ಎರಡು ಬಾರಿ ಕ್ಯಾನ್ಸರ್ ಗೆದ್ದ ಖ್ಯಾತ ನಟಿ ಇಂದು ಕೋಮಾಕ್ಕೆ ಹೋಗುವ ಸ್ಥಿತಿಯಲ್ಲಿ..
Team Udayavani, Nov 7, 2022, 12:54 PM IST
ಕೋಲ್ಕತ್ತಾ: ಕಳೆದ ಕೆಲ ವರ್ಷಗಳಿಂದ ಬಣ್ಣದ ಲೋಕದಿಂದ ಕೇಳಿ ಬಂದ ಆಘಾತಕಾರಿ ಸುದ್ದಿಗಳು ಇನ್ನೂ ಮಾಸಿಲ್ಲ. ಸುಶಾಂತ್ ಸಿಂಗ್, ಇರ್ಫಾನ್ ಖಾನ್, ಸಿದ್ದಾರ್ಥ್ ಶುಕ್ಲಾ, ಪುನೀತ್ ರಾಜ್ ಕುಮಾರ್ ಹೀಗೆ ಅದ್ಭುತ ಪ್ರತಿಭೆಗಳನ್ನು ನಾವು ಕಳೆದುಕೊಂಡಿದ್ದೇವೆ. ಆ ನೋವು ಇಂದಿಗೂ ಹಾಗೆಯೇ ಇದೆ.
ಈ ನಡುವೆ ಮತ್ತೊಬ್ಬ ಖ್ಯಾತ ನಟಿಯ ಸ್ಥಿತಿ ಗಂಭೀರವಾಗಿದೆ. ಈ ನಟಿಗೆ ಇಂಥ ಆಘಾತ ಮೊದಲ ಬಾರಿ ಅಲ್ಲ. ಇದು ಮೂರನೇ ಬಾರಿ.
ಆ್ಯಂಡ್ರಿಲಾ ಶರ್ಮಾ ಬೆಂಗಾಲಿ ಸಿನಿಮಾರಂಗದಲ್ಲಿ ಜನಪ್ರಿಯ ಹೆಸರು. ʼ ಜುಮೂರ್ʼ , ʼ ಭೋಲೋ ಬಾಬಾ ಪರ್ ಕರೇಗಾʼ ಸಿನಿಮಾಗಳು ಬೆಂಗಾಲಿ ಬಣ್ಣದ ಲೋಕದಲ್ಲಿ ಆ್ಯಂಡ್ರಿಲಾ ಅವರಿಗೆ ಹೆಸರು ತಂದು ಕೊಟ್ಟಿತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿಗೆ ಕ್ಯಾನ್ಸರ್ ರೋಗ ವಕ್ಕರಿಸುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದ ಪರಿಣಾಮ ಕ್ಯಾನ್ಸರ್ ನಿಂದ ಆ್ಯಂಡ್ರಿಲಾ ಹೊರ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್ ಕಾಡುತ್ತದೆ. ಈ ಬಾರಿಯೂ ದಿಟ್ಟೆಯಾಗಿ ಹೋರಾಡಿ, ಆಪರೇಷನ್ ಮೂಲಕ ಕ್ಯಾನ್ಸರ್ ಗೆಡ್ಡೆ ತೆಗೆದು, ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್ ಗೆದ್ದು, ಇತರರಿಗೆ ಸ್ಪೂರ್ತಿಯಾಗಿದ್ದರು.
ಇದನ್ನೂ ಓದಿ: ದನುಷ್ಕಾ ಗುಣತಿಲಕರನ್ನು ಎಲ್ಲಾ ಮಾದರಿ ಕ್ರಿಕೆಟ್ ನಿಂದ ಅಮಾನತು ಮಾಡಿದ ಲಂಕಾ ಬೋರ್ಡ್
ಈಗ ಮತ್ತೆ ನಟಿಗೆ ಸ್ಟ್ರೋಕ್ ಉಂಟಾಗಿದೆ. ಇದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ್ಯಂಡ್ರಿಲಾ ಶರ್ಮಾ ಅವರ ದೇಹದ ಕೆಲವು ಭಾಗವು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಅವರು ಕೋಮಾಕ್ಕೆ ಹೋಗುಬಹುದೆಂದು ಎಂದು ವೈದ್ಯರು ಹೇಳಿದ್ದಾರೆ.
ಆ್ಯಂಡ್ರಿಲಾ ಅವರ ಸದ್ಯದ ಸ್ಥಿತಿ ಗಂಭೀರವಾಗಿದ್ದು ಅವರನ್ನು ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇಷ್ಟು ಸಣ್ಣ ವಯಸ್ಸಿನ್ಲಲೇ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಯಾಗಿದೆ. ಆದಷ್ಟು ಬೇಗ ತಮ್ಮ ಮೆಚ್ಚಿನ ನಟಿ ಗುಣಮಖವಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.