ಬಂಗಾಲಿ ನಟಿಯ ಶಂಕಾಸ್ಪದ ಸಾವು; ಫ್ಲ್ಯಾಟಿನಲ್ಲಿ ಅರೆ ಕೊಳೆತ ಶವ ಪತ್ತೆ
Team Udayavani, Feb 8, 2017, 3:51 PM IST
ಕೋಲ್ಕತ : ಬಂಗಾಲಿ ಸಿನೆಮಾ ರಂಗದ ಅಷ್ಟೇನೂ ಪ್ರಸಿದ್ಧವಲ್ಲದ ನಟಿ ಬಿತಾಸ್ತಾ ಶಾಲಿನಿ ಸಾಹಾ ಎಂಬಾಕೆಯ ಅರೆ ಕೊಳೆತ ಶವವು ದಕ್ಷಿಣ ಕೋಲ್ಕತಾದ ಕಸಬಾ ಪ್ರದೇಶದಲ್ಲಿರುವ ಅವರ ಫ್ಲ್ಯಾಟಿನಲ್ಲಿ ಪತ್ತೆಯಾಗಿದೆ.
ಬಿತಾಸ್ತಾ ಅವರ ತಾಯಿ ಮಗಳನ್ನು ಫೋನ್ ಮೂಲಕ ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಿರಂತರವಾಗಿ ಕರೆ ಮಾಡುತ್ತಿದ್ದರು. ಆಕೆಯ ಯಾವುದೇ ಕರೆಗೆ ಮಗಳಿಂದ ಉತ್ತರ ಬಾರದಿದ್ದಾಗ ಆಕೆ ಖುದ್ದು ಮಗಳ ಫ್ಲ್ಯಾಟಿಗೆ ಬಂದು ಬಾಗಿಲು ತಟ್ಟಿದರೂ ಒಳಗಿಂದ ಯಾವುದೇ ಉತ್ತರ ಬರಲಿಲ್ಲ. ಆಗ ನೆರೆಮನೆಯವರ ಜತೆಗೂಡಿ ಬಿತಾಸ್ತಾಳ ತಾಯಿ ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ಬಂದು ಮನೆ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಬಿತಾಸ್ತಾಳ ಶವ ಅರೆ ಕೊಳೆತ ಸ್ಥಿತಿಯಲ್ಲಿ ಸೀಲಿಂಗ್ ಫ್ಯಾನಿನಿಂದ ನೇತಾಡುತ್ತಿದ್ದುದು ಕಂಡುಬಂತು.
ಬಿತಾಸ್ತಾಳ ಮಣಿಗಂಟಿನ ಮೇಲೆ ಆಳವಾದ ಸೀಳು ಗಾಯವಿತ್ತು. ಆಕೆಯ ದೇಹದ ಮೇಲೆ ಹಲವೆಡೆ ಗಾಯಗಳಿದ್ದವು. ಇದು ಆತ್ಮಹತ್ಯೆಯೇ ಕೊಲೆಯೇ ಎಂಬುದು ತತ್‌ಕ್ಷಣಕ್ಕೆ ಹೇಳುವಂತಿಲ್ಲ ಎಂದು ಪೊಲೀಸರು ಹೇಳಿದರು.
ಪೊಲೀಸರು ಪ್ರಾಥಮಿಕ ತನಿಖೆಯ ಅಂಗವಾಗಿ ಬಿತಾಸ್ತಾಳ ಫೇಸ್ ಬುಕ್ ತೆರೆದು ನೋಡಿದಾಗ ಆಕೆ ಕಳೆದ ಕೆಲವು ಸಮಯದಿಂದ ತನಗೆ ಖನ್ನತೆ ಇರುವುದಾಗಿಯೂ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿರುವುದು ಕಂಡುಬಂದಿದೆ. ಆದರೆ ಬಿತಾಸ್ತಾಗೆ ಯಾವ ಕಾರಣಕ್ಕೆ ಬದುಕು ಅಸಹನೀಯವಾಗಿತ್ತು, ಖನ್ನತೆ ಬಾಧಿಸುತ್ತಿತ್ತು ಎಂಬುದು ಗೊತ್ತಾಗಿಲ್ಲ.
“ಪ್ರಾಥಮಿಕ ಸಾಕ್ಷ್ಯಗಳಿಂದ ತೋರಿಬರುವಂತೆ ಬಿತಾಸ್ತಾ ಳದ್ದು ಆತ್ಮಹತ್ಯೆಯ ಪ್ರಕರಣವೆಂದು ಕಂಡುಬರುತ್ತದೆ. ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಈ ಪ್ರಕರಣದ ಹಲವು ವಿಷಯಗಳು ತೆರೆದುಕೊಳ್ಳಬಹುದು. ಆದರೂ ನಾವು ಕೇಸು ದಾಖಲಿಸಿಕೊಂಡು ವಿವಿಧ ಕೋನಗಳಿಂದ ಈ ಶಂಕಾಸ್ಪದ ಸಾವಿನ ತನಿಖೆಯನ್ನು ನಡೆಸುತ್ತಿದ್ದೇವೆ; ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವುದು ತನಿಖೆ ಪೂರ್ತಿಗೊಂಡಾಗ ಸಾಬೀತಾಗುತ್ತದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.