81st Birthday; ಜಲ್ಸಾ ಹೊರಗೆ ಅಭಿಮಾನಿಗಳ ಭೇಟಿಯಾದ ಅಮಿತಾಭ್ ಬಚ್ಚನ್
ನಿಮ್ಮ ಆಶೀರ್ವಾದ ನನ್ನ ಅದೃಷ್ಟ!...
Team Udayavani, Oct 11, 2023, 4:00 PM IST
ಮುಂಬಯಿ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರು ಬುಧವಾರ (ಅ11) 81 ನೇ ಹುಟ್ಟುಹಬ್ಬ ಆಚಾರಿಸ್ಕೊಳ್ಳುತ್ತಿದ್ದು, ಅವರ ನಿವಾಸ ಜಲ್ಸಾದಿಂದ ನಡುರಾತ್ರಿ ಹೊರಬಂದು ಶುಭಕೋರಲು ಬಂದ ನೂರಾರು ಅಭಿಮಾನಿಗಳನ್ನು ಭೇಟಿಯಾಗಿ ಸಂಭ್ರಮಿಸಿದರು.
ಅಭಿಮಾನಿಗಳು ಮೇರುನಟನನ್ನು ನೋಡಿ ಶುಭ ಕೊರಳು ಕಾಯುತ್ತಿದ್ದರು, ಬಿಗ್ ಬಿ ಅಭಿಮಾನಿಗಳ ಆಸೆಗಳನ್ನು ಪೂರೈಸಿದರು. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಬಚ್ಚನ್ ಅವರು ಹಿತೈಷಿಗಳನ್ನು ಭೇಟಿಯಾಗಲು ಮಧ್ಯರಾತ್ರಿಯ ಸುಮಾರಿಗೆ ತನ್ನ ಜುಹು ನಿವಾಸಿಗಳನ್ನು ಹೊರಬರುತ್ತಿರುವುದನ್ನು ಕಾಣಬಹುದು.
#WATCH | Actor #AmitabhBachchan greets his fans who have gathered outside his residence ‘Jalsa’, in Mumbai, on his 81st birthday today. pic.twitter.com/UucoTQa7Ym
— ANI (@ANI) October 10, 2023
ಗುಲಾಬಿ ಮತ್ತು ಕಪ್ಪು ಬಣ್ಣದ ಟ್ರ್ಯಾಕ್‌ಸೂಟ್ ಧರಿಸಿದ್ದ ಮೆಗಾಸ್ಟಾರ್, ಅಭಿಮಾನಿಗಳತ್ತ ಕೈ ಬೀಸಿದರು ಮತ್ತು ಅವರ ಪ್ರೀತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ಕೈಗಳನ್ನು ಮುಗಿದರು. ಈ ವೇಳೆ ಮೊಮ್ಮಗಳು ಆರಾಧ್ಯ, ನವ್ಯಾ ನವೇಲಿ ನಂದಾ ಮತ್ತು ಸೊಸೆ ಐಶ್ವರ್ಯಾ ಬಚ್ಚನ್ ಸೇರಿದಂತೆ ಅವರ ಕುಟುಂಬ ಸದಸ್ಯರು ನಿವಾಸದ ಪ್ರವೇಶ ದ್ವಾರದಲ್ಲಿ ನಿಂತಿದ್ದರು.
ಅಮಿತಾಭ್ ಅವರು ಅಧಿಕೃತ ಬ್ಲಾಗ್‌ನಲ್ಲಿ ”ನಿಮ್ಮ ಆಶೀರ್ವಾದ ನನ್ನ ಅದೃಷ್ಟ!” ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಶ್ವೇತಾ ಬಚ್ಚನ್ ಅವರ ಪುತ್ರಿ ನವ್ಯಾ, ಇನ್ಸ್ಟಾಗ್ರಾಮ್ ಸ್ಟೋರೀಸ್ ಪೋಸ್ಟ್ ನಲ್ಲಿ ತನ್ನ ಅಜ್ಜನಿಗೆ ವಿಶ್ ಮಾಡಿದ್ದಾರೆ. ಆರಾಧ್ಯ, ಸಹೋದರ ಅಗಸ್ತ್ಯ ಮತ್ತು ಅಜ್ಜಿ ಜಯಾ ಬಚ್ಚನ್ ಜತೆಗಿನ ಫೋಟೋವನ್ನು ಹಂಚಿಕೊಂಡು “ಹುಟ್ಟುಹಬ್ಬದ ಶುಭಾಶಯಗಳು ನಾನಾ” ಎಂದು ಬರೆದಿದ್ದಾರೆ.
ಉತ್ಸಾಹ ತುಂಬಿದ ಅಮಿತಾಭ್ ಬಚ್ಚನ್ ಮುಂದಿನ ಚಲನಚಿತ್ರ ನಿರ್ಮಾಪಕ ನಾಗ್ ಅಶ್ವಿನ್ ಅವರ “ಕಲ್ಕಿ 2898 AD” ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಹ-ನಟಿಸಿದ್ದಾರೆ, ಹಾಗೆಯೇ ರಿಭು ದಾಸ್ ಗುಪ್ತಾ ಅವರ “ಸೆಕ್ಷನ್ 84″ನಲ್ಲೂ ನಟಿಸಲಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಟಿಜೆ ಜ್ಞಾನವೇಲ್ ಅವರ ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಟಿಸುತ್ತಿರುವ ಹೆಸರಿಡದ ಚಲನಚಿತ್ರದಲ್ಲಿ ನಟಿಸುವುದಾಗಿ ತಿಳಿದುಬಂದಿದ್ದು, ಚಿತ್ರ ಭಾರೀ ಕುತೂಹಲ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.