ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ
Team Udayavani, Jun 25, 2021, 6:41 PM IST
ಮುಂಬೈ : ಅಸಭ್ಯ ಪದಗಳಿಂದ ನಿಂದನೆ ಹಾಗೂ ಅನೇಕರಿಗೆ ಬೆದರಿಕೆ ಹಾಕಿದ ಆರೋಪದಡಿ ಬಾಲಿವುಡ್ ನಟಿ ಪಾಯಲ್ ರೋಹಟ್ಗಿ ಅವರನ್ನು ಗುಜರಾತ್ನ ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ವೈದ್ಯ ಪರಾಗ್ ಶಾ ಎಂಬುವವರು ಪೊಲೀಸ್ ಠಾಣೆಯಲ್ಲಿ ಪಾಯಲ್ ವಿರುದ್ಧ ದೂರು ದಾಖಲು ಮಾಡಿದ್ದರು. ಅಹ್ಮದಾಬಾದ್ನ ಹೌಸಿಂಗ್ ಸೊಸೈಟಿಯೊಂದರಲ್ಲಿ ಪರಾಗ್ ಸದಸ್ಯರಾಗಿದ್ದಾರೆ. ಈ ಹೌಸಿಂಗ್ ಸೊಸೈಟಿ ವಾಟ್ಸ್ಆಯಪ್ ಗ್ರೂಪ್ನಲ್ಲಿ ಪರಾಗ್ ವಿರುದ್ಧ ಹಾಗೂ ಆ ಸೊಸೈಟಿಯ ಮುಖ್ಯಸ್ಥರ ವಿರುದ್ಧ ಪಾಯಲ್ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ. ಅಲ್ಲದೆ, ಬೆದರಿಕೆ ಹಾಕಿದ್ದಾರೆ. ನಂತರ ಈ ಪೋಸ್ಟ್ಗಳನ್ನು ಅವರು ಡಿಲೀಟ್ ಮಾಡಿದ್ದಾರೆ. ಈ ಹಿನ್ನೆಲೆ ಈಕೆಯ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪಾಯಲ್ ಈ ರೀತಿ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ಪತ್ನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ 2019ರಲ್ಲಿ ಪಾಯಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಟ್ವಿಟರ್ನಲ್ಲಿ ಆಕ್ಟಿವ್ ಆಗಿದ್ದ ಇವರು, ಸಾಕಷ್ಟು ಬಾರಿ ಕೀಳಾಗಿ ಮಾತನಾಡಿದ್ದಿದೆ. ಇದರಿಂದ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಇಂಡಿಯಾ ಡಿಲೀಟ್ ಮಾಡಿದೆ.
ಇನ್ನು ’36 ಚೈನಾ ಟೌನ್’, ‘ಅಗ್ಲಿ ಔರ್ ಪಗ್ಲಿ’, ‘ಹೇ ಬೇಬಿ’ ವ್ಯಾಲೆಂಟೈನ್ ನೈಟ್ ಸೇರಿ ಸಾಕಷ್ಟು ಚಿತ್ರಗಳಲ್ಲಿ ಪಾಯಲ್ ನಟಿಸಿದ್ದಾರೆ. 2008ರಲ್ಲಿ ಬಿಗ್ ಬಾಸ್ಗೂ ಕೂಡ ಬಂದಿದ್ದರು. ವ್ರೆಸ್ಲರ್ ಸಂಗ್ರಾಮ್ ಸಿಂಗ್ ಜತೆ ಇವರು ಬಹುಕಾಲದಿಂದ ರಿಲೇಶನ್ಶಿಪ್ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.