ತನ್ನ ಬಾಡಿಗೆದಾರಿಂದ ಸದ್ಯ ಬಾಡಿಗೆ ಪಡೆದುಕೊಳ್ಳದಿರಲು ನಟಿ ಅಮೃತಾ ರಾವ್ ನಿರ್ಧಾರ
Team Udayavani, Jun 24, 2020, 12:59 AM IST
ಮುಂಬಯಿ: ಕೋವಿಡ್-19ನಿಂದ ದಿನ ಕೂಲಿ ಕಾರ್ಮಿಕರಿಂದ ಹಿಡಿದು ವಲಸೆ ಕಾರ್ಮಿಕರ ಬದುಕು ಅಕ್ಷರಶಃ ಅತಂತ್ರವಾಗಿದೆ.
ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಕೆಲವು ನಿಬಂಧನೆಗಳು ಈ ವರ್ಗಗಳ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನಲೆಯಲ್ಲಿಯೇ ಸೋಂಕಿನಿಂದ ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ನನ್ನ ವಸತಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಂದ ನಾನು ಕೆಲವು ತಿಂಗಳ ಕಾಲ ಬಾಡಿಗೆ ಕೇಳದಿರಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟಿ ಅಮೃತಾ ರಾವ್ ತಿಳಿಸಿದ್ದಾರೆ.
ಹೌದು ಮುಂಬಯಿ ನಗರದಲ್ಲಿ ಅನೇಕ ಕಡೆ ಅಪಾರ್ಟ್‌ಮೆಂಟ್ ಸೇರಿ ಇತರೆ ಆಸ್ತಿಗಳನ್ನು ಹೊಂದಿದ್ದು, ಬಾಲಿವುಡ್ ನಟಿ ಅಮೃತಾ ರಾವ್ ತನ್ನ ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಬಾಡಿಗೆದಾರಿಂದ ಬಾಡಿಗೆ ಹಣವನ್ನು ಪಡೆಯುವುದನ್ನು ಕೆಲವು ತಿಂಗಳ ಕಾಲ ಮುಂದೂಡಲು ನಿರ್ಧರಿಸಿದ್ದಾರೆ.
ಈ ಕುರಿತು ಸ್ವತ: ನಟಿ ಅಮೃತಾ ರಾವ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದು, ನನ್ನ ಅಪಾರ್ಟ್‌ಮೆಂಟ್‌ನಲ್ಲಿರುವ ಸಾಕಷ್ಟು ಬಾಡಿಗೆದಾರರು ಸಿನಿಮಾದಲ್ಲಿ ಪ್ರತಿದಿನದ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಇತರರಂತೆ ತಿಂಗಳ ಸಂಬಳ ದೊರೆಯುವುದಿಲ್ಲ.
ಈ ಸೋಂಕಿನಿಂದಾಗಿ ಇವರೆಲ್ಲರ ಜೀವನ ಅತಂತ್ರವಾಗಿದ್ದು, ಎಲ್ಲರೂ ತಮ್ಮ ಕುಟುಂಬಗಳೊಂದಿಗೆ ಊರಿಗೆ ತೆರಳುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Chhaava trailer: ʼಮರಾಠʼ ಸಾಮ್ರಾಟನಾಗಿ ಅಬ್ಬರಿಸಿದ ವಿಕ್ಕಿ ಕೌಶಲ್; ʼಛಾವಾʼ ಟ್ರೇಲರ್ ಔಟ್
Chhaava Movie: ಮರಾಠ ರಾಣಿಯಾಗಿ ರಶ್ಮಿಕಾ; ಚಾವಾ ಚಿತ್ರದ ಫಸ್ಟ್‌ಲುಕ್ ರಿಲೀಸ್
Saif Ali Khan;ಸಂಕಷ್ಟದಲ್ಲಿ ನೆರವಾದ ಆಟೋ ಚಾಲಕನಿಗೆ ಧನ್ಯವಾದ ಹೇಳಲು ಮರೆಯದ ನಟ
Actress: ʼನೀವು ಹಿಂದುವೋ- ಮುಸಲ್ಮಾನರೋ..” ಧರ್ಮದ ಪ್ರಶ್ನೆಯಿಂದ ಮನೆ ಹುಡುಕಲು ಪರದಾಡಿದ ನಟಿ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್