ತಂದೆಯ ಚಿತಾಭಸ್ಮ ತ್ರಿವೇಣಿ ಸಂಗಮದಲ್ಲಿ ಅರ್ಪಿಸಿದ ಐಶ್ವರ್ಯಾ ರೈ
Team Udayavani, Aug 5, 2017, 6:56 PM IST
ಅಲಹಾಬಾದ್ : ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಿಂದು ಪತಿ ಅಭಿಷೇಕ್ ಬಚ್ಚನ್ ಅವರೊಡಗೂಡಿ ತನ್ನ ಅಗಲಿದ ತಂದೆಯ ಚಿತಾಭಸ್ಮವನ್ನು ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸಮರ್ಪಿಸಿದರು.
ಐಶ್ವರ್ಯಾ – ಅಭಿಷೇಕ್ ಜತೆಗೆ ಅವರ ಆರು ವರ್ಷ ಪ್ರಾಯದ ಮಗಳು ಆರಾಧ್ಯಾ ಕೂಡ ಇದ್ದಳು. ಮಾತ್ರವಲ್ಲದೆ ಐಶ್ವರ್ಯಾ ತಾಯಿ ವೃಂದಾ ರೈ ಮತ್ತು ಸಹೋದರ ಆದಿತ್ಯ ರೈ ಕೂಡ ಇದ್ದರು.
ಸಂಗಮಕ್ಕೆ ಬಂದೊಡನೆಯೇ ಬಚ್ಚನ್ ಕುಟುಂಬವನ್ನು ಕೆಲವು ಅರ್ಚಕರು, ಪೊಲೀಸರು ಬರಮಾಡಿಕೊಂಡು ಬೋಟಿನೆಡೆಗೆ ತಲುಪಿಸಿದರು.
ಸಂಗಮದ ಮಧ್ಯ ಭಾಗವನ್ನು ತಲುಪಿದಾಗ ಐಶ್ವರ್ಯಾ ತಮ್ಮ ತಂದೆ ಚಿತಾಭಸ್ಮವನ್ನು ಮಂತ್ರ ಪಠನಗಳ ನಡುವೆ ನದಿಗೆ ಅರ್ಪಿಸಿದರು. ಈ ವರ್ಷ ಮಾರ್ಚ್‌ನಲ್ಲಿ ಐಶ್ವರ್ಯಾ ತಂದೆ ಕೃಷ್ಣರಾಜ್ ರೈ ತೀರಿಕೊಂಡಿದ್ದರು.
ಹತ್ತು ವರ್ಷಗಳ ಹಿಂದೆ ಬಚ್ಚನ್ ಕುಟುಂಬದವರು ಇಲ್ಲಿಗೆ ಬಂದು ಅಮಿತಾಭ್ ಅವರ ತಾಯಿ ತೇಜೀ ಬಚ್ಚನ್ ಅವರ ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ಅರ್ಪಿಸಿದ್ದರು.
ಅಮಿತಾಭ್ ಅವರ ತಾಯಿ ತೇಜಿ ಅವರು ಪ್ರಸಿದ್ಧ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರನ್ನು ಇಲ್ಲಿಯೇ ಮದುವೆಯಾಗಿದ್ದರು ಮತ್ತು ಅಮಿತಾಭ್ ಅವರು ತಮ್ಮ ಬಾಲ್ಯದ ದಿನಗಳನು ಇಲ್ಲಿಯೇ ಕಳೆದಿದ್ದರು. 1950ರಲ್ಲಿ ಬಚ್ಚನ್ ಕುಟುಂಬ ಇಲ್ಲಿಂದ ದಿಲ್ಲಿಗೆ ವಲಸೆ ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.