![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jul 3, 2023, 10:38 AM IST
ಮುಂಬಯಿ: ಸನ್ನಿ ಡಿಯೋಲ್ – ಅಮೀಶಾ ಪಟೇಲ್ ಅಭಿನಯದ ʼಗದರ್ -2ʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. 2001 ರಲ್ಲಿ ಬಂದ ʼಗದರ್ʼ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು. ತಾರಾ ಸಿಂಗ್ ಹಾಗೂ ಸಕೀನಾ ಜೋಡಿಯನ್ನು ಹೊಸ ಅವತಾರದಲ್ಲಿ ನೋಡಲು ಫ್ಯಾನ್ಸ್ ಗಳು ಕಾಯುತ್ತಿದ್ದಾರೆ.
ತನ್ನ ಹಾಟ್ ನೋಟವುಳ್ಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಅಮೀಶಾ ಪಟೇಲ್ ʼಗದರ್ -2ʼ ಸಿನಿಮಾ ರಿಲೀಸ್ ನ ಸನಿಹದಲ್ಲೇ ಚಿತ್ರದ ನಿರ್ದೇಶಕ ಹಾಗೂ ಪ್ರೊಡಕ್ಷನ್ ತಂಡದ ಮೇಲೆ ಕೆಲವೊಂದು ಆರೋಪಗಳನ್ನು ಮಾಡಿರುವುದು ಸದ್ದು ಮಾಡಿದೆ.
ನಿರ್ದೇಶಕ ಅನಿಲ್ ಶರ್ಮಾ ಹಾಗೂ ಪ್ರೊಡಕ್ಷನ್ ತಂಡ ಮಾಡಿದ ತಪ್ಪು ನಿರ್ವಹಣೆಯಿಂದ ಹಲವರಿಗೆ ಸಮಸ್ಯೆಯಾಗಿದೆ ಎಂದು ಸರಣಿ ಟ್ವೀಟ್ ಮಾಡಿ ಹೇಳಿದ್ದಾರೆ.
ಮೇಕಪ್ ಕಲಾವಿದರು, ವಸ್ತ್ರ ವಿನ್ಯಾಸಕರು ಮತ್ತು ಅನೇಕ ತಂತ್ರಜ್ಞರು ಅನಿಲ್ ಶರ್ಮಾ ಪ್ರೊಡಕ್ಷನ್ಸ್‌ನಿಂದ ತಮ್ಮ ಸರಿಯಾದ ಸಂಭಾವನೆ ಮತ್ತು ಬಾಕಿಯನ್ನು ಪಡೆದಿಲ್ಲ. ಜೀ ಸ್ಟುಡಿಯೋಸ್ ವೃತ್ತಿಪರ ಕಂಪನಿಯಾಗಿರುವುದರಿಂದ ಎಲ್ಲಾ ಬಾಕಿಗಳನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಸತಿಯಿಂದ ಹಿಡಿದು, ಅಂತಿಮ ದಿನ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆಹಾರದ ಬಿಲ್‌ಗಳನ್ನು ಪಾವತಿಸದೆ ಬಿಡಲಾಯಿತು ಮತ್ತು ಕೆಲವು ಪಾತ್ರವರ್ಗ ಮತ್ತು ಸಿಬ್ಬಂದಿ ಸದಸ್ಯರಿಗೆ ಕಾರುಗಳನ್ನು ಒದಗಿಸಲಾಗಿಲ್ಲ, ಆದರೆ ಮತ್ತೊಮ್ಮೆ ಜೀ ಸ್ಟುಡಿಯೋಸ್ ಮಧ್ಯ ಪ್ರವೇಶಿಸಿ ಅನಿಲ್ ಶರ್ಮಾ ಪ್ರೊಡಕ್ಷನ್ಸ್‌ನಿಂದ ಉಂಟಾದ ಈ ಸಮಸ್ಯೆಗಳನ್ನು ಸರಿಪಡಿಸಿದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸಿದ್ದಕ್ಕಾಗಿ ನಟಿ ಜೀ ಸ್ಟುಡಿಯೋಸ್‌ಗೆ ಧನ್ಯವಾದ ಹೇಳಿದ್ದಾರೆ. ಶಾರಿಕ್ ಪಟೇಲ್, ನೀರಜ್ ಜೋಶಿ, ಕಬೀರ್ ಘೋಷ್ ಮತ್ತು ನಿಶ್ಚಿತ್ ಅವರಿಗೆ ವಿಶೇಷವಾಗಿ ಧನ್ಯವಾದವನ್ನು ನಟಿ ಹೇಳಿದ್ದಾರೆ.
ಟೀಸರ್ ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿರುವ ʼಗದರ್-2ʼ ಇದೇ ಆಗಸ್ಟ್ 11 ರಂದು ತೆರೆಗೆ ಬರಲಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.