ಟೊಮ್ಯಾಟೋ ವ್ಯಾಪಾರಿಯ ಕಷ್ಟಕ್ಕೆ ಸ್ಪಂದಿಸಿದ ನಟ ವಿಜಯ್ ವರ್ಮಾ; ಸರಳತೆ ಮೆಚ್ಚಿದ ಫ್ಯಾನ್ಸ್
Team Udayavani, Jul 29, 2023, 6:41 PM IST
ಮುಂಬಯಿ: ಟೊಮ್ಯಾಟೋ ಬೆಲೆ ಗಗಕ್ಕೇರಿದೆ. ಗ್ರಾಹಕರು ತರಕಾರಿಯನ್ನು ಖರೀದಿಸುವಾಗ ಟೊಮ್ಯಾಟೋ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು ತರಕಾರಿಯನ್ನುಕೊಂಡು ಅವುಗಳನ್ನು ಮಾರಲು ಕಷ್ಟಪಡುತ್ತಾರೆ.
ರಾಮೇಶ್ವರ್ ಎನ್ನುವ ಸಣ್ಣ ವ್ಯಾಪಾರಿ ಸಗಟು ಮಾರುಕಟ್ಟೆಯಿಂದ ತರಕಾರಿಯನ್ನುಕೊಂಡು ಅವುಗಳನ್ನು ದೆಹಲಿಯ ಆಜಾದ್‌ಪುರದ ಸುತ್ತಮುತ್ತ ಮಾರುತ್ತಾರೆ. ಹೀಗೆ ಮಾಡಿದರೆ ಮಾತ್ರ ಅವರ ಜೀವನ ಸಾಗುತ್ತದೆ. ಇತ್ತೀಚೆಗೆ ಅವರು ಟೊಮ್ಯಾಟೋ ಕೊಳ್ಳಲು ಕಷ್ಟವಾಗುತ್ತದೆ, ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಮಾಧ್ಯಮವೊಂದರ ಮುಂದೆ ದುಃಖಿತರಾಗಿ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲಿ ಭಾರೀ ವೈರಲ್ ಆಗಿದೆ.
ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಯ ಬೆಲೆ ಹೆಚ್ಚಾಗಿದೆ. ಟೊಮ್ಯಾಟೋವನ್ನು ಕೊಳ್ಳುವಷ್ಟು ಹಣ ನನ್ನ ಬಳಿಯಿಲ್ಲ.ಇಲ್ಲಿಂದ ಕೊಂಡು ಹೋಗಿ ಮಾರಿದರೂ, ಅದು ಅಷ್ಟು ಬೆಲೆಗೆ ಮಾರಾಟವಾಗುತ್ತದೆ ಎನ್ನುವುದರ ಬಗ್ಗೆ ಖಾತ್ರಿಯಿಲ್ಲ. ಇದರಿಂದ ನನಗೆ ತುಂಬಾ ಕಷ್ಟವಾಗುತ್ತದೆ ಎಂದು ರಾಮೇಶ್ವರ್ ಹೇಳುತ್ತಾ ಭಾವುಕರಾಗುತ್ತಾರೆ.
ಇದನ್ನೂ ಓದಿ: B-town: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ ಹಿಂದಿ ಸಿನಿಮಾಗಳಿವು
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನಟ ವಿಜಯ್ ವರ್ಮಾ ಅವರ ಗಮನ ಸೆಳೆದಿದೆ.
“ಇದು ನಿಜಕ್ಕೂ ಹೃದಯವಿದ್ರಾವಕವಾಗಿದೆ. ಇವರಿಗೆ ಸಹಾಯ ಮಾಡುವ ಉಪಾಯವೇನಾದರೂ ಇದೆಯೇ? ಇವರ ಹಾಗೆ ಜೀವನೋಪಾಯವನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಏನಾದರೂ ಮಾರ್ಗವಿದೆಯೇ? ದಯವಿಟ್ಟು ಹೇಳಿ” ಎಂದು ವಿಜಯ್ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.
ಇವರ ಟ್ವೀಟ್ ವೈರಲ್ ಆಗಿದ್ದು, ನಟನ ಸರಳ ವ್ಯಕ್ತಿತ್ವವನ್ನು ಹಲವರು ಶ್ಲಾಘಿಸಿದ್ದಾರೆ.
This is heartbreaking. Is there any way one can help him and those who’ve lost livelihood like him? Pls batao https://t.co/Fq7rmIhjTV
— Vijay Varma (@MrVijayVarma) July 28, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.