“ಆತ ಖಾಸಗಿ ಅಂಗದ ಫೋಟೋ ಕಳುಹಿಸಿದ್ದ..” ಆನ್ಲೈನ್ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
Team Udayavani, Apr 21, 2023, 2:28 PM IST
ಚೆನ್ನೈ: ಬಹುಭಾಷಾ ನಟಿ ಐಶ್ವರ್ಯ ಭಾಸ್ಕರನ್ ಅವರಿಗೆ ಕೆಲ ವ್ಯಕ್ತಿಗಳು ಆನ್ಲೈನ್ ನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಬಗ್ಗೆ ಸ್ವತಃ ನಟಿಯೇ ಈ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ʼಮಲ್ಟಿ ಮಮ್ಮಿʼ ನಲ್ಲಿ ಈ ಬಗ್ಗೆ ಅವರು ಮಾತನಾಡಿ ಮೌನ ಮುರಿದಿದ್ದಾರೆ. ಕೆಲ ಸಮಯದ ಹಿಂದೆ ನಟಿ ಐಶ್ವರ್ಯ ಭಾಸ್ಕರನ್ ಅವರು ಸೋಪ್ ( ಸಾಬೂನು) ಉದ್ಯಮವನ್ನು ಆರಂಭಿಸಿದ್ದಾರೆ. ಈ ಬ್ಯುಸಿನೆಸ್ ಇನ್ನಷ್ಟು ಜನರಿಗೆ ತಲುಪುದಕ್ಕಾಗಿ ನಟಿ ತಮ್ಮ ಫೋನ್ ನಂಬರ್ ನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿದ್ದಾರೆ.
ಈ ವಿಚಾರವೇ ನಟಿಗೆ ಮುಳ್ಳುವಾಗಿ ಪರಿಣಮಿಸಿದೆ. ತಮ್ಮ ಸೋಪ್ ಪ್ರೂಡಕ್ಟ್ ಸರಿಯಾಗಿ ಆರ್ಡರ್ ಆಗಲಿ, ಆ ಕಾರಣಕ್ಕಾಗಿ ನಂಬರ್ ಹಾಕಿದ್ದ ನಟಿಗೆ, ಕೆಲ ದಿನಗಳ ಬಳಿಕ ವಾಟ್ಸಾಪ್ ನಲ್ಲಿ ಅಸಭ್ಯ ರೀತಿಯ ಮೆಸೇಜ್, ಫೋಟೋ, ವಿಡಿಯೋಗಳು ಬರತೊಡಗಿದೆ.
ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಅನೇಕ ಮಂದಿ ಅಸಭ್ಯ ಮೆಸೇಜ್, ವಿಡಿಯೋಗಳನ್ನು ಕಳುಹಿಸಿದ್ದಾರೆ. ಒಬ್ಬ ವ್ಯಕ್ತಿಯಂತೂ ತನ್ನ ಖಾಸಗಿ ಅಂಗದ ಫೋಟೋವನ್ನು ಕಳುಹಿಸಿದ್ದಾನೆ.ಇದನ್ನು ನಾನೀಗ ಸೈಬರ್ ಪೊಲೀಸರಿಗೆ ದೂರಾಗಿ ನೀಡುವುದಿಲ್ಲ ಇದೇ ರೀತಿ ಇನ್ಮುಂದೆಯೂ ಮುಂದುವರೆದರೆ ಖಂಡಿತ ನಾನು ಇದನ್ನು ಪೊಲೀಸರಿಗೆ ಹೇಳುತ್ತೇನೆ ಎಂದಿದ್ದಾರೆ. ಈ ವಿಚಾರವನ್ನು ನನ್ನ ಮಗಳ ಸಲಹೆ ಮೇರೆಗೆ ನಿಮ್ಮೊಂದಿಗೆ ಹಂಚಿಕೊಂಡೇ ಎಂದಿದ್ದಾರೆ.
ನಾನು ಹಣಕ್ಕಾಗಿ ಸೋಪ್ ಮಾರುತ್ತೇನೆ ವಿನಃ ನನ್ನನು ನಾನು ಮಾರಿಕೊಳ್ಳುವುದಿಲ್ಲ ಎಂದು ನಟಿ ಹೇಳಿದ್ದಾರೆ.
ನಟಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ʼಎಜಮಾನ್ʼ , ʼಆರುʼ ʼಪಂಚತಂತ್ರಂʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.