ಟ್ರೆಂಡ್ ಆಯಿತು #BoycottBrahmastra: ಆಲಿಯಾ ಭಟ್ ವಿರುದ್ಧ ಆಕ್ರೋಶ; ನಟಿ ಹೇಳಿದ್ದೇನು?
Team Udayavani, Aug 23, 2022, 5:25 PM IST
ಮುಂಬಯಿ: ಇತ್ತೀಚಿಗೆ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ. ಸ್ಟಾರ್ ನಟರ ಚಿತ್ರಗಳಿಗೆ ಬಾಯ್ಕಾಟ್ ಬಿಸಿ ಜೋರಾಗಿ ತಟ್ಟುತ್ತಿದೆ. ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲೇ ಕೆಲ ಸ್ಟಾರ್ ಗಳು ನೀಡುವ ಹೇಳಿಕೆ ಅವರ ಮುಂದಿನ ಚಿತ್ರಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇದೀಗ ಈ ಸಾಲಿಗೆ ನಟಿ ಆಲಿಯಾ ಭಟ್ ಸೇರಿದ್ದಾರೆ.
ಆಮಿರ್ ಖಾನ್ – ಕರೀನಾ ಕಪೂರ್ ಅವರ ʼಲಾಲ್ ಸಿಂಗ್ ಚಡ್ಡಾʼ ಚಿತ್ರ ಬಾಯ್ಕಾಟ್ ಅಭಿಯಾನಕ್ಕೆ ತುತ್ತಾಯಿತು. ಚಿತ್ರ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಕರೀನಾ ಕಪೂರ್ ಅವರ ಒಂದು ಹೇಳಿಕೆ ಕೂಡ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಿತ್ತು. ಈಗ ಅದೇ ಮಾದರಿಯಲ್ಲಿ ನಟಿ ಆಲಿಯಾ ಭಟ್ ಹೇಳಿಕೆಯೊಂದನ್ನು ನೀಡಿದ್ದು, ಆಲಿಯಾ ವಿರುದ್ಧ ಸಿಕ್ಕಾಪಟ್ಟೆ ಕಾಮೆಂಟ್ಸ್ ಕೇಳಿ ಬರುತ್ತಿದೆ.
ಇತ್ತೀಚೆಗೆ “ಮಿಡ್ ಡೇ” ಗೆ ನೀಡಿದ ಸಂದರ್ಶನವೊಂದರಲ್ಲಿ ಆಲಿಯಾ ನೆಪೋಟಿಸಂ ಬಗ್ಗೆ ಮಾತಾನಾಡುತ್ತಾ “ನೀವು ನನ್ನನ್ನು ಇಷ್ಟಪಡದ್ದಿದರೆ, ನನ್ನನ್ನು ನೋಡಬೇಡಿ, ನಾನು ಅದಕ್ಕೇನು ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ. ಸದ್ಯ ಈ ಮಾತು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗಿದೆ.
ನೆಟ್ಟಿಗರು ಆಲಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಬಾಯ್ಕಾಟ್ ಅಭಿಯಾನ ಶುರು ಮಾಡುವ ಕುರಿತು ಚರ್ಚೆಗಳು ನಡೆದಿದೆ. ಅವರ ಮುಂದಿನ “ಬ್ರಹ್ಮಾಸ್ತ್ರ” ಚಿತ್ರ ಯಾರೂ ನೋಡಬೇಡಿ, #BoycottBrahmastra ಎಂದು ಟ್ವೀಟ್ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿರುವ “ಬ್ರಹ್ಮಾಸ್ತ್ರ” ಸೆ.9 ರಂದು ರಿಲೀಸ್ ಆಗಲಿದೆ. ರಣ್ಬೀರ್ ಕಪೂರ್, ಅಮಿತಾಭ್ ಬಚ್ಚನ್, ನಾಗಾರ್ಜುನ,ಮೌನಿ ರಾಯ್ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Alia Bhatt : If u don’t like me don’t watch me I can’t help it
We will all fulfill her wish too
Let’s make #Brahmastra 500Cr FLOPBUSTER
We are just tickets buyers for them. They only need your money not you. #BoycottBrahmastra #BoycottBollywood pic.twitter.com/IJ8u9NWxXy
— Nitika Singh??? (@itsNitikaSingh) August 22, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.