ನಟ ವಿಶಾಲ್ ವಿರುದ್ಧ ‘ಮನಸೆಲ್ಲಾ ನೀನೆ’ ನಟಿ ಗಾಯತ್ರಿ ಲೈಂಗಿಕ ಕಿರುಕುಳದ ಆರೋಪ
Team Udayavani, Jun 2, 2021, 12:57 PM IST
ಕಾಲಿವುಡ್ ನ ನಟ ವಿಶಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್ ಅವರು ವಿಶಾಲ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ವಿಶಾಲ್ ಹಾಗೂ ಆತನ ಗೆಳೆಯರು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಇವರದ್ದು’ ಎಂದಿದ್ದಾರೆ.
‘ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ’ ಎಂದಿದ್ದಾರೆ.
ಅಲ್ಲದೇ ‘ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಾಯಕ ನಟಿಯರು ನಿನ್ನಿಂದ ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ‘ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್ ನಂತೆ ವರ್ತಿಸಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.