ಭಾರತದ ಫೈನಲ್ ಪಂದ್ಯವನ್ನು ನೋಡಬೇಡಿ: Amitabhಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್; ಕಾರಣವೇನು?
Team Udayavani, Nov 16, 2023, 3:22 PM IST
ಮುಂಬಯಿ: ವಿಶ್ವಕಪ್‌ನ ಮಹತ್ವದ ಮೊದಲ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿ ಫೈನಲ್ ಗೇರಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಫೈನಲ್ ಗೆ ಯಾರು ಎದುರಾಳಿ ಆಗುತ್ತಾರೆ ಎನ್ನುವ ಕುತೂಹಲದಲ್ಲಿ ಕ್ರೀಡಾಭಿಮಾನಿಗಳಿದ್ದಾರೆ.
ಕೊಹ್ಲಿ, ಅಯ್ಯರ್ , ಗಿಲ್ ಅವರ ಅಮೋಘ ಬ್ಯಾಟಿಂಗ್ ಜೊತೆಗೆ ಶಮಿ ಅವರ ಶ್ರೇಷ್ಠಮಟ್ಟದ ಬೌಲಿಂಗ್ ದಾಳಿಯನ್ನು ಮೈದಾನದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ರಜಿನಿಕಾಂತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ.
ಭಾರತದ ಗೆಲುವಿಗೆ ನಟ ಅಮಿತಾಭ್ ಅವರು ಅಭಿನಂದಿಸಿದ್ದಾರೆ. ಆದರೆ ಈ ವೇಳೆ ಬಿಗ್ ಬಿ ಮಾಡಿದ ಒಂದು ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಿಂದ ಅಭಿಮಾನಿಗಳು ಅಮಿತಾಭ್ ಅವರಿಗೆ ನೀವು ಫೈನಲ್ ಪಂದ್ಯವನ್ನು ನೋಡಬೇಡಿ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಎಲ್ಲರ ಕೈಗೆ ಸಿಕ್ಕರೆ ಖಂಡಿತ… ರಶ್ಮಿಕಾ Deepfake ವಿಡಿಯೋ ಬಗ್ಗೆ ರಕ್ಷಿತ್ ಮಾತು
ಅಮಿತಾಭ್ ಮಾಡಿದ ಟ್ವೀಟ್ ನಲ್ಲೇನಿದೆ? : ಪಂದ್ಯ ಮುಗಿದ ಬಳಿಕ ಅಮಿತಾಭ್ ಬಚ್ಚನ್ ಅವರು, “ನಾವು ಯಾವಾಗ ಮ್ಯಾಚ್ ನೋಡುವುದಿಲ್ಲವೋ ಆ ದಿನವೇ ನಾವು ಪಂದ್ಯವನ್ನು ಗೆಲ್ಲುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನ್ನು ನೋಡಿದ ಅಭಿಮಾನಿಗಳು ಅಮಿತಾಭ್ ಅವರಿಗೆ “ನೀವು ಫೈನಲ್ ಪಂದ್ಯವನ್ನು ನೋಡಬೇಡಿ ಸರ್” ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
“ಸರ್ ನೀವು ಭಾನುವಾರ ಭಾರತದ ಫೈನಲ್ ಪಂದ್ಯವನ್ನು ನೋಡಬೇಡಿ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. “ನಮ್ಮಗಾಗಿ ಇದೊಂದು ತ್ಯಾಗ ಮಾಡಿ, ದಯವಿಟ್ಟು ಫೈನಲ್ ಪಂದ್ಯವನ್ನು ನೋಡಬೇಡಿ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಸದ್ಯ ಅಮಿತಾಭ್ ಮಾಡಿರುವ ಈ ಟ್ವೀಟ್ ವೈರಲ್ ಆಗಿದ್ದು, ಅಭಿಮಾನಿಗಳು ರಿಟ್ವೀಟ್ ಮಾಡಿ ಪಂದ್ಯ ನೋಡಬೇಡಿ ಎನ್ನುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.