Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ
Team Udayavani, Dec 8, 2023, 10:50 AM IST
ಹೈದರಾಬಾದ್: ಗೆಳತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ʼಪುಷ್ಪ-2ʼ ನಟನನ್ನು ಪೊಲೀಸರು ಬಂಧಿಸಿದ್ದು, ಈ ಕಾರಣದಿಂದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಜಗದೀಶ್ ಪ್ರತಾಪ್ ಭಂಡಾರಿ(30) ಬಂಧಿತ ನಟ. ʼಪುಷ್ಪʼ ಸಿನಿಮಾದಲ್ಲಿ ಕೇಶವ್ ಎನ್ನುವ ಪಾತ್ರವನ್ನು ಮಾಡಿ ಗುರುತಿಸಿಕೊಂಡಿರುವ ಜಗದೀಶ್ ಪ್ರತಾಪ್ ಅವರನ್ನು ಗೆಳತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲ ವರ್ಷಗಳಿಂದ ಕಿರುಚಿತ್ರಗಳಲ್ಲಿ ನಟಿಸುತ್ತಿದಾಕೆಯ ಜೊತೆ ಜಗದೀಶ್ ರಿಲೇಷನ್ ಶಿಪ್ ನಲಿದ್ದರು. ಆಕೆಯ ಕೆಲ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದುಕೊಂಡಿದ್ದ ಜಗದೀಶ್, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತು ಹೋಗಿದ್ದ ಯುವತಿ ನ.29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂದಿನಿಂದ ಜಗದೀಶ್ ತಲೆಮರೆಸಿಕೊಂಡಿದ್ದ.
ಇದನ್ನೂ ಓದಿ: Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ
ಈ ಸಂಬಂಧ ಯುವತಿಯ ಕುಟುಂಬದವರು ಜಗದೀಶ್ ವಿರುದ್ಧ ದೂರು ನೀಡಿದ್ದರು. ಅದರಂತೆ ಡಿ.6 ರಂದು ಪೊಲೀಸರು ಜಗದೀಶ್ ನನ್ನು ಸೆಕ್ಷನ್ 306ರ ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತ ನಟನ ಬಂಧನದಿಂದ ʼಪುಷ್ಪ-2ʼ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಶೆಡ್ಯೂಲ್ ಮೇಲೆ ಪರಿಣಾಮ ಬೀರಿದೆ. ಜಗದೀಶ್ ಅವರು ಬೇಲ್‌ನ ನಿಂದ ಹೊರಬರಲು ಚಿತ್ರತಂಡ ಕಾಯುತ್ತಿದೆ. ಹಾಕಿಕೊಂಡಿದ್ದ ಶೆಡ್ಯೂಲ್ ನ್ನು ಬದಲಾಯಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ʼಪುಷ್ಪʼ ಮಾತ್ರವಲ್ಲದೆ ಟಾಲಿವುಡ್ ನ ಕೆಲ ಸಿನಿಮಾಗಳಲ್ಲಿ ಜಗದೀಶ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.