Aishwarya Rajinikanth: 2ನೇ ಮದುವೆಗೆ ರೆಡಿಯಾದ್ರಾ ರಜಿನಿ ಪುತ್ರಿ? ಆಪ್ತರಿಂದ ಸ್ಪಷ್ಟನೆ
Team Udayavani, Jul 11, 2023, 11:25 AM IST
ಚೆನ್ನೈ: ರಜಿನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಸದ್ಯ ʼಲಾಲ್ ಸಲಾಂʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪುತ್ರಿ ನಿರ್ದೇಶನದ ಸಿನಿಮಾದಲ್ಲಿ ತಂದೆ ರಜಿನಿಕಾಂತ್ ಅವರು ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಸಿನಿಮಾದ ಪೋಸ್ಟರ್ ಹಾಗೂ ರಜಿನಿಕಾಂತ್ ಅವರ ಲುಕ್ ಸದ್ದು ಮಾಡಿದೆ. ಇತ್ತೀಚೆಗೆ ಐಶ್ವರ್ಯಾ ರಜನಿಕಾಂತ್ ಅವರು ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಆದರೆ ಇದೀಗ ಈ ಬಗ್ಗೆ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.
18 ವರ್ಷಗಳಿಂದ ಜೊತೆಗಿದ್ದ ಧನುಷ್ – ಐಶ್ವರ್ಯಾ ತಾವು ದೂರವಾಗುವುದಾಗಿ 2022 ರಲ್ಲಿ ಘೋಷಿಸಿದ್ದರು. ಆದರೆ ಅಧಿಕೃತವಾಗಿ ಇನ್ನು ಇಬ್ಬರು ವಿಚ್ಚೇದನವನ್ನು ಪಡೆದಿಲ್ಲ. ಮಕ್ಕಳಾದ ಲಿಂಗಾ ಹಾಗೂ ಯಾತ್ರಾ ಅವರೊಂದಿಗೆ ಇಬ್ಬರು ಸಮಯ ಕಳೆಯುತ್ತಿದ್ದಾರೆ. ಧನುಷ್ ಇತ್ತೀಚೆಗೆ ತಿರುಪತಿಗೆ ಮಕ್ಕಳೊಂದಿಗೆ ತೆರಳಿ ಕೇಶ ಮುಂಡನವನ್ನು ಮಾಡಿಸಿದ್ದರು. ಐಶ್ವರ್ಯಾ ಐಪಿಎಲ್ ಸಮಯದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದರು.
ಇದನ್ನೂ ಓದಿ: LGM: ನನ್ನನು CSK ತಂಡಕ್ಕೆ ಸೇರಿಸಿಕೊಳ್ಳಿ; ಯೋಗಿ ಬಾಬು ಮಾತಿಗೆ ಧೋನಿ ಕೊಟ್ಟ ರಿಪ್ಲೈ ವೈರಲ್
ಕಳೆದ ಕೆಲ ದಿನಗಳಿಂದ ಐಶ್ವರ್ಯಾ ಅವರು ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. “ಈ ಸುದ್ದಿಗಳೆಲ್ಲವೂ ಸುಳ್ಳು. ಇದರಲ್ಲಿ ಯಾವುದೇ ಸತ್ಯವಿಲ್ಲ. ಐಶ್ವರ್ಯಾ ಎರಡನೇ ಮದುವೆ ಆಗುತ್ತಿಲ್ಲ” ಎಂದು ಮೂಲಗಳು ʼಇಂಡಿಯಾ ಟುಡೇʼಗೆ ಹೇಳಿದೆ.
ʼಲಾಲ್ ಸಲಾಂʼನಲ್ಲಿ ರಜನಿಕಾಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಮೇ.8 ರಂದು ರಿವೀಲ್ ಆಗಿದ್ದು,ʼಮೊಯ್ದೀನ್ ಭಾಯ್ʼ ಸೂಪರ್ ಸ್ಟಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.