Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್ ದೇವರಿಗೆ ಮೀಸಲು
Team Udayavani, Jun 6, 2023, 12:13 PM IST
ಮುಂಬಯಿ: ಈ ವರ್ಷದ ಬಹು ನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರುವ ʼಆದಿಪುರುಷ್ʼ ರಿಲೀಸ್ ಗೆ ದಿನಗಣನೆ ಬಾಕಿ ಉಳಿದಿದೆ. ಪ್ಯಾನ್ ಭಾಷೆಯಲ್ಲಿ ಸಿನಿಮಾ ಅದ್ದೂರಿಯಾಗಿ ಇದೇ ಜೂ.16 ರಂದು ರಿಲೀಸ್ ಆಗಲಿದೆ.
ಈ ಹಿಂದೆ ಸಿನಿಮಾದ ಟೀಸರ್ ನಲ್ಲಿ ವಿಎಫ್ ಎಕ್ಸ್ ಸೇರಿದಂತೆ, ಕೆಲ ಪಾತ್ರಗಳ ಸುತ್ತ ವಿವಾದ ಹುಟ್ಟಿಕೊಂಡಿತ್ತು. ಆ ಬಳಿಕ ಅದನ್ನು ಸರಿ ಮಾಡಿ, ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿತ್ತು. ಸಿನಿಮಾದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಆಧರಿಸಿ ತೆರೆಗೆ ತರಲಾಗುತ್ತಿರುವ ಸಿನಿಮಾಕ್ಕೆ ಓಂ ರಾವುತ್ ಅವರ ನಿರ್ದೇಶನವಿದೆ.
ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಈ ನಡುವೆ ಅನೌನ್ಸ್ ಮೆಂಟ್ ವೊಂದನ್ನು ಮಾಡಿದೆ. ಆದಿಪುರುಷ್ ಸಿನಿಮಾ ಯಾವೆಲ್ಲ ಕಡೆ ಸ್ಕ್ರೀನಿಂಗ್ ಆಗುತ್ತದೋ ಆ ಥಿಯೇಟರ್ ನ ಒಂದು ಸೀಟನ್ನು ಹನುಮಾನ್ ದೇವರಿಗೆ ಮೀಸಲು ಇಡಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ
ಎಲ್ಲೆಲ್ಲಿ ರಾಮಾಯಣ ಪಠಿಸುತ್ತಾರೋ ಅಲ್ಲಿ ಭಗವಾನ್ ಹನುಮಾನ್ ಕಾಣಿಸಿಕೊಳ್ಳುತ್ತಾನೆ ಎನ್ನುವುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸುವ ಸಲುವಾಗಿ ʼರಾಮʼನಾಗಿ ಕಾಣಿಸಿಕೊಳ್ಳುವ ಪ್ರಭಾಸ್ ಅವರ ʼಆದಿಪುರುಷ್ʼ ಪ್ರದರ್ಶನವಗುವ ಥಿಯೇಟರ್ ನ ಒಂದು ಆಸನವನ್ನು ಹನುಮಾನ್ ದೇವರಿಗೆ ಮೀಸಲು ಇಡಲು ನಿರ್ಧರಿಸಿದ್ದೇವೆ. ಭಗವಾನ್ ಹನುಮಂತನ ಸನ್ನಿಧಿಯಲ್ಲಿ ಅತ್ಯಂತ ವೈಭವ ಮತ್ತು ವೈಭವದಿಂದ ನಿರ್ಮಿಸಲಾದ ʼಆದಿಪುರುಷ್ʼ ನನ್ನು ನಾವೆಲ್ಲರೂ ನೋಡಬೇಕು ಎಂದು ಚಿತ್ರತಂಡ ಪ್ರಕಟಣೆವೊಂದರಲ್ಲಿ ಹೇಳಿದೆ.
ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಶೇಷನಾಗಿ ಸನ್ನಿ ಸಿಂಗ್ ಮತ್ತು ಭಜರಂಗನಾಗಿ ದೇವದತ್ತ ನಾಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾವಣನಾಗಿ ಸೈಫ್ ಆಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.
Team #Adipurush to dedicate one seat in every theater for Lord Hanuman 🚩🙏🏻
Jai Shri Ram 🙏 #Adipurush in cinemas worldwide on 16th June! ✨ #AdipurushTrailer2 #AdipurushOnJune16th#AdipurushActionTrailer#AdipurushIn3D #Prabhas #SaifAliKhan #KritiSanon #SunnySingh #OmRaut pic.twitter.com/UcP7Aafks8
— Movies wallah (@Movies_Wallah) June 6, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.