Aditya Narayan: ಅಭಿಮಾನಿಯ ಮೊಬೈಲ್ ಎಸೆದು,ಮೈಕ್‌ನಿಂದ ತಲೆಗೆ ಹೊಡೆದ ಖ್ಯಾತ ಬಿಟೌನ್ ಗಾಯಕ
Team Udayavani, Feb 12, 2024, 12:37 PM IST
ಛತ್ತೀಸ್‌ಗಢ: ಸೆಲೆಬ್ರಿಟಿಗಳು ಅಭಿಮಾನಿಗಳೊಂದಿಗೆ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವುದುಂಟು. ಖ್ಯಾತ ಗಾಯಕರೊಬ್ಬರು ಅಭಿಮಾನಿಯೊಂದಿಗೆ ತೋರಿದ ವರ್ತನೆಗೆ ನೆಟ್ಟಿಗರು ಗಾಯಕನನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಾಲಿವುಡ್ ನ ಖ್ಯಾತ ಗಾಯಕ ಆದಿತ್ಯ ನಾರಾಯಣ್ ಅವರು ಅಭಿಮಾನಿಯೊಬ್ಬನ ಮೊಬೈಲ್ ಬಿಸಾಕಿ, ಮೈಕ್ ನಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛತ್ತೀಸ್‌ಗಢದ ಭಿಲಾಯ್ ನಲ್ಲಿರುವ ಕಾಲೇಜುವೊಂದರಲ್ಲಿ ಆದಿತ್ಯ ನಾರಾಯಣ್ ಅವರ ಸಂಗೀತ ಸಂಜೆ ಕಾರ್ಯಕ್ರಮವಿತ್ತು. ಆದಿತ್ಯ ಅವರು ಶಾರುಖ್ ಖಾನ್ ಅಭಿನಯದ ʼಡಾನ್ʼ ಸಿನಿಮಾದ ʼ ಆಜ್ ಕಿ ರಾತ್ʼ ಹಾಡನ್ನು ಹಾಡುತ್ತಿದ್ದರು.
ಇದನ್ನೂ ಓದಿ: Mangaluru; ಧರ್ಮಕ್ಕೆ ಅವಹೇಳನ ಮಾಡಿದ ಶಿಕ್ಷಕಿಯ ಅಮಾನತಿಗೆ ಶಾಸಕರು, ಹಿಂದೂ ಮುಖಂಡರ ಪಟ್ಟು
ಅವರ ಹಾಡನ್ನು ಕೇಳಲು ಸಾವಿರಾರು ಮಂದಿ ಸೇರಿದ್ದರು. ಫೋಟೋ ವಿಡಿಯೋಗಳನ್ನು ತೆಗೆಯುತ್ತಿದ್ದರು. ಈ ವೇಳೆ ಆದಿತ್ಯ ಅವರು ಮಧ್ಯದಲ್ಲಿ ಹಾಡನ್ನು ನಿಲ್ಲಿಸಿ, ವ್ಯಕ್ತಿಯೊಬ್ಬನ ಮೊಬೈಲ್ ಕಸಿದು, ತಲೆ ಮೇಲೆ ಮೈಕ್ ನಿಂದ ಹೊಡೆದು, ಮೊಬೈಲ್ ದೂರಕ್ಕೆ ಎಸೆದು ಹಾಡನ್ನು ಮುಂದುವರೆಸಿದ್ದಾರೆ.
ನೆಟ್ಟಿಗರು ಗಾಯಕನ ವರ್ತನೆಗೆ ಗರಂ ಆಗಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಗಾಯಕನ ಅಭಿಮಾನಿಯಾಗಲು ಈತ ಅರ್ಹನಾಗಿದ್ದಾನೆ” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.
ಬಾಲಿವುಡ್‌ನ ಹಿರಿಯ ಗಾಯಕ ಉದಿತ್ ನಾರಾಯಣ್ ಅವರ ಪುತ್ರರಾಗಿರುವ ಆದಿತ್ಯ ಅವರು ʼದಿಲ್ ಬೇಚಾರʼ , ʼರಾಮ್ ಲೀಲಾʼ ಮುಂತಾದ ಜನಪ್ರಿಯ ಚಿತ್ರಗಳಿಗೆ ಹಾಡಿದ್ದಾರೆ. ಅವರು ʼಪರ್ದೇಸ್ʼ, ʼರಂಗೀಲಾʼ ʼಜಬ್ ಪ್ಯಾರ್ ಕಿಸೀ ಹೋತಾ ಹೈʼ ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು.
ಗಾಯಕ ಮಾತ್ರವಲ್ಲದೆ ಅವರು, ಇಂಡಿಯನ್ ಐಡಲ್, ಝೀ ಕಾಮಿಡಿ ಶೋ, ರೈಸಿಂಗ್ ಸ್ಟಾರ್ 3, ಸಾ ರೆ ಗಾ ಮಾ ಪಾ, ಎಕ್ಸ್ ಫ್ಯಾಕ್ಟರ್ ಇಂಡಿಯಾ ಮುಂತಾದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.
Bhilai, #Chhattisgarh: During a concert in college…Angry Aditya Narayan Hits Fan, Snatches Phone and Throws It Away During his live performance; Video Goes Viral#AdityaNarayan #stardom #singer pic.twitter.com/Wtb3rqghCK
— Surabhi Tiwari🇮🇳 (@surabhi_tiwari_) February 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.