ಅಭಿಮಾನಿಯ ಬಳಿ ಕ್ಷಮೆಯಾಚಿಸಿದ ಬಿಗ್ ಬಿ: ಕಾರಣವೇನು?
ನನಗೆ ಈ ಕವಿತೆಯ ಸಾಲುಗಳು ಯಾರದ್ದು ಎಂಬುವುದು ತಿಳಿದಿರಲಿಲ್ಲ
Team Udayavani, Dec 30, 2020, 8:08 PM IST
ಮುಂಬೈ: 2020 ರ ಸಾಲಿನಲ್ಲಿ ನಟ ಅಮಿತಾಬ್ ಬಚ್ಚನ್ ಬಾಲಿವುಡ್ ಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ ಇದೀಗ ತಮ್ಮ ಅಭಿಮಾನಿಯೊಬ್ಬರಿಗಾಗಿ ತಮ್ಮ ಟ್ಟೀಟರ್ ಖಾತೆಯಲ್ಲಿ ಕ್ಷಮೆಯಾಚಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಕೆಲದಿನಗಳ ಹಿಂದೆ ನಟ ಅಮಿತಾಬ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕವಿತೆಯ ಸಾಲುಗಳೊಂದನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಆ ಸಾಲುಗಳನ್ನು ಬರೆದ ಅವರ ಅಭಿಮಾನಿ “ನೀವು ನಾನು ರಚಿಸಿರುವ ಕವಿತೆಯ ಸಾಲುಗಳನ್ನು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ನನ್ನ ಪುಣ್ಯ. ಆದರೆ ಕವಿತೆಯ ಜೊತೆಗೆ ಅದನ್ನು ರಚಿಸಿರುವ ನನ್ನ ಹೆಸರನ್ನೂ ಸೇರಿಸಿದ್ದರೆ ಇನ್ನೂ ಸಂತೋಷವಾಗುತ್ತಿತ್ತು” ಎಂದಿದ್ದಾರೆ.
ಈ ಕುರಿತಾಗಿ ತಮ್ಮ ಟ್ಟೀಟರ್ ಖಾತೆಯಲ್ಲಿ ಕ್ಷಮೆಯಾಚಿಸಿರುವ ಬಿಗ್ ಬಿ ಈ ಕವಿತೆಯು ತಿಶಾ ಅಗರ್ ವಾಲ್ ಅವರಿಗೆ ಸೇರಿದ್ದು. ನನಗೆ ಈ ಕವಿತೆಯ ಸಾಲುಗಳು ಯಾರದ್ದು ಎಂಬುವುದು ತಿಳಿದಿರಲಿಲ್ಲ. ಕವಿತೆಯ ಸಾಲುಗಳು ನನಗೆ ತುಂಬಾ ಇಷ್ಟವಾಯಿತು ಹಾಗಾಗಿ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಕವಿತೆಯ ಕತೃವಿನ ಹೆಸರು ಸೇರಿಸದ ಕಾರಣ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಅಮಿತಾಬ್ ಈ ರೀತಿ ಕ್ಷಮೆಯಾಚಿಸಿರುವ ಗುಣಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹೊಸವರ್ಷಕ್ಕೆ ಅಮೆಜಾನ್ ನಿಂದ ‘ಮೆಗಾ ಸ್ಯಾಲರಿ ಡೇಸ್’ ಆಫರ್ ಮೇಳ
2020ರಲ್ಲಿ ನಟ ಅಮಿತಾಬ್ ತಮ್ಮ ಟ್ವೀಟರ್ ಖಾತೆಯಲ್ಲಿ ಸಕ್ರಿಯರಾಗಿದ್ದು 44.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿವಯರ ನಂತರ ಅತೀ ಹೆಚ್ಚು ಜನರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ಇವರು ಗುರುತಿಸಿಕೊಂಡಿದ್ದಾರೆ.
78 ವರ್ಷದ ಬಿಗ್ ಬಿ ಈಗಲೂ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ನಿರ್ದೇಶಕ ವಿಕಾಸ್ ಬಹ್ಲ್ ಅವರ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಹಿಂದಿಯ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.