ಇಂಡಿಯನ್-2 ಬಳಿಕ ಚಿತ್ರ ನಟನೆಗೆ ಕಮಲ ಹಾಸನ್ ವಿದಾಯ ?
Team Udayavani, Dec 5, 2018, 12:27 PM IST
ಚೆನ್ನೈ : ಪ್ರಕೃತ ನಿರ್ಮಾಣ ಹಂತದಲ್ಲಿರುವ ಶಂಕರ್ ನಿರ್ದೇಶನದ “ಇಂಡಿಯನ್-2′ ಚಿತ್ರ ಮುಗಿದೊಡನೆ ದಕ್ಷಿಣದ ಮಹೋನ್ನತ ಚಿತ್ರ ನಟ ಕಮಲ ಹಾಸನ್ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ ?
ಕಮಲ ಹಾಸನ್ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ ಸುಳಿವು ಸಿಕ್ಕಿದೆ. ‘ಪರಿಣಾಕಾರಿ ರಾಜಕಾರಣಿ’ ಯಾಗುವ ಉದ್ದೇಶದಿಂದ ತಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ ಎಂದು ಕಮಲ್ ಹೇಳಿದ್ದಾರೆ.
ಮಕ್ಕಳ್ ನೀತಿ ಮಯ್ಯಮ್ (ಎಂಎನ್‌ಎಂ) ಪಕ್ಷದ ಸ್ಥಾಪಕರಾಗಿರುವ ಕಮಲ ಹಾಸನ್ 1996ರಲ್ಲಿ “ಇಂಡಿಯನ್’ ಎಂಬ ಸೂಪರ್ ಹಿಟ್ ಚಿತ್ರ ನೀಡಿದ್ದರು. ಇದೀಗ ಇಂಡಿಯನ್-2 ಚಿತ್ರ ಬಹುತೇಕ ಅವರ ಕೊನೆಯ ಸಿನಿಮಾ ಆಗಲಿದೆ ಎನ್ನಲಾಗಿದೆ.
“ನೀವೊಬ್ಬ ಪರಿಣಾಮಕಾರಿ ರಾಜಕಾರಣಿಯಾಗಬೇಕಿದ್ದರೆ ನೀವು ನಿಮ್ಮ ಸಂಪೂರ್ಣ ಸಮಯವನ್ನು ರಾಜಕಾರಣಕ್ಕೆ ಕೊಡಬೇಕಾಗುತ್ತದೆ. ಹಾಗಾಗಿ ನಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ” ಎಂದು ಕಮಲ ಹಾಸನ್ ಹೇಳಿದರು.
”ಹಾಗಿದ್ದರೂ ನನ್ನ ಪ್ರೊಡಕ್ಷನ್ ಕಂಪೆನಿ ಮುಂದುವರಿಯುತ್ತದೆ. ನನ್ನ ಬದಲು ಬೇರೊಬ್ಬರು ಅದನ್ನು ನಡೆಸುತ್ತಾರೆ” ಎಂದು 64ರ ಹರೆಯದ ನಟ-ರಾಜಕಾರಣಿ ಕಮಲ ಹಾಸನ್ ಅವರು ಕೊಚ್ಚಿ ಸಮೀಪದ ಕಿಳಕ್ಕಂಬಳಮ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇಂಡಿಯನ್-2 ಅಲ್ಲದೆ ಕಮಲ ಹಾಸನ್ ಅವರ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಅವೆಂದರೆ ಸ್ವಂತ ನಿರ್ದೇಶನದ ತ್ರಿಭಾಷಾ ಚಿತ್ರ ಶಾಬಾಷ್ ನಾಯ್ಡು ಮತ್ತು ಹೆಸರಿಡದ ಇನ್ನೊಂದು ಚಿತ್ರ. ಇವುಗಳ ಬಳಿಕ ಬೇರೆ ಯಾವುದೇ ಹೊಸ ಚಿತ್ರಕ್ಕೆ ಕಮಲ ಹಾಸನ್ ಸಹಿ ಮಾಡುವುದಿಲ್ಲ ಎಂದು ಅವರಿಗೆ ನಿಕಟವಿರುವ ಚೆನ್ನೈ ಮೂಲಗಳು ತಿಳಿಸಿವೆ.
1992ರ ಸೂಪರ್ ಹಿಟ್ “ತೇವರ್ ಮಗನ್’ ಚಿತ್ರಕ್ಕಾಗಿ ಕಮಲ ಹಾಸನ್ ಅವರಿಗೆ ನ್ಯಾಶನಲ್ ಅವಾರ್ಡ್ ಸಿಕ್ಕಿದೆ. ಅವರ ಈ ಮೊದಲಿನ ವಿಶ್ವರೂಪಂ-2 ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೋತಾ ಹೊಡೆದಿದೆ. ಮೂನ್ರಾಂ ಪಿರೈ (1983), ನಾಯಗನ್ (1988), ತೇವರ್ ಮಗನ್ (1992)ಮತ್ತು ಇಂಡಿಯನ್ (1996) ಚಿತ್ರಗಳಿಗಾಗಿ ಕಮಲ್ ಅವರಿಗೆ ನಾಲ್ಕು ಬಾರಿ ಶ್ರೇಷ್ಠ ನಟನೆಂಬ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.