಸಂವಹನ, ಮಾತುಕತೆಯನ್ನು ನಿಲ್ಲಿಸಿಬಿಟ್ಟಿದ್ದು, ಇದರಿಂದ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಹಿಪಾಲ್ ನಿರ್ಧರಿಸಿದ್ದ ಎಂದು ವರದಿ ವಿವರಿಸಿದೆ.
ಆರೋಪಿ ಮಹಿಪಾಲ್ ವಿರುದ್ಧ ಕೊಲೆ ಯತ್ನ ಹಾಗೂ ಕಿರುಕುಳ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ಮುಂಬೈ ಪೊಲೀಸ್ ವಕ್ತಾರ ಎಸ್.ಚೈತನ್ಯಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
MUST WATCH
ಹೊಸ ಸೇರ್ಪಡೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.