ಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ ಸೂಪರ್ ಸ್ಟಾರ್ : ವಿಡಿಯೋ
Team Udayavani, Sep 14, 2021, 4:57 PM IST
ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಸರಳತೆಯನ್ನು ತೋರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ರಸ್ತೆ ಬದಿಯ ಪುಟ್ಟ ಅಂಗಡಿಯೊಂದರಲ್ಲಿ ತಿಂಡಿ ಸೇವಿಸಿದ್ದಾರೆ. ಶೂಟಿಂಗ್ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಅವರು, ತಮ್ಮ ತಂಡದೊಂದಿಗೆ ಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ್ದಾರೆ. ಮಾಲೀಕ ಹಣ ಬೇಡವೆಂದರೂ ಒತ್ತಾಯದಿಂದ ಆತನ ಕೈಯಲ್ಲಿ ದುಡ್ಡು ಕೊಟ್ಟು ಕಾರು ಹತ್ತಿದ್ದಾರೆ ಅಲ್ಲು ಅರ್ಜುನ್.
ಅಲ್ಲು ಅರ್ಜುನ್ ಅವರ ಈ ವಿಡಿಯೋ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ 15 ವರ್ಷಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಈ ನಟನ ಸರಳೆಗೆ ಅಭಿಮಾನಿಗಳ ವರ್ಗ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.
Icon StAAr @alluarjun had breakfast at a road side tiffin centre near Gokavaram, AP.
Man of simplicity for a reason!#AlluArjun #ThaggedheLe #Pushpa pic.twitter.com/7XOjyvBTgO
— Manobala Vijayabalan (@ManobalaV) September 13, 2021
ಸದ್ಯ ಅಲ್ಲು ಅರ್ಜುನ್ ಅವರು ಪುಷ್ಪ ಸಿನಿಮಾದಲ್ಲಿ ಬ್ಯುಝಿಯಿದ್ದಾರೆ. ಸುಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರೂ ಪುಷ್ಪ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ.
ಇನ್ನು ಇತ್ತೀಚಿಗಷ್ಟೆ ಕನ್ನಡದ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರೂ ಸರಳತೆ ಮೆರೆದಿದ್ದರು. ಗುರಿಗಾಯಿಗಳ ಜೊತೆ ಕಂಬಳಿ ಮೇಲೆ ಕುಳಿತು ಊಟ ಮಾಡಿದ್ದರು ಅಪ್ಪು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.