Ajith Kumar: “ಅಜಿತ್ ನನಗೆ ಮೋಸ ಮಾಡಿದ್ದಾರೆ..” ಥಲಾ ವಿರುದ್ಧ ಗುಡುಗಿದ ನಿರ್ಮಾಪಕ
Team Udayavani, Jul 11, 2023, 10:10 AM IST
ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಸದ್ಯ ಅಭಿಮಾನಿಗಳು ಅವರ ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
ಈ ನಡುವೆ ನಿರ್ಮಾಪಕರೊಬ್ಬರು ಅಜಿತ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಕಮಲ್ ಹಾಸನ್ ಅವರ ʼವೆಟ್ಟೈಯಾಡು ವಿಲಾಯಡುʼ ಮತ್ತುʼ ಇಂದ್ರಲೋಹತ್ತಿಲ್ ನಾ ಅಳಗಪ್ಪನ್ʼ ಚಿತ್ರಗಳನ್ನು ನಿರ್ಮಿಸಿರುವ ಮಾಣಿಕ್ಕಂ ನಾರಾಯಣನ್ ಅವರು ನಟ ಅಜಿತ್ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಕೆಲ ಆರೋಪಗಳನ್ನು ಮಾಡಿದ್ದಾರೆ.
“ಈ ಹಿಂದೆ ಅಜಿತ್ ಅವರು ನನ್ನ ಬಳಿ ಅವರ ತಂದೆ – ತಾಯಿಯನ್ನು ಮಲೇಷ್ಯಾಕ್ಕೆ ಕಳುಹಿಸಬೇಕೆಂದು ಹಣವನ್ನು ಪಡೆದುಕೊಂಡಿದ್ದರು. ಆ ವೇಳೆ ಅವರು ನನಗಾಗಿ ಸಿನಿಮಾ ಮಾಡುತ್ತೇನೆ. ಅಲ್ಲಿ ನಾವು ಸಂಭಾವನೆಯಲ್ಲಿ ಈ ಹಣವನ್ನು ಅಡೆಸ್ಟ್ ಮಾಡಿಕೊಳ್ಳುವ ಎಂದಿದ್ದರು. ಆದರೆ ಇಲ್ಲಿಯವರೆಗೆ ಅವರು ಹಣವನ್ನು ಹಿಂದಿರುಗಿಸಲಿಲ್ಲ ಹಾಗೂ ನನಗಾಗಿ ಚಿತ್ರವನ್ನೂ ಮಾಡಲಿಲ್ಲ. ಇಷ್ಟು ವರ್ಷಗಳಲ್ಲಿ ಅವನು ಇದರ ಬಗ್ಗೆ ಮಾತನಾಡಲಿಲ್ಲ, ಅವರು ತನ್ನನ್ನು ತಾನು ಸಂಭಾವಿತ ಎಂದು ಕರೆಯುತ್ತಾರೆ, ಆದರೆ ಅವರಲ್ಲ” ಎಂದು ನಟನ ವಿರುದ್ಧ ಮಾಧ್ಯಮಗಳ ಮುಂದೆಯೇ ಕಿಡಿಕಾಡಿದ್ದಾರೆ.
“ಅಜಿತ್ ಅವರ ಪತ್ನಿ ಶಾಲಿನಿ ಅವರು ನನಗೆ ಹಲವು ವರ್ಷಗಳ ಹಿಂದೆ ಉತ್ತಮ ಸ್ನೇಹಿತೆ ಆಗಿದ್ದರು. ಅವರು ಒಳ್ಳೆಯ ವ್ಯಕ್ತಿಯೂ ಹೌದು. ಅವರದು ಉತ್ತಮ ಕುಟುಂಬ. ಇಂದು ಅಜಿತ್ ಒಂದು ಸಿನಿಮಾಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇಂಥವರು ಜನರಿಗೆ ಮೋಸ ಮಾಡುವ ಅವಶ್ಯಕತೆ ಏನಿದೆ? ಎಎಮ್ ರತ್ನಂ ಅವರಂತಹ ಕೆಲವು ನಿರ್ಮಾಪಕರು ಅಜಿತ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಬಹಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಅಜಿತ್ ಎಂದಿಗೂ ಅವರ ಪರವಾಗಿ ನಿಂತಿಲ್ಲ” ಎಂದು ನಿರ್ಮಾಪಕರು ಹೇಳಿದರು.
ಮಾಣಿಕ್ಕಂ ನಾರಾಯಣನ್ ಅಜಿತ್ ಅವರ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇದೇ ವಿಚಾರವಾಗಿ ಅವರು ಆರೋಪಗಳನ್ನು ಮಾಡಿದ್ದಾರೆ. ಆದರೆ ಇದುವರೆಗೆ ನಟನಿಂದ ಯಾವ ಹೇಳಿಕೆಯೂ ಬಂದಿಲ್ಲ.
ನಟ ಅಜಿತ್ ಸದ್ಯ ಮಾಗಿಜ್ ತಿರುಮೇನಿಯ ಅವರ ʼವಿದಾ ಮುಯಾರ್ಚಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಿ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದ್ದು,ಪಾತ್ರ ವರ್ಗದ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹೊರ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.