![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 12, 2021, 5:58 PM IST
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ “ರಕ್ಷಾ ಬಂಧನ” ಸಿನಿಮಾದ ಚಿತ್ರೀಕರಣ ಸೋಮವಾರ ಮುಕ್ತಾಯವಾಗಿದೆ. ಶೂಟಿಂಗ್ ಮುಗಿಸಿದ ತಂಡ ಸಿನಿಮಾದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಖುಷಿ ಹಂಚಿಕೊಂಡಿದೆ.
ಶೂಟಿಂಗ್ ಮುಗಿಸಿದ ಖುಷಿಯಲ್ಲಿರುವ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ ನಿರ್ದೇಶಕ ಆನಂದ್ ರಾಯ್ ಜೊತೆಗಿನ ಕ್ಯಾಂಡಿಡ್ ಫೋಟೋ ಹಂಚಿಕೊಂಡಿದ್ದಾರೆ. ಅಕ್ಷಯ್ ಹಾಗೂ ಆನಂದ್ ರಾಯ್ ಖುಷಿಯಿಂದ ನಗುತ್ತಿರುವ ದೃಶ್ಯ ಫೋಟೋದಲ್ಲಿದೆ.
ಈ ಚಿತ್ರವು ಅಣ್ಣ ಮತ್ತು ತಂಗಿ ಬಾಂಧವ್ಯದ ಕಥಾಹಂದರ ಹೊಂದಿದ್ದು, ನಾಯಕಿಯಾಗಿ ಭೂಮಿ ಪಡ್ನೇಕರ್ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣವನ್ನು ಜೂನ್ (2021) ತಿಂಗಳಿನಲ್ಲಿ ಆರಂಭಿಸಿ, ದೆಹಲಿಯಲ್ಲಿ ಮುಕ್ತಾಯಗೊಳಿಸಿದ್ದಾರೆ.
Here’s to all I and @aanandlrai did throughout the shoot of #RakshaBandhan – laugh like there’s no tomorrow! Ironically, as we wrapped the film last night, there was a bittersweet tinge of sadness. Off to the next. New day, new roller coaster. pic.twitter.com/KIPO7whup4
— Akshay Kumar (@akshaykumar) October 12, 2021
“ರಕ್ಷಾ ಬಂಧನ” ಚಿತ್ರ ಕಥೆಯನ್ನು ಹಿಮಾಂಶು ಶರ್ಮಾ ಹಾಗೂ ಕನಿಕಾ ದಿಲೋನ್ ಬರೆದಿದ್ದಾರೆ. ಕಲರ್ ಎಲ್ಲೋ ಪ್ರೋಡಕ್ಷನ್, ಝೀ ಸ್ಟುಡಿಯೋ, ಆಲ್ಕಾ ಹಿರಾನಂದನಿ ಅವರು ಕೇಫ್ ಆಫ್ ಗುಡ್ ಫಿಲ್ಮ್ ಬ್ಯಾನರ್ ನಡಿಯಲ್ಲಿ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್‍ಗೆ ಕನ್ನಡದ ಬಾದ್ ಷಾ | ಸಲ್ಲು ಭಾಯ್‍ಗೆ ಕಿಚ್ಚ ಸುದೀಪ್ ಆ್ಯಕ್ಷನ್ ಕಟ್
ಇನ್ನು ಚಿತ್ರೀಕರಣ ಮುಗಿಸಿಕೊಂಡಿರುವ “ರಕ್ಷಾ ಬಂಧನ” ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಅಣಿಯಾಗಿದೆ. ಮುಂದಿನ ವರ್ಷ (2022) ಆಗಸ್ಟ್ 11 ಕ್ಕೆ ತೆರೆ ಮೇಲೆ ಸಿನಿಮಾ ತರುವುದಾಗಿ ಚಿತ್ರತಂಡ ಹೇಳಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.