ತೆರೆ ಮೇಲೆ ಬರಲಿದೆ ಗಾಲ್ವಾನ್ ನಲ್ಲಿ ಮಡಿದ ವೀರ ಯೋಧರ ಕಥೆ
Team Udayavani, Jul 4, 2020, 11:50 AM IST
ಮುಂಬಯಿ : ಭಾರತ – ಚೀನ ನಡುವೆ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಮಡಿದ ಭಾರತೀಯ ಯೋಧರ ಕಥೆಯನ್ನು ತೆರೆ ಮೇಲೆ ತರುವ ಅಧಿಕೃತ ಘೋಷಣೆ ಮಾಡಿದ್ದಾರೆ ನಟ- ನಿರ್ಮಾಪಕ ಅಜಯ್ ದೇವಗನ್.
ಅಜಯ್ ದೇವಗನ್ ಈ ಹಿಂದೆ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ಭುಜ್ : ದಿ ಪ್ರೆಡ್ ಆಫ್ ಇಂಡಿಯಾ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಿದ್ದವಾಗಿರುವಾಗಲೇ ಅಜಯ್ ದೇವಗನ್ ಗಾಲ್ವಾನ್ ಕಣಿವೆಯಲ್ಲಿ ಮಡಿದ ಯೋಧರ ಪಯಣವನ್ನು ದೃಶ್ಯ ರೂಪದಲ್ಲಿ ತೆರೆ ಮೇಲೆ ತರುವ ಚಿಂತನೆ ನಡೆಸಿದ್ದಾರೆ.
ನೈಜ ಘಟನೆಯಧಾರಿತ ಚಿತ್ರದಲ್ಲಿ ಚೀನಾದ ಯೋಧರಿಂದ ಮಡಿದ 20 ಭಾರತೀಯ ಯೋಧರ ಕತೆಯಿರಲಿದೆ. ಕಲಾವಿದರು ಹಾಗೂ ಪಾತ್ರವರ್ಗದ ಆಯ್ಕೆ ಹಾಗೂ ಚಿತ್ರದ ಹೆಸರು ಇನ್ನಷ್ಟೇ ಅಂತಿಮವಾಗಬೇಕಿದೆ. ಚಿತ್ರದಲ್ಲಿ ಸ್ವತಃ ಅಜಯ್ ದೇವಗನ್ ಬಣ್ಣ ಹಚ್ಚಲಿದ್ದಾರ ಎನ್ನುವುದು ಸ್ಪಷ್ಟನೆ ಸಿಕ್ಕಿಲ್ಲ. ಚಿತ್ರವನ್ನು ಅಜಯ್ ದೇವಗನ್ ಫಿಲ್ಮ್ಸ್ ಹಾಗೂ ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ ಎಂದು ವರದಿಯಾಗಿದೆ.
ಜೂನ್ 15 ರಂದು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಗಡಿ ವಿಚಾರಕ್ಕೆ ಸಂಬಂದಿಸಿದಂತೆ ಮಾತುಕತೆಗೆ ತೆರಳಿದ್ದ ಭಾರತೀಯ ಸೈನಿಕರ ಮೇಲೆ ಚೀನ ಯೋಧರು ಏಕಾಏಕಿ ಕಲ್ಲು,ದೊಣ್ಣೆಗಳಿಂದ ದಾಳಿ ನಡೆಸಿದ್ದರು.ಇದರ ಪರಿಣಾಮವಾಗಿ 20 ಮಂದಿ ಯೋಧರು ಹುತಾತ್ಮರಾಗಿದ್ದು,ಹಲವು ಸೈನಿಕರು ಗಾಯಗೊಂಡಿದ್ದರು.
IT’S OFFICIAL… #AjayDevgn to make film on #GalwanValley clash… The film – not titled yet – will narrate the story of sacrifice of 20 #Indian army men, who fought the #Chinese army… Cast not finalized… Ajay Devgn FFilms and Select Media Holdings LLP will produce the film. pic.twitter.com/yaM6rPcK7Z
— taran adarsh (@taran_adarsh) July 4, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್
Saif Ali Khan Case: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಆರೋಪಿ; ಮುಂಬೈ ಡಿಸಿಪಿ ಹೇಳಿದ್ದೇನು?
Saif Ali Khan: ಸೈಫ್ ಅಲಿಖಾನ್‌ಗೆ ಚಾಕು ಇರಿತ; ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.