Adipurush: ಮೊದಲ ದಿನವೇ ದಾಖಲೆಯ ಕಲೆಕ್ಷನ್‌ನತ್ತ ʼಆದಿಪುರುಷ್ʼ: 1st Day ಗಳಿಕೆ ಎಷ್ಟು?
Team Udayavani, Jun 17, 2023, 10:27 AM IST
ಮುಂಬಯಿ: ಬಿಗ್ ಬಜೆಟ್ ʼಆದಿಪುರುಷ್ʼ ಸಿನಿಮಾ ರಿಲೀಸ್ ಆಗಿದೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದೆ.
ʼಬಾಹುಬಲಿʼ ಬಳಿಕ ನಟ ಪ್ರಭಾಸ್ ಅವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಸಿನಿಮಾಗಳು ಕಮ್ಮಿ. ಬಿಗ್ ಬಜೆಟ್ ನಲ್ಲಿ ತಯಾರಾದ ಓಂ ರಾವುತ್ ಅವರ ʼಆದಿಪುರುಷ್ʼ ಪ್ರಭಾಸ್ ಅವರಿಗೆ ದೊಡ್ಡ ಬ್ರೇಕ್ ತಂದು ಕೊಡುತ್ತದೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಆಧರಿಸಿ ತೆರೆಗೆ ತರಲಾಗಿರುವ ʼಆದಿಪುರುಷ್ʼಸಿನಿಮಾ ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು. ಈ ಹಿಂದೆ ಟೀಸರ್ ನಲ್ಲಿ ಕಳಪೆ ವಿಎಫ್ ಎಕ್ಸ್ ಬಳಸಿದ ಕಾರಣಕ್ಕೆ ಹಾಗೂ ರಾವಣ ಸೇರಿದಂತೆ ಕೆಲ ಪಾತ್ರಗಳನ್ನು ತೋರಿಸಿದ ರೀತಿಗೆ ಸಿನಿಮಾ ತಂಡ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಆದ ಬಳಿಕವೂ ಕೆಲ ಜನರು ವಿಎಫ್ ಎಕ್ಸ್ ವಿಚಾರಕ್ಕೆ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ದರ್ಗಾ ತೆರವಿಗೆ ನೋಟಿಸ್: ಖಾಕಿ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಕ್ಕೆ ಬೆಂಕಿ; ಓರ್ವ ಸಾವು
ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ವಿಎಫ್ ಎಕ್ಸ್ ವಿಚಾರಕ್ಕೆ ಟ್ರೋಲ್ ಆಗಿದ್ದು, ಒಂದುಕಡೆಯಾದರೆ ಇನ್ನೊಂದೆಡೆ ಪ್ರಭಾಸ್ ಅವರ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಮನ ಅವತಾರದಲ್ಲಿ ಅವರ ನಟನೆ ಜನರ ಮನಗೆದ್ದಿದೆ.
ಎಲ್ಲೆಡೆ ಹೌಸ್ ಫುಲ್ ಕಂಡ ʼಆದಿಪುರುಷ್ʼ ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿದೆ. ಸ್ಯಾಕ್ನಿಲ್ಕ್ (Sacnilk) ಸಿನಿಮಾಗಳಿಸಿದ ಮೊದಲ ದಿನದ ಕಲೆಕ್ಷನ್ ನ್ನು ವರದಿ ಮಾಡಿದೆ. ʼಆದಿಪುರುಷ್ʼ ಹಿಂದಿ ವರ್ಷನ್ 35 ಕೋಟಿ ರೂ.ಗಳಿಸಿದೆ. ತೆಲುಗು ಭಾಷೆಯಲ್ಲಿ 58 ಕೋಟಿ ರೂ.ವನ್ನು ಕಲೆಕ್ಷನ್ ಮಾಡಿದೆ. ತಮಿಳಿನಲ್ಲಿ 0.4 ಕೋಟಿ ರೂ. ಮಲಯಾಳಂನಲ್ಲಿ 0.70 ಕೋಟಿ ರೂ. ಹಾಗೂ ಕನ್ನಡದಲ್ಲಿ .04 ಕೋಟಿ ರೂ.ಯನ್ನು ಗಳಿಸಿದೆ ಎಂದು ವರದಿ ತಿಳಿಸಿದೆ. ಒಟ್ಟು ಐದು ಭಾಷೆಯಲಿ ಸೇರಿ ಸಿನಿಮಾ ಮೊದಲ ದಿನ 95 ಕೋಟಿ ರೂ.ವನ್ನು ಗಳಿಸಿದೆ. ಇದು ಆರಂಭಿಕ ಅಂಕಿ ಅಂಶಗಳಾಗಿದ್ದು, ನಿಜವಾದ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದೆ.
500 ಕೋಟಿ ರೂ. ಬಜೆಟ್ ನಲ್ಲಿ ʼಆದಿಪುರುಷ್ʼ ಸಿನಿಮಾ ತಯಾರಾಗಿದೆ. ಕಳೆದ ಎರಡು ವರ್ಷಗಳಿಂದ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗುತ್ತಾ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.